ಆರೋಗ್ಯವಂತ ವ್ಯಕ್ತಿಯೊಬ್ಬ ಹತ್ತುದಿನ ದೆಹಲಿಯಲ್ಲಿದ್ದರೆ ಶ್ವಾಸಕೋಶದ ಸಮಸ್ಯೆಗಳಿಗೆ ಈಡಾಗುತ್ತಾನೆ: ವಿನಯ್ ಗುರೂಜಿ
ಒಂದು ಸಂಕೀರ್ಣ ವಿಷಯವನ್ನು ಗುರೂಜಿ ಬಹಳ ಅರ್ಥಗರ್ಭಿತವಾಗಿ ವಿವರಿಸಿದರು. ದೆಹಲಿಯಲ್ಲಿ ಉಂಟಾಗುತ್ತಿರುವ ವಾಯುಮಾಲಿನ್ಯ ಯಾರಿಗೆ ಗೊತ್ತಿಲ್ಲ? ದೀಪಾವಳಿ ಸಮಯದಲ್ಲಿ ಅದು ಮತ್ತಷ್ಟು ಹದಗೆಡುತ್ತದೆ. ಬಹಳಷ್ಟು ಜನಕ್ಕೆ ಗೊತ್ತಿರಲಾರದು, ಬೆಂಗಳೂರಿನ ಮಾನ್ಯತಾ ಟೆಕ್ ಪ್ರದೇಶ ಸಹ ವಾಯುಮಾಲಿನ್ಯಕ್ಕೆ ತುತ್ತಾಗುತ್ತಿದೆ. ಕೆಟ್ಟ ರಸ್ತೆಗಳಿಂದ ಏಳುವ ಧೂಳು ಪರಿಸರ ಮಾಲಿನ್ಯಕ್ಕೆ ತನ್ನ ಕೊಡುಗೆ ನೀಡುತ್ತಿದೆ.
ಚಿಕ್ಕೋಡಿ: 2025 ರಲ್ಲಿ ಭೂಕಂಪವಾಗುವ ಸಾಧ್ಯತೆ ಇದೆಯೇ? ಎಂದು ಅವಧೂತ ವಿನಯ್ ಗುರೂಜಿ ಅವರನ್ನು ಕೇಳಿದಾಗ ಮಾರ್ಮಿಕ ಉತ್ತರ ನೀಡಿದರು. ಇದಕ್ಕೆಲ್ಲ ಭವಿಷ್ಯವಾಣಿ ಬೇಕಿಲ್ಲ, ನಾವು ಪ್ರಕೃತಿಯನ್ನು ಹಾಳು ಮಾಡಿದ್ದೇವೆ, ನಮ್ಮಲ್ಲಿನ ಆರೋಗ್ಯವಂತ ವ್ಯಕ್ತಿಯೊಬ್ಬ ಹತ್ತು ದಿನಗಳ ಮಟ್ಟಿಗೆ ದೆಹಲಿಗೆ ಹೋದರೆ ನ್ಯೂಮೋನಿಯಾ ಮತ್ತು ಶ್ವಾಸಕೋಶದ ರೋಗಗಳನ್ನು ಅಂಟಿಸಿಕೊಂಡು ಬರುತ್ತಾನೆ, ಆ ಮಟ್ಟಿಗೆ ಪರಿಸರ ಹಾಳಾಗಿದೆ, ಈಗಲೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಎಟಿಎಂಗಳಲ್ಲಿ ಹಣವಿರುತ್ತದೆ, ಅದರೆ ಅದನ್ನು ಅನುಭವಿಸಲು ಮನೆಗಳಲ್ಲಿ ಜನ ಇರಲ್ಲ ಎಂದು ಗೂರೂಜಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Mahashivratri: ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದ ಭಕ್ತಾದಿಗಳ ಪಾದ ತೊಳೆದು, ಎಣ್ಣೆ ಹಚ್ಚಿ ಮಸಾಜ್ ಮಾಡಿದ ವಿನಯ್ ಗುರೂಜಿ