ಗೆಲಾಕ್ಸಿ ಎ73 ಸರಣಿ ಫೋನ್​​ಗಳ ಬಿಡುಗಡೆಗೆ ಸಿದ್ಧತೆ ನಡೆಸಿರುವ ಸ್ಯಾಮ್ಸಂಗ್, ಇವು 108 ಎಮ್ ಪಿ ಮೇನ್ ಕೆಮೆರಾ ಹೊಂದಿರಲಿವೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 23, 2021 | 5:47 PM

ಸ್ಯಾಮ್‌ಸಂಗ್ ಗ್ಯಾಲಕ್ಸಿ A73 ಪಂಚ್-ಹೋಲ್ ಕಟ್-ಔಟ್, ಸ್ಲಿಮ್ ಬೆಜೆಲ್‌ಗಳು ಮತ್ತು ಬಯೋಮೆಟ್ರಿಕ್, ಡಾಟಾದ ಸುರಕ್ಷಿತ ದೃಢಿಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಒಳಗೊಂಡಿರುತ್ತದೆ.

ದೈತ್ಯ ಟೆಕ್ ಸಂಸ್ಥೆಯೆನಿಸಿಕೊಂಡಿರುವ ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಹೊಸ ಎ-ಸರಣಿಯ ಫೋನ್ ಗೆಲಾಕ್ಸಿ ಎ73 ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಲೀಕ್ ಆಗಿರುವ ಮಾಹಿತಿ ಮೂಲಕ ನಮಗೆ ಗೊತ್ತಾಗಿರುವ ಸಂಗತಿಯೇನೆಂದರೆ ಈ ಸೆಟ್ 108 ಮೆಗಾ ಪಿಕ್ಸೆಲ್ ಕೆಮೆರಾದೊಂದಿಗೆ ಬರಲಿದೆ. ಹಾಗೆಯೇ ಈ ಫೋನು 6.7 ಇಂಚಿನ ಸ್ಕ್ರೀನ್, ಸ್ನ್ಯಾಪ್ಡ್ರಾಗನ್ 750ಜಿ ಚಿಪ್ಸೆಟ್ ಹಾಗೂ 5,000ಎಮ್ಎಎಚ್ ಫಾಸ್ಟ್-ಚಾರ್ಜಿಂಗ್ ಬೆಂಬಲಿತ ಬ್ಯಾಟರಿಯೊಂದಿಗೆ ಲಭ್ಯವಾಗಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A73 ಪಂಚ್-ಹೋಲ್ ಕಟ್-ಔಟ್, ಸ್ಲಿಮ್ ಬೆಜೆಲ್‌ಗಳು ಮತ್ತು ಬಯೋಮೆಟ್ರಿಕ್, ಡಾಟಾದ ಸುರಕ್ಷಿತ ದೃಢಿಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಒಳಗೊಂಡಿರುತ್ತದೆ.

ಹಿಂಭಾಗದಲ್ಲಿ, ಇದು ಕ್ವಾಡ್ ಕೆಮೆರಾ ಯುನಿಟ್ ಹೊಂದಿದೆ. ಆಗಲೇ ಹೇಳಿದ ಹಾಗೆ ಈ ಸೆಟ್ 6.7-ಇಂಚಿನ ಫುಲ್-ಎಚ್‌ಡಿ+ (1080×2400 ಪಿಕ್ಸೆಲ್‌ಗಳು) ಸೂಪರ್ ಎಎಮ್ಒಎಲ್ಇಡಿ ಸ್ಕ್ರೀನ್ ಅನ್ನು 20: 9 ರ ಅನುಪಾತ, 393 ಪಿಪಿಐ ಪಿಕ್ಸೆಲ್ ಸಾಂದ್ರತೆ ಮತ್ತು 90 ಹರ್ಟ್ಜ್ ರಿಫ್ರೆಶ್ ಪ್ರಮಾಣವನ್ನು ಹೊಂದಿರುತ್ತದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ A73 ಕ್ವಾಡ್ ರೇರ್ ಕ್ಯಾಮೆರಾ ಸೆಟಪ್ ಹೊಂದಿದೆ.

ಇದರಲ್ಲಿ 108ಎಮ್ ಪಿ (f/1.8) ಪ್ರಾಥಮಿಕ ಶೂಟರ್, 12 ಎಮ್ ಪಿ (f/2.2) ಅಲ್ಟ್ರಾ-ವೈಡ್ ಲೆನ್ಸ್, 8MP (f/2.4) ಟೆಲಿಫೋಟೋ ಸೆನ್ಸರ್ ಮತ್ತು 5MP (f) /2.4) ಮ್ಯಾಕ್ರೋ ಕೆಮೆರಾ. ಮುಂಭಾಗದಲ್ಲಿ, ಇದು 32MP (f/2.2) ಸೆಲ್ಫಿ ಸ್ನ್ಯಾಪರ್ ಹೊಂದಿರಬಹುದಾದ ಸಾಧ್ಯತೆಯಿದೆ.

ಇನ್ನು ಸ್ಯಾಮ್ಸಂಗ್ ಗೆಲಾಕ್ಸಿ ಎ73 ಬೆಲೆಯ ಬಗ್ಗೆ ಮಾತಾಡುವುದಾದರೆ, ಸದ್ಯಕ್ಕೆ ಅದಿನ್ನೂ ಬಹಿರಂಗಗೊಂಡಿಲ್ಲ. ಲೀಕ್ ಆಗಿರುವ ಸ್ಪೆಸಿಫಿಕೇಶನ್ಗಳ ಆಧಾರದಲ್ಲಿ ಗಮನಿಸಿದ್ದೇಯಾದರೆ ಅದರ ಬೆಲೆ ರೂ. 30,000 ಗಳ ಆಸುಪಾಸಿನಲ್ಲಿರಲಿದೆ.

ಇದನ್ನೂ ಓದಿ:  ತನ್ನದೇ ಭಾಷೆಯಲ್ಲಿ ಎಲ್ಲರಿಗೂ ಧನ್ಯವಾದ ಹೇಳಿದ ರಾಯನ್ ರಾಜ್ ಸರ್ಜಾ; ವಿಡಿಯೋ ನೋಡಿ