ತನಿಶಾ ಕಳಪೆ ಎಂಬುದೇ ಇಡೀ ದೊಡ್ಮನೆಯ ಅಭಿಪ್ರಾಯ; ಅಳುತ್ತಾ ಜೈಲಿಗೆ ಹೋದ ನಟಿ

Updated on: Nov 17, 2023 | 5:08 PM

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋನ 6ನೇ ವಾರದಲ್ಲಿ ಎಲ್ಲರೂ ತನಿಶಾ ಕುಪ್ಪಂಡಾ ಅವರಿಗೆ ಕಳಪೆ ಹಣೆಪಟ್ಟಿ ನೀಡಿದ್ದಾರೆ. ಇದರಿಂದ ತನಿಶಾಗೆ ಶಾಕ್​ ಆಗಿದೆ. ಬಿಗ್​ ಬಾಸ್​ ನಿಯಮದ ಪ್ರಕಾರ ಕಳಪೆ ಎನಿಸಿಕೊಂಡವರು ಜೈಲುವಾಸ ಅನುಭವಿಸಬೇಕು. ತನಿಶಾ ಕೂಡ ಈಗ ಜೈಲು ಸೇರಿದ್ದಾರೆ. ಅಲ್ಲಿ ಅವರು ಕಣ್ಣೀರು ಹಾಕಿದ್ದಾರೆ.

ಪ್ರತಿ ಬಾರಿಯೂ ಕಳಪೆ ಯಾರು ಮತ್ತು ಉತ್ತಮ ಯಾರು ಎಂಬುದರ ಆಯ್ಕೆ ನಡೆಯುತ್ತದೆ. 6ನೇ ವಾರದಲ್ಲಿ ನಟಿ ತನಿಶಾ ಕುಪ್ಪಂಡ (Tanisha Kuppanda) ಅವರು ಕಳಪೆ ಪಟ್ಟ ಪಡೆದುಕೊಂಡಿದ್ದಾರೆ. ಕಳಪೆ ಮತ್ತು ಉತ್ತಮ ಯಾರೆಂಬುದನ್ನು ಆಯ್ಕೆ ಮಾಡುವಾಗ ಸಾಮಾನ್ಯವಾಗಿ ಬೇರೆ ಬೇರೆ ಅಭಿಪ್ರಾಯಗಳು ಹೊರಬರುತ್ತವೆ. ಒಬ್ಬೊಬ್ಬರು ಒಂದೊಂದು ಹೆಸರನ್ನು ತೆಗೆದುಕೊಳ್ಳುತ್ತಾರೆ. ಆದರೆ ಈ ವಾರದಲ್ಲಿ ಎಲ್ಲರೂ ತನಿಶಾ ಕುಪ್ಪಂಡಾ ಅವರಿಗೆ ಕಳಪೆ ಹಣೆಪಟ್ಟಿ ನೀಡಿದ್ದಾರೆ. ಇದರಿಂದ ತನಿಶಾಗೆ ಶಾಕ್​ ಆಗಿದೆ. ಬಿಗ್​ ಬಾಸ್​ (Bigg Boss Kannada) ನಿಯಮದ ಪ್ರಕಾರ ಕಳಪೆ ಎನಿಸಿಕೊಂಡವರು ಜೈಲುವಾಸ ಅನುಭವಿಸಬೇಕು. ತನಿಶಾ ಕೂಡ ಈಗ ಜೈಲು ಸೇರಿದ್ದಾರೆ. ಅಲ್ಲಿ ಅವರು ಕಣ್ಣೀರು ಹಾಕಿದ್ದಾರೆ. ‘ಕಲರ್ಸ್​ ಕನ್ನಡ’ದಲ್ಲಿ ಈ ಎಪಿಸೋಡ್​ ನ.17ರ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ. ದಿನದ 24 ಗಂಟೆಯೂ ‘ಜಿಯೋ ಸಿನಿಮಾ’ ಮೂಲಕ ಲೈವ್​ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More