ಕಿಯಾರಾ ಅಡ್ವಾಣಿ ಫ್ಯಾಷನ್ ಅಭಿರುಚಿಗೆ ಸಾಟಿ ಯಾರು? ಶೇರ್ಷಾ ಸುಂದರಿ ಈಗ ಸಖತ್ ಮಿಂಚಿಂಗ್
Kiara Advani: ನಟಿ ಕಿಯಾರಾ ಅಡ್ವಾಣಿ ಬಹುಭಾಷೆಯಲ್ಲಿ ಮಿಂಚುತ್ತಿದ್ದಾರೆ. ಬಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದ ಸಿನಿಮಾಗಳ ಮೂಲಕವೂ ಅವರು ಜನಮನ ಗೆದ್ದಿದ್ದಾರೆ.
ಮಾಡರ್ನ್ ಡ್ರೆಸ್ ಆದರೂ ಸರಿ, ಟ್ರೆಡಿಷನಲ್ ಡ್ರೆಸ್ ಆದರೂ ಸರಿ, ಎರಡಕ್ಕೂ ಪರ್ಫೆಕ್ಟ್ ಆಗಿ ಹೊಂದಿಕೊಳ್ಳುತ್ತಾರೆ ನಟಿ ಕಿಯಾರಾ ಅಡ್ವಾಣಿ. ಬೋಲ್ಡ್ ಫೋಟೋಶೂಟ್ ಮೂಲಕವೂ ಅವರು ಆಗಾಗ ಕಣ್ಮನ ಸೆಳೆಯುತ್ತಾರೆ. ಅವರ ಫ್ಯಾಷನ್ ಸೆನ್ಸ್ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇದ್ದೇ ಇರುತ್ತದೆ. ಯಾವ ಬಗೆಯ ಉಡುಗೆಗಳನ್ನು ಕಿಯಾರಾ ಇಷ್ಟಪಡುತ್ತಾರೆ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ. ಸಿನಿಮಾ ವಿಚಾರಕ್ಕೆ ಬರುವುದಾದರೆ, ಕಿಯಾರಾ ಅವರಿಗೆ ಹಿಂದಿಯ ‘ಶೇರ್ಷಾ’ ಸಿನಿಮಾದಿಂದ ಭರ್ಜರಿ ಗೆಲುವು ಸಿಕ್ಕಿದೆ. ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಹೊಂದಿದೆ ವಿಕ್ರಮ್ ಬಾತ್ರಾ ಜೀವನ ಆಧರಿಸಿ ಸಿದ್ಧಗೊಂಡ ಈ ಸಿನಿಮಾದಲ್ಲಿ ಸಿದ್ದಾರ್ಥ್ ಮಲ್ಹೋತ್ರಾಗೆ ಜೋಡಿಯಾಗಿ ಕಿಯಾರಾ ನಟಿಸಿದ್ದಾರೆ. ಇನ್ನೂ ಹಲವು ಪ್ರಾಜೆಕ್ಟ್ಗಳು ಅವರ ಕೈಯಲ್ಲಿವೆ. ಶಂಕರ್ ನಿರ್ದೇಶನ ಮಾಡಲಿರುವ ಬಹುನಿರೀಕ್ಷಿತ ಚಿತ್ರಕ್ಕೂ ಕಿಯಾರಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ:
‘ಕಿಯಾರಾ ಜೊತೆ ಬಲವಂತವಾಗಿ ಕಿಸ್ ಮಾಡಬೇಕಾಯ್ತು’: ಎಲ್ಲವನ್ನೂ ಒಪ್ಪಿಕೊಂಡ ಶೇರ್ಷಾ ಹೀರೋ ಸಿದ್ದಾರ್ಥ್
Kiara Advani: ಮಾದಕ ನೋಟದಲ್ಲಿ ಮಿಂಚುತ್ತಿರುವ ಕಿಯಾರಾ; ಪಡ್ಡೆಹುಡುಗರ ನಿದ್ದೆಗೆಡಿಸುವ ಚಿತ್ರಗಳು ಇಲ್ಲಿವೆ