ದರ್ಶನ್ಗೆ ಜೈಲಲ್ಲೇ ಮದುವೆ ಆಮಂತ್ರಣ ಕೊಟ್ಟ ನಿರ್ದೇಶಕ ತರುಣ್ ಸುಧೀರ್
ಜೈಲನಲ್ಲಿರೋ ದರ್ಶನ್ನ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್ ಭೇಟಿ ಮಾಡಿದ್ದಾರೆ. ದರ್ಶನ್ ಜೈಲು ಸೇರಿದ ನಂತರ ಮೊದಲ ಬಾರಿಗೆ ಅವರನ್ನು ತರುಣ್ ಭೇಟಿ ಮಾಡಿದ್ದಾರೆ. ಈ ವೇಳೆ ಅವರು ಮದುವೆ ಆಮಂತ್ರಣವನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಅವರು ಅರೆಸ್ಟ್ ಆಗಿದ್ದಾರೆ. ಸದ್ಯ ಅವರು ಜೈಲಿನಲ್ಲಿ ಇದ್ದಾರೆ. ಅವರನ್ನು ನೋಡಲು ಅನೇಕ ಸೆಲೆಬ್ರಿಟಿಗಳು ಬರುತ್ತಿದ್ದಾರೆ. ಕೆಲವರಿಗೆ ಅವರನ್ನು ನೋಡೋಕೆ ಅವಕಾಶ ಸಿಗುತ್ತಿದೆ. ಇನ್ನೂ ಕೆಲವರು ಕಾದು ಹಾಗೆಯೇ ಹೋಗುತ್ತಿದ್ದಾರೆ. ಈಗ ಜೈಲನಲ್ಲಿರೋ ದರ್ಶನ್ನ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್ ಭೇಟಿ ಮಾಡಿದ್ದಾರೆ. ದರ್ಶನ್ ಜೈಲು ಸೇರಿದ ನಂತರ ಮೊದಲ ಬಾರಿಗೆ ಅವರನ್ನು ತರುಣ್ ಭೇಟಿ ಮಾಡಿದ್ದಾರೆ. ತರುಣ್ ಸುಧೀರ್ ಅವರು ಆಗಸ್ಟ್ 10-11ರಂದು ಮದುವೆ ಆಗಲಿದ್ದಾರೆ. ನಟಿ ಸೋನಲ್ ಮೊಂತೇರೋ ಅವರನ್ನು ವರಿಸಲಿದ್ದಾರೆ. ತಮ್ಮ ಮದುವೆ ಆಮಂತ್ರಣವನ್ನು ದರ್ಶನ್ಗೆ ತರುಣ್ ನೀಡಿದ್ದಾರೆ ಎನ್ನಲಾಗಿದೆ. ದರ್ಶನ್ ಜೈಲಿನಲ್ಲಿ ಇರುವ ಕಾರಣ ಮದುವೆಯನ್ನು ಮುಂದಕ್ಕೆ ಹಾಕಲು ತರುಣ್ ಯೋಚಿಸಿದ್ದರು. ಆದರೆ, ಹಿರಿಯರು ಹಾಗೂ ದರ್ಶನ್ ಸಲಹೆ ಮೇರೆಗೆ ಮದುವೆಗೆ ತರುಣ್ ಮುಂದಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos