RBI: ಅಂತಾರಾಷ್ಟ್ರೀಯ ವಹಿವಾಟಿನಲ್ಲಿ ಕರೆನ್ಸಿ ಹೆಚ್ಚೆಚ್ಚು ಬಳಸಿ; ರೂಪಾಯಿ ಅಂತಾರಾಷ್ಟ್ರೀಕರಣಕ್ಕೆ ಆರ್​ಬಿಐ ಸಮಿತಿಯಿಂದ ಹಲವು ಶಿಫಾರಸು

Internationalization of Rupee Currency: ಅಂತಾರಾಷ್ಟ್ರೀಯ ವ್ಯವಹಾರದಲ್ಲಿ, ಕ್ಯಾಪಿಟಲ್ ಅಕೌಂಟ್ ಟ್ರಾನ್ಸಾಕ್ಷನ್​ನಲ್ಲಿ ರೂಪಾಯಿ ಬಳಕೆ, ಎಸ್​ಡಿಆರ್​ನಲ್ಲಿ ರೂಪಾಯಿ ಇರಿಸುವುದು ಇತ್ಯಾದಿ ಕ್ರಮಗಳಿಗೆ ಆರ್​ಬಿಐನ ಸಮಿತಿಯೊಂದು ಶಿಫಾರಸು ಮಾಡಿದೆ.

RBI: ಅಂತಾರಾಷ್ಟ್ರೀಯ ವಹಿವಾಟಿನಲ್ಲಿ ಕರೆನ್ಸಿ ಹೆಚ್ಚೆಚ್ಚು ಬಳಸಿ; ರೂಪಾಯಿ ಅಂತಾರಾಷ್ಟ್ರೀಕರಣಕ್ಕೆ ಆರ್​ಬಿಐ ಸಮಿತಿಯಿಂದ ಹಲವು ಶಿಫಾರಸು
ರುಪಾಯಿ
Follow us
|

Updated on: Jul 06, 2023 | 12:23 PM

ನವದೆಹಲಿ: ರುಪಾಯಿಯನ್ನು ಅಂತಾರಾಷ್ಟ್ರೀಯವಾಗಿ ಹೆಚ್ಚೆಚ್ಚು ಬಳಸಲು ರಿಸರ್ವ್ ಬ್ಯಾಂಕ್​ನ ಸಮಿತಿಯೊಂದು ವಿವಿಧ ಕ್ರಮಗಳನ್ನು ಶಿಫಾರಸು ಮಾಡಿದೆ. ವಿದೇಶೀ ವಿನಿಮಯ ದರದ ಭಾಗವಾಗಿರುವ ಎಸ್​ಡಿಆರ್ ಗುಂಪಿನಲ್ಲಿ (SDR Basket) ರಪಾಯಿಯನ್ನು ಒಳಗೊಳ್ಳುವುದು, ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ರುಪಾಯಿ ಕರೆನ್ಸಿಯಲ್ಲಿ ಇನ್ವಾಯ್ಸ್ ಸಲ್ಲಿಸುವುದು, ಕ್ಯಾಪಿಟಲ್ ಅಕೌಂಟ್ ಟ್ರಾನ್ಸಾಕ್ಷನ್​ನಲ್ಲಿ (Capital Account Transaction) ರುಪಾಯಿ ಬಳಸುವುದು ಇತ್ಯಾದಿ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಆರ್​ಬಿಐನ ಎಕ್ಸಿಕ್ಯೂಟಿವ್ ಡೈರೆಕ್ಟರ್ ರಾಧಾ ಶ್ಯಾಮ್ ರಾಥೋ ನೇತೃತ್ವದ ಇಂಟರ್ ಡಿಪಾರ್ಟ್​ಮೆಂಟಲ್ ಗ್ರೂಪ್ (IDG- Interdepartmental Group) ಶಿಫಾರಸು ಮಾಡಿದೆ.

ಯಾವುದೇ ಕರೆನ್ಸಿಯ ಅಂತಾರಾಷ್ಟ್ರೀಕರಣಕ್ಕೂ ಆ ದೇಶದ ಆರ್ಥಿಕ ಬೆಳವಣಿಗೂ ಕೊಂಡಿ ಇದೆ. ಅದರಲ್ಲೂ ಮುಖ್ಯವಾಗಿ ಜಾಗತಿಕ ವಹಿವಾಟಿನಲ್ಲಿ ಒಂದು ದೇಶ ಬೆಳವಣಿಗೆ ಸಾಧಿಸುವುದಕ್ಕೂ ಕರೆನ್ಸಿ ಅಂತಾರಾಷ್ಟ್ರೀಕರಣಕ್ಕೂ ಸಂಬಂಧ ಇದೆ. ಅತಿವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಭಾರತವೂ ಒಂದು. ಹಲವು ಪ್ರಮುಖ ಎಡರುತೊಡರುಗಳ ನಡುವೆಯೂ ಭಾರತ ಉತ್ತಮ ಪ್ರಗತಿ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕರೆನ್ಸಿಯಾಗುವ ಸಾಮರ್ಥ್ಯ ರುಪಾಯಿಗೆ ಇದೆ ಎಂಬುದು ಆರ್​ಬಿಐನ ಈ ಸಮಿತಿಯ ಅನಿಸಿಕೆ.

ಇದನ್ನೂ ಓದಿRBI: ಮೊಬೈಲ್​ಗಿದ್ದ ಪೋರ್ಟಬಿಲಿಟಿ ಕ್ರೆಡಿಟ್ ಕಾರ್ಡ್​ಗೂ ಬರಲಿದೆಯಾ? ಆರ್​ಬಿಐ ಹೊರಡಿಸಿದ ಕರಡು ಅಧಿಸೂಚನೆಯಲ್ಲೇನಿದೆ?

ಭಾರತ ಹಾಗೂ ಹೊರಗೆ ಅನಿವಾಸಿ ಭಾರತೀಯರಿಗೆ ರುಪಾಯಿ ಖಾತೆಗಳನ್ನು ತೆರೆಯಬೇಕು. ಅಂತರ್ ದೇಶೀಯ ವಹಿವಾಟುಗಳಿಗೆ ಭಾರತೀಯ ಪೇಮೆಂಟ್ ವ್ಯವಸ್ಥೆ ಅಳವಡಿಸಬೇಕು ಎಂದೂ ಆರ್​ಬಿಐನ ಇಂಟರ್ಡಿಪಾರ್ಟ್​ಮೆಂಟಲ್ ಗ್ರೂಪ್ ಸಲಹೆ ಕೊಟ್ಟಿದೆ.

ಆರ್​ಬಿಐ ತನ್ನ ಸಮಿತಿ ಸಲ್ಲಿಸಿದ ಶಿಫಾರಸುಗಳನ್ನು ವೆಬ್​ಸೈಟ್​ನಲ್ಲಿ ಪೋಸ್ಟ್ ಮಾಡಿದೆ. ಇದು ಆರ್​ಬಿಐನ ನಿಲುವು ಅಲ್ಲ ಎಂದೂ ಸ್ಪಷ್ಟಪಡಿಸಿದೆ. ಈ ವರದಿಯ ಅಂಶಗಳನ್ನು ಪರಾಮರ್ಶಿಸಿ, ಶಿಫಾರಸುಗಳನ್ನು ಹೇಗೆ ಜಾರಿಗೊಳಿಸಬಹುದು ಎಂಬ ನಿಟ್ಟಿನಲ್ಲಿ ಆರ್​ಬಿಐ ಆಲೋಚಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್