‘ಅಪ್ಪು ಅಮರ’ ಕಾರ್ಯಕ್ರಮ ಲೈವ್​ ವೀಕ್ಷಿಸಲು ಇಲ್ಲಿ ಕ್ಲಿಕ್​ ಮಾಡಿ

| Updated By: ರಾಜೇಶ್ ದುಗ್ಗುಮನೆ

Updated on: Nov 28, 2021 | 5:18 PM

ಬಾಲಕಲಾವಿದ ಆಗಿದ್ದಾಗಿಂದ ಇಲ್ಲಿಯವರೆಗೆ ಅವರ ಚಲನಚಿತ್ರದ ಆಯ್ದ ದೃಶ್ಯಗಳನ್ನು ಕಲಾವಿದರು ವೇದಿಕೆಯ ಮೇಲೆ ತರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪುನೀತ್ ಅವರ ಹಾಡುಗಳನ್ನು ಹಾಡಲಾಗುತ್ತದೆ.

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವತಿಯಿಂದ ಪವರ್​​ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ನಮನ ಸಲ್ಲಿಸುವ ಕೆಲಸ ನಡೆಯುತ್ತಿದೆ. ‘ಅಪ್ಪು ಅಮರ’ ಹೆಸರಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪುನೀತ್ ರಾಜ್​​ಕುಮಾರ್ ನಮ್ಮೊಂದಿಗಿಲ್ಲ. ಆದರೆ ಅವರು ಬಿಟ್ಟು ಹೋದ ಆದರ್ಶಗಳು ನಮ್ಮ ಜತೆ ಇವೆ. ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸಾಮಾಜಿಕ ಸೇವೆಯಲ್ಲಿ ಕೈ ಜೋಡಿಸಬೇಕು ಎನ್ನುವ ಸಂದೇಶ ಈ ಕಾರ್ಯಕ್ರಮದಲ್ಲಿ ಆಗಲಿದೆ. ಅಪ್ಪು ನೃತ್ಯ, ಅಭಿನಯ, ಗಾಯನ ಎಲ್ಲದರಲ್ಲೂ ಪ್ರತಿಭಾವಂತರಾಗಿದ್ದರು. ಬಾಲಕಲಾವಿದ ಆಗಿದ್ದಾಗಿಂದ ಇಲ್ಲಿಯವರೆಗೆ ಅವರ ಚಲನಚಿತ್ರದ ಆಯ್ದ ದೃಶ್ಯಗಳನ್ನು ಕಲಾವಿದರು ವೇದಿಕೆಯ ಮೇಲೆ ತರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪುನೀತ್ ಅವರ ಹಾಡುಗಳನ್ನು ಹಾಡಲಾಗುತ್ತದೆ. ಲೇಜರ್ ಶೋ ಮೂಲಕ ಪುನೀತ್ ಫೋಟೊ ಪ್ರದರ್ಶನ ಮಾಡಲಾಗುತ್ತಿದೆ. ಪುನೀತ್ ಹಾಡುಗಳಿಗೆ ಹಜ್ಜೆ ಹಾಕಲಿದ್ದಾರೆ.

ಇದನ್ನೂ ಓದಿ: ವಿಜಯನಗರ: ಪುನೀತ್‌ ರಾಜ್​ಕುಮಾರ್​ ಪುಣ್ಯಸ್ಮರಣೆ; 75 ಜನರಿಂದ ನೇತ್ರದಾನ, ರಕ್ತದಾನ, ಅನ್ನ ಸಂತರ್ಪಣೆ

Published on: Nov 28, 2021 05:17 PM