ಆಹಾ.. ಇಷ್ಟೊಂದು ಕ್ಲೋಸ್​ ಆದ ತನಿಶಾ-ವರ್ತೂರು ಸಂತೋಷ್​; ಗುಸುಗುಸು ಮಾತು ಶುರು

|

Updated on: Nov 02, 2023 | 6:30 PM

ತನಿಶಾ ಕುಪ್ಪಂಡ ಮತ್ತು ವರ್ತೂರು ಸಂತೋಷ್​ ಅವರು ಒಂದೇ ತಂಡದಲ್ಲಿ ಇದ್ದಾರೆ. ಈ ವೇಳೆ ಅವರಿಬ್ಬರ ನಡುವೆ ಆತ್ಮೀಯತೆ ಹೆಚ್ಚಿದೆ. ಅವರಿಬ್ಬರು ಇಷ್ಟು ಸಲುಗೆಯಿಂದ ನಡೆದುಕೊಂಡಿದ್ದು ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ತುಕಾಲಿ ಸಂತು, ವಿನಯ್​ ಗೌಡ ಮುಂತಾದವರು ಈ ಬಗ್ಗೆ ಈಗಾಗಲೇ ಗುಸುಗುಸು ಮಾತನಾಡಿಕೊಳ್ಳಲು ಶುರುಮಾಡಿದ್ದಾರೆ.

ಬಿಗ್​ ಬಾಸ್​ ಮನೆ ಎಂದರೆ ಅಲ್ಲಿ ವಿವಾದ ಮಾತ್ರವಲ್ಲ, ಸಖತ್​ ಫನ್​ ಕೂಡ ಇರುತ್ತದೆ. ವಿವಿಧ ಟಾಸ್ಕ್​ ಸಲುವಾಗಿ ಎದುರಾಗುವ ಕಿರಿಕ್​ಗಳ ನಡುವೆಯೂ ಮೋಜು ಮಸ್ತಿಯ ಪ್ರಸಂಗಗಳ ಜರುಗುತ್ತವೆ. ಆರಂಭದಲ್ಲಿ ದೂರ ದೂರ ಇದ್ದವರು ನಂತರದಲ್ಲಿ ಬಹಳ ಆಪ್ತವಾದ ಉದಾಹರಣೆ ಇದೆ. ಸದ್ಯಕ್ಕೆ ಬಿಗ್​ ಬಾಸ್​ (Bigg Boss Kannada Season 10) ಮನೆಯಲ್ಲಿ ಹಳ್ಳಿ ಟಾಸ್ಕ್​ ನಡೆಯುತ್ತಿದೆ. ಎರಡು ಗುಂಪುಗಳ ನಡುವೆ ಹಣಾಹಣಿ ಶುರುವಾಗಿದೆ. ತನಿಶಾ ಕುಪ್ಪಂಡ (Tanisha Kuppanda) ಮತ್ತು ವರ್ತೂರು ಸಂತೋಷ್​ (Varthur Santhosh) ಅವರು ಒಂದು ತಂಡದಲ್ಲಿ ಇದ್ದಾರೆ. ಈ ವೇಳೆ ಅವರಿಬ್ಬರ ನಡುವೆ ಆತ್ಮೀಯತೆ ಹೆಚ್ಚಿದೆ. ಅವರಿಬ್ಬರು ಇಷ್ಟು ಸಲುಗೆಯಿಂದ ನಡೆದುಕೊಂಡಿದ್ದು ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ತುಕಾಲಿ ಸಂತು ಮುಂತಾದವರು ಈ ಬಗ್ಗೆ ಈಗಾಗಲೇ ಗುಸುಗುಸು ಮಾತನಾಡಿಕೊಳ್ಳಲು ಶುರುಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ಇಲ್ಲಿದೆ. ಜಿಯೋ ಸಿನಿಮಾದಲ್ಲಿ ದಿನದ 24 ಗಂಟೆಯೂ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋ ನೋಡಬಹುದು. ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಪ್ರತಿ ರಾತ್ರಿ 9.30ಕ್ಕೆ ಎಪಿಸೋಡ್​ ಪ್ರಸಾರ ಆಗುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.