ಸಿದ್ದರಾಮಯ್ಯನವರೇ 5-ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ: ಹೆಚ್ ಸಿ ಮಹದೇವಪ್ಪ, ಸಚಿವ
ಅದು ಸರಿ, ಪರಮೇಶ್ವರ್ ಮನೆಯಿಂದ ಡಿಕೆ ಶಿವಕುಮಾರ್ ಮನೆ ಕೇವಲ ಕೂಗಳತೆಯಷ್ಟು ದೂರ, ಆದರೂ ಉಪ ಮುಖ್ಯಮಂತ್ರಿಯನ್ನು ಯಾಕೆ ಊಟಕ್ಕೆ ಕರೆದಿಲ್ಲ ಅಂತ ಕೇಳಿದ ಪ್ರಶ್ನೆಗೆ ಮಹಾದೇವಪ್ಪ, ಅದು ನನಗೆ ಗೊತ್ತಿಲ್ಲ ಅಂತ ಜಾಣ ಉತ್ತರ ನೀಡಿದರು.
ಬೆಂಗಳೂರು: ನಿನ್ನೆ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಮನೆಗೆ ಊಟಕ್ಕೆ ಹೋದಾಗ ಅಲ್ಲಿ ಸತೀಶ್ ಜಾರಕಿಹೊಳಿ ಅವರೊಂದಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್ ಸಿ ಮಹದೇವಪ್ಪ (HC Mahadevappa) ಕೂಡ ಇದ್ದರು. ನಗರದಲ್ಲಿಂದು ಅವರನ್ನು ನಿನ್ನೆಯ ಔತಣದ ಬಗ್ಗೆ ಕೇಳಿದಾಗ, ಅದರಲ್ಲಿ ರಾಜಕೀಯವೇನೂ ಇರಲಿಲ್ಲ, ಪರಮೇಶ್ವರ್ ಅವರು ಊಟಕ್ಕೆ ಕರೆದಿದ್ದರು, ನಾವು ಹೋಗಿದ್ದು ಅಷ್ಟೇ, ರಾಜಕೀಯದ ವಿಷಯಗಳ್ಯಾವೂ ಅಲ್ಲಿ ಚರ್ಚೆಯಾಗಿಲ್ಲ ಅಂತ ಹೇಳಿದರು. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂಬ ಮಾತಿ ಕೇಳಬಂದಿರುವ ಬಗ್ಗೆ ಕೇಳಿದಾಗ ಅವರು ಅಸಹೆಯಿಂದ, ಏಯ್ ಹೋಗ್ರೀ, 5-ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿರುತ್ತಾರೆ! ಅಂತ ಹೇಳಿದರು. ಅದು ಸರಿ, ಪರಮೇಶ್ವರ್ ಮನೆಯಿಂದ ಡಿಕೆ ಶಿವಕುಮಾರ್ ಮನೆ ಕೇವಲ ಕೂಗಳತೆಯಷ್ಟು ದೂರ, ಆದರೂ ಉಪ ಮುಖ್ಯಮಂತ್ರಿಯನ್ನು ಯಾಕೆ ಊಟಕ್ಕೆ ಕರೆದಿಲ್ಲ ಅಂತ ಕೇಳಿದ ಪ್ರಶ್ನೆಗೆ ಮಹಾದೇವಪ್ಪ, ಅದು ನನಗೆ ಗೊತ್ತಿಲ್ಲ ಅಂತ ಜಾಣ ಉತ್ತರ ನೀಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ