ನಿಗಮ/ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ನಾನು ಒಂದು ಸುತ್ತು ಚರ್ಚೆ ನಡೆಸಿದ್ದೇವೆ: ಡಿಕೆ ಶಿವಕುಮಾರ್

ನಿಗಮ/ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ನಾನು ಒಂದು ಸುತ್ತು ಚರ್ಚೆ ನಡೆಸಿದ್ದೇವೆ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 28, 2023 | 12:17 PM

ಎಐಸಿಸಿಯ ಕರ್ನಾಟಕ ಉಸ್ತುವಾರಿಯಾಗಿರುವ ರಂದೀಪ್ ಸುರ್ಜೆವಾಲ ಅವರು ಮಧ್ಯಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಮಗ್ನರಾಗಿರುವುದರಿಂದ ಅಧ್ಯಕ್ಷರ ನೇಮಕಾತಿ ಕೆಲಸ ವಿಳಂಬಗೊಳ್ಳುತ್ತಿದೆ ಎಂದು ಶಿವಕುಮಾರ್ ಹೇಳಿದರು. ಪಕ್ಷದ ಹಲವಾರು ಶಾಸಕರು ನಿಗಮ/ ಮಂಡಳಿಗಳಿಗೆ ಪದಾಧಿಕಾರಿಗಳ ನೇಮಕಾತಿ ವಿಳಂಬಗೊಳ್ಳುತ್ತಿರುವ ಕಾರಣಕ್ಕೆ ಮುನಿಸಿಕೊಂಡು ಬಂಡಾಯ ಪ್ರವೃತ್ತಿ ಪ್ರದರ್ಶಿಸುತ್ತಿರೋದು ಸುಳ್ಳಲ್ಲ.

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಎರಡು ಮೂರು ಹಂತಗಳಲ್ಲಿ ಮಾಡಲಾಗುವುದು ಅಂತ ಹೇಳಿದರು. ವಿಷಯಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದು ಹೇಳಿದ ಅವರು ಶಾಸಕರಲ್ಲಿ ಕೆಲ ಹಿರಿಯ ನಾಯಕರು ಸಹ ಇರೋದ್ರಿಂದ ಮೊದಲ ಹಂತದಲ್ಲಿ ಯಾರನ್ನು ಪರಿಗಣಿಸಬೇಕು ಅಂತ ಚರ್ಚೆ ಮಾಡಲಾಗಿದೆ ಎಂದರು. ಎಐಸಿಸಿಯ ಕರ್ನಾಟಕ ಉಸ್ತುವಾರಿಯಾಗಿರುವ ರಂದೀಪ್ ಸುರ್ಜೆವಾಲ (Randeep Surjewala) ಅವರು ಮಧ್ಯಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಮಗ್ನರಾಗಿರುವುದರಿಂದ ಅಧ್ಯಕ್ಷರ ನೇಮಕಾತಿ ಕೆಲಸ ವಿಳಂಬಗೊಳ್ಳುತ್ತಿದೆ ಎಂದು ಶಿವಕುಮಾರ್ ಹೇಳಿದರು. ಪಕ್ಷದ ಹಲವಾರು ಶಾಸಕರು ನಿಗಮ/ ಮಂಡಳಿಗಳಿಗೆ ಪದಾಧಿಕಾರಿಗಳ ನೇಮಕಾತಿ ವಿಳಂಬಗೊಳ್ಳುತ್ತಿರುವ ಕಾರಣಕ್ಕೆ ಮುನಿಸಿಕೊಂಡು ಬಂಡಾಯ ಪ್ರವೃತ್ತಿ ಪ್ರದರ್ಶಿಸುತ್ತಿರೋದು ಸುಳ್ಳಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ