PAK vs SA, ICC World Cup: ಪಾಕ್ ವಿರುದ್ಧ ರೋಚಕ ಜಯ: ಡಗೌಟ್​ನಲ್ಲಿದ್ದ ಆಫ್ರಿಕಾ ನಾಯಕ ಟೆಂಬಾ ಬವುಮಾ ಏನು ಮಾಡಿದ್ರು ನೋಡಿ

PAK vs SA, ICC World Cup: ಪಾಕ್ ವಿರುದ್ಧ ರೋಚಕ ಜಯ: ಡಗೌಟ್​ನಲ್ಲಿದ್ದ ಆಫ್ರಿಕಾ ನಾಯಕ ಟೆಂಬಾ ಬವುಮಾ ಏನು ಮಾಡಿದ್ರು ನೋಡಿ

Vinay Bhat
|

Updated on: Oct 28, 2023 | 10:50 AM

Temba Bavum Celebration vs Pakistan: ಅಕ್ಟೋಬರ್ 27 ರಂದು ಚೆನ್ನೈನಲ್ಲಿ ನಡೆದ 2023 ರ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ದಕ್ಷಿಣ ಆಫ್ರಿಕಾ ಗೆದ್ದ ಸಂದರ್ಭ ಟೆಂಬಾ ಬವುಮಾ ಕೊಟ್ಟ ರಿಯಾಕ್ಷನ್ ಭಿನ್ನವಾಗಿತ್ತು. ಕೇಶವ್ ಮಹಾರಾಜ್ ವಿನ್ನಿಂಗ್ ಶಾಟ್ ಹೊಡೆಯುತ್ತಿದ್ದಂತೆ ಡಗೌಟ್​ನಲ್ಲಿ ಕುಳಿದಿದ್ದ ಬವುಮಾ ಅವರು ಸಂತೋಷದಿಂದ ಮೇಲಕ್ಕೆ ಹಾರಿ ಸಂಭ್ರಮಿಸಿದರು.

ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ (Temba Bavuma) ಮೈದಾನದಲ್ಲಿ ಸದಾ ಕಾಮ್ ಆಗಿ ಇರುವ ಆಟಗಾರ. ವಿಕೆಟ್ ಬಿದ್ದಾಗ ಅಥವಾ ಗೆಲುವು ಸಾಧಿಸಿದಾಗ ಹೆಚ್ಚೇನು ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ. ಆದರೆ, ಶುಕ್ರವಾರ, ಅಕ್ಟೋಬರ್ 27 ರಂದು ಚೆನ್ನೈನಲ್ಲಿ ನಡೆದ 2023 ರ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ದಕ್ಷಿಣ ಆಫ್ರಿಕಾ ಗೆದ್ದ ಸಂದರ್ಭ ಬವುಮಾ ಕೊಟ್ಟ ರಿಯಾಕ್ಷನ್ ಭಿನ್ನವಾಗಿತ್ತು. ಕೇಶವ್ ಮಹಾರಾಜ್ ವಿನ್ನಿಂಗ್ ಶಾಟ್ ಹೊಡೆಯುತ್ತಿದ್ದಂತೆ ಡಗೌಟ್​ನಲ್ಲಿ ಕುಳಿದಿದ್ದ ಬವುಮಾ ಅವರು ಬೌಂಡರಿ ಗೆರೆ ಬಳಿಕ ಓಡಿ ಬಂದು ಸಂತೋಷದಿಂದ ಮೇಲಕ್ಕೆ ಹಾರಿ ಸಂಭ್ರಮಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 1 ವಿಕೆಟ್​ಗಳ ರೋಚಕ ಜಯ ಸಾಧಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದೆ. ಮೊದಲ ಸ್ಥಾನದಲ್ಲಿದ್ದ ಭಾರತ ದ್ವಿತೀಯ ಸ್ಥಾನಕ್ಕೆ ಕುಸಿದಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ