ಮಂಗಳೂರು: ರಹಿಮಾನ್ ಶವಯಾತ್ರೆಯ ವೇಳೆ ಯುವಕರ ದಾಂಧಲೆ, ವೀಡಿಯೋ ವೈರಲ್
ಬಂಟ್ವಾಳದಲ್ಲಿ ಅಬ್ದುಲ್ ರಹಿಮಾನ್ ಶವದ ಅಂತಿಮಯಾತ್ರೆ ವೇಳೆ ಕೆಲ ಮುಸ್ಲಿಂ ಯುವಕರು ದುಂಡಾವರ್ತನೆ ತೋರಿದ್ದಕ್ಕೆ ಸಂಬಂಧಿಸಿದ ಸಿಸಿಟಿವಿ ವೀಡಿಯೋ ಈಗ ವೈರಲ್ ಆಗುತ್ತಿದೆ. ಮುಸ್ಲಿಂ ಯುವಕರು ತುಂಬೆ ಬಳಿ ಕಾರ್ಮಿಕರೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿ ಬಲವಂತವಾಗಿ ಅಂಗಡಿ ಮುಚ್ಚಲು ಮುಂದಾಗಿದ್ದು, ಪೊಲೀಸ್ ಸೈರನ್ ಮೊಳಗುತ್ತಿದ್ದಂತೆ ಪೇರಿಕಿತ್ತಿರುವುದು ಸಿಸಿಟಿವಿ ವಿಡಿಯೋದಲ್ಲಿ ಕಾಣಿಸಿದೆ.
ಮಂಗಳೂರು, ಮೇ 29: ಬಂಟ್ವಾಳದಲ್ಲಿ ನಡೆದ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ. ರಹಿಮಾನ್ ಶವಯಾತ್ರೆಯ ವೇಳೆ ಯುವಕರು ದಾಂಧಲೆ ಸೃಷ್ಟಿಸಿರುವ ಸಿಸಿಟಿವಿ ವೀಡಿಯೋ ಈಗ ವೈರಲ್ ಆಗುತ್ತಿದೆ. ಶವ ಮೆರವಣಿಗೆಗೂ ಮುನ್ನ ಮೆರವಣಿಗೆ ಸಾಗುವ ರಸ್ತೆಯುದ್ದಕ್ಕೂ ಅಂಗಡಿ ಮುಂಗಟ್ಟುಗಳನ್ನು ಯುವಕರು ಬಲವಂತದಿಂದ ಬಂದ್ ಮಾಡಿಸಿದ್ದರು. ತೆರೆದ ಅಂಗಡಿಗಳನ್ನೇ ಟಾರ್ಗೆಟ್ ಮಾಡಿ ದಾಂಧಲೆ ಎಸಗಿದ್ದರು. ತುಂಬೆ ಬಳಿಯ ಅಲ್ಯೂಮಿನಿಯಂ ಅಂಗಡಿ ಬಳಿ ತೆರಳಿ ಕೂಗಾಡಿ, ಕಾರ್ಮಿಕನ ಮೇಲೆ ಹಲ್ಲೆಗೆ ಮುಂದಾಗಿ ಶಟರ್ ಎಳೆದ ಕೃತ್ಯದ ವಿಡಿಯೋ ಇಲ್ಲಿದೆ. ತಕ್ಷಣ ಪೊಲೀಸರು ವಾಹನದಲ್ಲಿ ಸೈರನ್ ಹಾಕಿದ್ದರಿಂದ ಯುವಕರು ಕಾಲ್ಕಿತ್ತಿದ್ದಾರೆ.