Vishnaw: ಒಂದೆರಡು ತಿಂಗಳಲ್ಲಿ ಟೆಲಿಕಾಂ ಸುಧಾರಣೆಗಳು ಜಾರಿ; ಬಳಕೆದಾರ ರಕ್ಷಣೆಗೆ ಆದ್ಯತೆ- ಸಚಿವ ವೈಷ್ಣವ್

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Jul 06, 2023 | 2:39 PM

Reforms In Telecom Sector: ಟೆಲಿಕಾಂ ವಲಯದಲ್ಲಿ ಸುಧಾರಣಾ ಕ್ರಮಗಳು ಒಂದೆರಡು ತಿಂಗಳಲ್ಲಿ ಜಾರಿಯಾಗಲಿದ್ದು, ಬಳಕೆದಾರ ರಕ್ಷಣೆಗೆ ಹೆಚ್ಚು ಆದ್ಯತೆ ಕೊಡಲಾಗುವುದು ಎಂದು ಕೇಂದ್ರ ಟೆಲಿಕಾಂ ಸಚಿವ ವೈಷ್ಣವ್ ಹೇಳಿದ್ದಾರೆ.

ನವದೆಹಲಿ: ಟೆಲಿಕಾಂ ವಲಯದಲ್ಲಿ (Telecom Sector) ಕೇಂದ್ರ ಸರ್ಕಾರ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಿದ್ದು, ಒಂದೆರಡು ತಿಂಗಳಲ್ಲಿ ಇವುಗಳು ಜಾರಿಯಾಗಬಹುದು ಎಂದು ಹೇಳಿದ ರೈಲ್ವೆ ಮತ್ತು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್, ಈ ಸುಧಾರಣೆಯಲ್ಲಿ ಬಳಕೆದಾರರ ರಕ್ಷಣೆಗೆ (User Protection) ಹೆಚ್ಚು ಮುತುವರ್ಜಿ ತೋರಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ‘ನಾವು ಸುಧಾರಣೆಗಳನ್ನು ಎರಡು ವಿಭಾಗವಾಗಿ ಮಾಡಬಹುದು. ಒಂದು ರಚನಾತ್ಮಕ ಸುಧಾರಣೆ (Structural Reform), ಇನ್ನೊಂದು ವಿಧಾನಾತ್ಮಕ ಸುಧಾರಣೆ (Procedural Reform). ಈ ಎರಡು ವಿಭಾಗಗಳಲ್ಲೂ ಕೆಲ ಒಳ್ಳೆಯ ಅಂಶಗಳನ್ನು ಅಳವಡಿಸುತ್ತಿದ್ದೇವೆ. ಯೂಸರ್ ಪ್ರೊಟೆಕ್ಷನ್​ಗೆ ಈಗ ನಾವು ಹೆಚ್ಚು ಗಮನ ಕೊಡುತ್ತಿದ್ದೇವೆ’ ಎಂದು ವೈಷ್ಣವ್ ಅವರು ಹೇಳಿದ್ದಾರೆ.

ಸಿಮ್ ಕಾರ್ಡ್​ಗಳ ಸಂಖ್ಯೆ ಇಳಿಕೆಗೆ ಆಲೋಚನೆ

ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ಸರ್ಕಾರ ಒಬ್ಬ ವ್ಯಕ್ತಿಗೆ ನೀಡಲಾಗುವ ಸಿಮ್ ಕಾರ್ಡ್​ಗಳ ಸಂಖ್ಯೆಯನ್ನು ಇನ್ನಷ್ಟು ಕಡಿಮೆಗೊಳಿಸಲು ನಿರ್ಧರಿಸಿದೆ. ಅಂದರೆ ಒಂದು ಐಡಿ ಕಾರ್ಡ್​ಗೆ ಹೆಚ್ಚು ಸಿಮ್ ಕಾರ್ಡ್​ಗಳು ಸಿಗುವುದಿಲ್ಲ. ಸದ್ಯ ಒಂದು ಆಧಾರ್ ಕಾರ್ಡ್​ಗೆ ಗರಿಷ್ಠ 9 ಸಿಮ್ ಕಾರ್ಡ್​ಗಳನ್ನು ಪಡೆಯಬಹುದು. ಈ ಸಂಖ್ಯೆಯನ್ನು 9ಕ್ಕಿಂತ ಕಡಿಮೆಗೆ ಇಳಿಸುವ ಇರಾದೆ ಸರ್ಕಾರದ್ದಾಗಿದೆ.

ಇದನ್ನೂ ಓದಿRBI: ಅಂತಾರಾಷ್ಟ್ರೀಯ ವಹಿವಾಟಿನಲ್ಲಿ ಕರೆನ್ಸಿ ಹೆಚ್ಚೆಚ್ಚು ಬಳಸಿ; ರೂಪಾಯಿ ಅಂತಾರಾಷ್ಟ್ರೀಕರಣಕ್ಕೆ ಆರ್​ಬಿಐ ಸಮಿತಿಯಿಂದ ಹಲವು ಶಿಫಾರಸು

ಇದೇ ವೇಳೆ, ನೆಟ್ವರ್ಕ್ ಕಮ್ಯೂನಿಕೇಶನ್ ಯಾವುದೇ ವಿಳಂಬ ಇಲ್ಲವಾಗಿಸುವಂತಹ ಪೂರ್ಣ ಪ್ರಮಾಣದ ಆಪ್ಟಿಕಲ್ ಕಮ್ಯೂನಿಕೇಶನ್ ಸಿಸ್ಟಂ ಅನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಕೇಂದ್ರ ಸಚಿವ ವೈಷ್ಣವ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow us on