Mahashivratri: ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದ ಭಕ್ತಾದಿಗಳ ಪಾದ ತೊಳೆದು, ಎಣ್ಣೆ ಹಚ್ಚಿ ಮಸಾಜ್​ ಮಾಡಿದ ವಿನಯ್​ ಗುರೂಜಿ

Mahashivratri: ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದ ಭಕ್ತಾದಿಗಳ ಪಾದ ತೊಳೆದು, ಎಣ್ಣೆ ಹಚ್ಚಿ ಮಸಾಜ್​ ಮಾಡಿದ ವಿನಯ್​ ಗುರೂಜಿ

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ವಿವೇಕ ಬಿರಾದಾರ

Updated on: Mar 05, 2024 | 1:02 PM

ಚಿಕ್ಕಮಗಳೂರು ಜಿಲ್ಲೆಯಿಂದ ಅನೇಕ ಭಕ್ತರು ತಂಡೋಪತಂಡವಾಗಿ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದರು. ಪಾದಯಾತ್ರಿಗಳು ನಿನ್ನೆ (ಮಾ.04)ರ ರಾತ್ರಿ ಮೂಡಿಗೆರೆ ತಾಲೂಕಿನ ನೀರುಗಂಡಿಯಲ್ಲಿ ವಾಸವಾಗಿದ್ದರು. ಈ ವೇಳೆ ಅವಧೂತ ವಿನಯ್ ಗುರೂಜಿ ಪಾದಯಾತ್ರಿಗಳ ಕಾಲು ತೊಳೆದು, ಪುಷ್ಪ ಹಾಕಿ ಪೂಜಿಸಿದರು.

ಚಿಕ್ಕಮಗಳೂರು, ಮಾರ್ಚ್​​ 05: ಮಹಾಶಿವರಾತ್ರಿ (Mahashivratri) ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು ಮತ್ತು ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಡುತ್ತಾರೆ. ಶಿವರಾತ್ರಿ ದಿನದಂದು ಶ್ರೀ ಮಂಜುನಾಥನ ದರ್ಶನ ಪಡೆಯುತ್ತಾರೆ. ಚಿಕ್ಕಮಗಳೂರು ಜಿಲ್ಲೆಯಿಂದಲೂ ಅನೇಕ ಭಕ್ತರು ತಂಡೋಪತಂಡವಾಗಿ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಪಾದಯಾತ್ರಿಗಳು ನಿನ್ನೆ (ಮಾ.04)ರ ರಾತ್ರಿ ಮೂಡಿಗೆರೆ (Mudigere) ತಾಲೂಕಿನ ನೀರುಗಂಡಿಯಲ್ಲಿ ವಾಸವಾಗಿದ್ದರು. ಈ ವೇಳೆ ಅವಧೂತ ವಿನಯ್ ಗುರೂಜಿ ಪಾದಯಾತ್ರಿಗಳ ಕಾಲು ತೊಳೆದು, ಪುಷ್ಪ ಹಾಕಿ ಪೂಜಿಸಿದರು. ಬಳಿಕ ಎಣ್ಣೆ ಹಚ್ಚಿ ಮಸಾಜ್ ಮಾಡಿದರು. ಅವಧೂತ ವಿನಯ್ ಗುರೂಜಿ (Vinay Guruji) ಅವರಿಗೆ ಶಾಸಕಿ ನಯನ ಮೋಟಮ್ಮ ಸಾಥ್ ನೀಡಿದರು. ಮೂಡಿಗೆರೆ ತಾಲೂಕಿನ ಸಾಮಾಜಿಕ ಸೇವಾ ಸಮಿತಿ ಪ್ರತಿ ವರ್ಷ ಧರ್ಮಸ್ಥಳ ಪಾದಯಾತ್ರಿಗಳಿಗೆ ಊಟ-ವಸತಿಗೆ ಸೌಲಭ್ಯ ಕಲ್ಪಿಸಿದೆ.