ಸಿಮ್ ಬದಲಾಯಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ

Updated on: Apr 28, 2026 | 2:37 PM

ಆದಿಲಾಬಾದ್​​ನಿಂದ ಚಿತ್ತೂರಿನವರೆಗೆ ಯಾವ ಪೆಟ್ರೋಲ್ ಬಂಕ್​ನಲ್ಲಿ ನೋಡಿದ್ರೂ ನೋ ಸ್ಟಾಕ್ ನೋರ್ಡ್​ಗಳದ್ದೇ ಕಾರುಬಾರು. ಬಂಕ್‌ಗಳ ಮುಂದೆ ಕಿಲೋಮೀಟರ್ ಉದ್ದದ ಸರತಿ ಸಾಲು, ಒಂದು ಲೀಟರ್ ಪೆಟ್ರೋಲ್ ಸಿಕ್ಕರೆ ಸಾಕು ಅನ್ನೋ ಮನಸ್ಥಿತಿ. ಈ ಹೊತ್ತಿನಲ್ಲಿ, ಉದ್ಯಮಿಯೊಬ್ಬರ ಬುದ್ಧಿವಂತ ಕಲ್ಪನೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಆದಿಲಾಬಾದ್, ಏಪ್ರಿಲ್ 28: ಆದಿಲಾಬಾದ್​​ನಿಂದ ಚಿತ್ತೂರಿನವರೆಗೆ ಯಾವ ಪೆಟ್ರೋಲ್ ಬಂಕ್​ನಲ್ಲಿ ನೋಡಿದ್ರೂ ನೋ ಸ್ಟಾಕ್ ನೋರ್ಡ್​ಗಳದ್ದೇ ಕಾರುಬಾರು. ಬಂಕ್‌ಗಳ ಮುಂದೆ ಕಿಲೋಮೀಟರ್ ಉದ್ದದ ಸರತಿ ಸಾಲು, ಒಂದು ಲೀಟರ್ ಪೆಟ್ರೋಲ್ ಸಿಕ್ಕರೆ ಸಾಕು ಅನ್ನೋ ಮನಸ್ಥಿತಿ. ಈ ಹೊತ್ತಿನಲ್ಲಿ, ಉದ್ಯಮಿಯೊಬ್ಬರ ಬುದ್ಧಿವಂತ ಕಲ್ಪನೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಖಮ್ಮಂ ಮತ್ತು ಭದ್ರದ್ರಿ ಕೊಥಗುಡೆಮ್ ಜಿಲ್ಲೆಗಳಲ್ಲಿ ಇಂಧನ ಕೊರತೆ ತೀವ್ರವಾಗಿರುವ ಬೆನ್ನಲ್ಲೇ, ಏರ್‌ಟೆಲ್ ವಿತರಕ ರೆಲ್ಲಾ ಸತೀಶ್ ಎಂಬುವವರು ಘೋಷಿಸಿದ ಆಫರ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ದಮ್ಮಪೇಟ ಮಂಡಲ ಕೇಂದ್ರದಲ್ಲಿ ತಮ್ಮ ಹೊಸ ಅಂಗಡಿಯ ಉದ್ಘಾಟನೆಯ ಸಮಯದಲ್ಲಿ ಬಂಪರ್ ಆಫರ್ ಘೋಷಿಸಿದ್ದಾರೆ. ಯಾರ್ಯಾರು ಏರ್​ಟೆಲ್​ ಸಿಮ್​ಗೆ ತಮ್ಮ ಸಿಮ್ ಬದಲಾಯಿಸಿ, ಯಾರು ತಮ್ಮ ಸಿಮ್ ಅನ್ನು ಯಾವುದೇ ನೆಟ್‌ವರ್ಕ್‌ನಿಂದ ಏರ್‌ಟೆಲ್‌ಗೆ ಬದಲಾಯಿಸಿಕೊಳ್ಳುತ್ತಾರೋ (MNP), ಅವರಿಗೆ ಒಂದು ಲೀಟರ್ ಪೆಟ್ರೋಲ್ ಉಚಿತ ಎಂದು ಹೇಳಿದ್ದು, ಜನರು ಪೆಟ್ರೋಲ್ ಬಂಕ್​ ಎದುರಲ್ಲ, ಏರ್​ಟೆಲ್ ಅಂಗಡಿ ಎದುರು ಕ್ಯೂ ನಿಂತಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us