AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ಕಿ ಹರಿಯುತ್ತಿರುವ ಚಂಡಿಕಾ ಹೊಳೆಯಲ್ಲಿ ಸಿಲುಕಿದ ಬಸ್, ಸ್ಥಳೀಯರ ನೆರವಿನಿಂದ ಸುರಕ್ಷಿರ ಸ್ಥಳ ತಲುಪಿದ ಪ್ರಯಾಣಿಕರು

ಉಕ್ಕಿ ಹರಿಯುತ್ತಿರುವ ಚಂಡಿಕಾ ಹೊಳೆಯಲ್ಲಿ ಸಿಲುಕಿದ ಬಸ್, ಸ್ಥಳೀಯರ ನೆರವಿನಿಂದ ಸುರಕ್ಷಿರ ಸ್ಥಳ ತಲುಪಿದ ಪ್ರಯಾಣಿಕರು

ಅರುಣ್​ ಕುಮಾರ್​ ಬೆಳ್ಳಿ
|

Updated on:Jul 04, 2024 | 5:50 PM

Share

ಪ್ರಯಾಣಿಕರಿಂದ ಭೇಷ್ ಅನಿಸಿಕೊಳ್ಳಲು ಕೆಲ ಬಸ್ ಚಾಲಕರು ಹೀಗೆ ಅಪಾಯಕಾರಿ ರಿಸ್ಕ್ ತೆಗೆದುಕೊಳ್ಳುತ್ತಾರೆ. ಅಥವಾ ಬಸ್ ನಲ್ಲಿರುವ ಪ್ರಯಾನಿಕನೊಬ್ಬನಿಗೆ (ಅಥವಾ ಹಲವರಿಗೆ) ಅರ್ಜೆಂಟಾಗಿ ತಮ್ಮ ಡೆಸ್ಟಿನೇಶನ್ ತಲುಬೇಕಿರುತ್ತದೆ. ಅಗ ಅವರು ಬಸ್ ಚಾಲಕನಿಗೆ ಏನೂ ಅಗಲ್ಲ, ನಾವೆಲ್ಲ ಇದ್ದೀವಲ್ಲ? ಹೋಗ್ತಾ ಇರು ಅಂತ ಪುಸಲಾಯಿಸುತ್ತಾರೆ. ಇಲ್ಲಿರುವ ದೃಶ್ಯ ಇಂಥ ಮೂರ್ಖತನಕ್ಕೆ ಸಾಕ್ಷಿ.

ಕಾರವಾರ: ಇಂಥ ಹುಚ್ಚು ಸಾಹಸಗಳನ್ನೇ ನಾವು ಬೇಡ ಅನ್ನೋದು. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು ಜನಜೀವನದ ಜೊತೆ ರಸ್ತೆ ಸಂಚಾರವೂ ಅಸ್ತವ್ಯಸ್ತಗೊಂಡಿದೆ. ದೃಶ್ಯಗಳಲ್ಲಿ ನೀವು ನೋಡುವ ಹಾಗೆ ಕುಮಟಾ ತಾಲ್ಲೂಕಿನ ಕಟಗಾಲ ಗ್ರಾಮದ ಬಳಿ ಉಕ್ಕಿ ಹರಿಯುತ್ತಿರುವ ಚಂಡಿಕಾ ಹೊಳೆಯಲ್ಲಿ ಪ್ರಯಾಣಿಕರನ್ನು ಹೊತ್ತ ಬಸ್ಸೊಂದು ಸಿಲುಕಿಕೊಂಡಿದೆ. ಇದು ಡ್ರೈವರ್ ನ ಮೂರ್ಖತನವಲ್ಲದೆ ಮತ್ತೇನೂ ಅಲ್ಲ. ಅವನು ತನ್ನ ಜೊತೆ ಪ್ರಯಾಣಿಕರ ಜೀವವನ್ನೂ ಅಪಾಯಕ್ಕೊಡ್ಡಿದ್ದಾನೆ. ರಭಸವಾಗಿ ಹರಿಯುತ್ತಿರುವ ಹೊಳೆಯಲ್ಲಿ ಬಸ್ ನಿಶ್ಚಲವಾಗಿ ನಿಂತುಬಿಟ್ಟಿದೆ. ಸ್ಥಳೀಯರು ಒಬ್ಬರಿಗೊಬ್ಬರು ಆಸರೆಯಾಗಿಸಿಕೊಂಡು ನಿಧಾನವಾಗಿ ಬಸ್ ಬಳಿ ನಡೆದು ಹೋಗಿ ಅದರಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕರೆತರುತ್ತಿದ್ದಾರೆ. ನಮ್ಮ ಕಾರವಾರ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಸತತವಾಗಿ ಸುರಿಯುತ್ತಿರುವ ಮಳೆಯ ಕಾರಣ ಕುಮಟಾ-ಶಿರಸಿ ನಡುವಿನ ರಾಷ್ಟ್ರೀಯ ಹೆದ್ದಾರಿ 766ಇ ಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ವಾಹನಗಳು ರಸ್ತೆಯ ಮೇಲೆ ನಿಶ್ಚಲ ಸ್ಥಿತಿಯಲ್ಲಿ ನಿಂತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಳೆಯ ಅಬ್ಬರಕ್ಕೆ ಇತಿಹಾಸ ಪ್ರಸಿದ್ಧ ಮಧೂರು ದೇಗುಲ ಜಲಾವೃತ; ವಿಡಿಯೋ ನೋಡಿ

Published on: Jul 04, 2024 12:41 PM