ನನ್ನ ಹೆಸರೇ ಬೆಂಕಿ, ಹಾಟ್ ಆಗಿ ಇರಲೇ ಬೇಕಲ್ಲ: ತನಿಷಾ ಕುಪ್ಪಂಡ

|

Updated on: Jul 04, 2024 | 1:34 PM

ಕಳೆದ ಬಿಗ್​ಬಾಸ್​ ಸೀಸನ್​ ಮೂಲಕ ಸಖತ್ ಗಮನ ಸೆಳೆದಿರುವ ತನಿಷಾ ಕುಪ್ಪಂಡ ಇದೀಗ ‘ಪೆನ್​ಡ್ರೈವ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಂದರ್ಭದಲ್ಲಿ ಸಿನಿಮಾ, ಹಾಸನ ಪ್ರಕರಣ, ದರ್ಶನ್ ಪ್ರಕರಣ ಇನ್ನಿತರೆ ವಿಚಾರಗಳ ಬಗ್ಗೆ ತನಿಷಾ ಮಾತನಾಡಿದ್ದಾರೆ.

ಕಳೆದ ಬಿಗ್​ಬಾಸ್​ ಸೀಸನ್​ನಲ್ಲಿ ಗಮನ ಸೆಳೆದ ನಟಿ ತಮಿಷಾ ಕುಪ್ಪಂಡ ಬಿಗ್​ಬಾಸ್​ನಿಂದ ಬಂದ ಬಳಿಕ ಕೆಲವು ಉದ್ಯಮಗಳಲ್ಲಿ ಹಣ ಹೂಡಿರುವ ಜೊತೆಗೆ ಸಿನಿಮಾಗಳಲ್ಲಿಯೂ ಸಖತ್ ಬ್ಯುಸಿಯಾಗಿದ್ದಾರೆ. ದೇಶದಾದ್ಯಂತ ಸುದ್ದಿ ಮಾಡಿರುವ ಹಾಸನದ ಪೆನ್​ಡ್ರೈವ್ ಪ್ರಕರಣದಿಂದ ಸ್ಪೂರ್ತಿಗೊಂಡು ‘ಪೆನ್​ಡ್ರೈವ್’ ಹೆಸರಿನ ಸಿನಿಮಾ ಕನ್ನಡದಲ್ಲಿ ನಿರ್ಮಾಣವಾಗುತ್ತಿದ್ದು ನಟಿ ತನಿಷಾ ಕುಪ್ಪಂಡ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಪೆನ್​ಡ್ರೈವ್’ ಸಿನಿಮಾ, ಹಾಸನ ಪ್ರಕರಣ, ನಟ ದರ್ಶನ್ ಪ್ರಕರಣ ಇನ್ನಿತರೆ ವಿಷಯಗಳ ಬಗ್ಗೆ ನಟಿ ತನಿಷಾ ಕುಪ್ಪಂಡ ಟಿವಿ9 ಜೊತೆ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ