TATA Apple iPhone: ಕರ್ನಾಟಕದಲ್ಲಿ ಆ್ಯಪಲ್ ಐಫೋನ್ ತಯಾರಿಸಲು ಮುಂದಾದ ಟಾಟಾ ಕಂಪನಿ

|

Updated on: Jul 13, 2023 | 9:30 AM

ಎಲ್ಲವೂ ಅಂದುಕೊಂಡಂತೇ ನಡೆದರೆ, ಆ್ಯಪಲ್ ಐಫೋನ್ ಅನ್ನು ತಯಾರಿಸುವ ಪ್ರಮುಖ ಮತ್ತು ಕೆಲವೇ ಕಂಪನಿಗಳಲ್ಲಿ ಟಾಟಾ ಕೂಡ ಒಂದಾಗಲಿದೆ. ಜತೆಗೇ, ಕರ್ನಾಟಕದಲ್ಲೇ ಮೊದಲ ಘಟಕವನ್ನು ಟಾಟಾ ತನ್ನದಾಗಿಸಿಕೊಂಡು, ಆ್ಯಪಲ್ ಐಫೋನ್ ತಯಾರಿಸಲಿದೆ.

ಎಲ್ಲವೂ ಅಂದುಕೊಂಡಂತೇ ನಡೆದರೆ, ಆ್ಯಪಲ್ ಐಫೋನ್ ಅನ್ನು ತಯಾರಿಸುವ ಪ್ರಮುಖ ಮತ್ತು ಕೆಲವೇ ಕಂಪನಿಗಳಲ್ಲಿ ಟಾಟಾ ಕೂಡ ಒಂದಾಗಲಿದೆ. ಜತೆಗೇ, ಕರ್ನಾಟಕದಲ್ಲೇ ಮೊದಲ ಘಟಕವನ್ನು ಟಾಟಾ ತನ್ನದಾಗಿಸಿಕೊಂಡು, ಆ್ಯಪಲ್ ಐಫೋನ್ ತಯಾರಿಸಲಿದೆ. ಕೋಲಾರದಲ್ಲಿರುವ ವಿಸ್ಟ್ರಾನ್ ಕಂಪನಿಯ ಐಫೋನ್ ಅಸೆಂಬ್ಲಿಂಗ್ ಘಟಕವನ್ನು ಖರೀದಿಸಲಿರುವ ಟಾಟಾ ಸಂಸ್ಥೆ, ಮುಂದಿನ ತಿಂಗಳೇ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ. ಅಂದಾಜು ₹5,000 ಕೋಟಿ ಮೌಲ್ಯದ ಈ ಘಟಕದಲ್ಲಿ 10,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದು ಐಫೋನ್ 14 ಅಸೆಂಬ್ಲಿಂಗ್ ಇಲ್ಲಿ ನಡೆಯುತ್ತದೆ. ಈ ಘಟಕವನ್ನು ಖರೀದಿಸಿದ ಬಳಿಕ ಟಾಟಾ ಸಂಸ್ಥೆ ಐಫೋನ್ ತಯಾರಿಕೆಯ ಕೆಲಸ ಮುಂದುವರಿಸಿಕೊಂಡು ಹೋಗಲಿದೆ. ಈ ಒಪ್ಪಂದ ಯಶಸ್ವಿಯಾದರೆ ಐಫೋನ್ ತಯಾರಿಸುವ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆ ಟಾಟಾ ಸಂಸ್ಥೆಯದ್ದಾಗುತ್ತದೆ.