ಜಾಮಿಯಾ ಮಸೀದಿಗೆ ನುಗ್ಗಲು ಯತ್ನಿಸಿದ ಹನುಮ ಮಾಲಾಧಾರಿಗಳು: ನೂಕಾಟ, ತಳ್ಳಾಟ

Updated on: Dec 03, 2025 | 3:43 PM

ಶ್ರೀರಂಗಪಟ್ಟಣದಲ್ಲಿ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ವೇಳೆ ಹನುಮ ಮಾಲಾಧಾರಿಗಳು ಜಾಮಿಯಾ ಮಸೀದಿ ಕಡೆ ನುಗ್ಗಲು ಯತ್ನಿಸಿರುವ ಘಟನೆ ನಡೆದಿದ್ದು, ಈ ವೇಳೆ ಪೊಲೀಸರು ಹನುಮ ಮಾಲಾಧಾರಿಗಳನ್ನು ತಡೆದು ನಿಲ್ಲಿಸಿದರು. ಇದರಿಂದ ಪೊಲೀಸರು ಹಾಗೂ ಹನುಮ ಮಾಲಾಧಾರಿಗಳ ನಡುವೆ ತಳ್ಳಾಟ, ನೂಕಾಟ ಉಂಟಾಯ್ತು. ಇದೇ ವೇಳೆ ಹನುಮ ಮಾಲಾಧಾರಿಗಳು, ಕೇಸರಿ ಧ್ವಜ ತಿರುಗಿಸಿ ಮಸೀದಿ ಜಾಗ ನಮ್ಮದು ಎಂದು ಘೋಷಣೆ ಮೊಳಗಿತು. ಅಲ್ಲದೇ ಜಾಮಿಯಾ ಮಸೀದಿಯಲ್ಲಿರುವವನು ಹನುಮಂತ ಎಂದು ಘೋಷಣೆ ಕೂಗಿ ಬೂದುಗುಂಬಳ ಇಳಿ ತೆಗೆದು ಒಡೆದರು

ಮಂಡ್ಯ, (ಡಿಸೆಂಬರ್ 03): ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ವೇಳೆ ಹನುಮ ಮಾಲಾಧಾರಿಗಳು ಜಾಮಿಯಾ ಮಸೀದಿ ಕಡೆ ನುಗ್ಗಲು ಯತ್ನಿಸಿರುವ ಘಟನೆ ನಡೆದಿದ್ದು, ಈ ವೇಳೆ ಪೊಲೀಸರು ಹನುಮ ಮಾಲಾಧಾರಿಗಳನ್ನು ತಡೆದು ನಿಲ್ಲಿಸಿದರು. ಇದರಿಂದ ಪೊಲೀಸರು ಹಾಗೂ ಹನುಮ ಮಾಲಾಧಾರಿಗಳ ನಡುವೆ ತಳ್ಳಾಟ, ನೂಕಾಟ ಉಂಟಾಯ್ತು. ಇದೇ ವೇಳೆ ಹನುಮ ಮಾಲಾಧಾರಿಗಳು, ಕೇಸರಿ ಧ್ವಜ ತಿರುಗಿಸಿ ಮಸೀದಿ ಜಾಗ ನಮ್ಮದು ಎಂದು ಘೋಷಣೆ ಮೊಳಗಿತು. ಅಲ್ಲದೇ ಜಾಮಿಯಾ ಮಸೀದಿಯಲ್ಲಿರುವವನು ಹನುಮಂತ ಎಂದು ಘೋಷಣೆ ಕೂಗಿ ಬೂದುಗುಂಬಳ ಇಳಿ ತೆಗೆದು ಒಡೆದರು.

ಇನ್ನು ಹನುಮ ಮಾಲಾಧಾರಿಗಳ ಜಾಮಿಯಾ ಮಸೀದಿ ಮುಂದೆ ಕುಳಿತು ಭಜನೆ ಮಾಡಿದ್ದು, ಈ ವೇಳೆ ಪರಿಸ್ಥಿತಿ ಕೈಮೀರುತ್ತಿರುತ್ತಿದ್ದಂತೆಯೇ ಎಚ್ಚೆತ್ತ SP ಮಲ್ಲಿಕಾರ್ಜುನ ಬಾಲದಂಡಿ ಅವರು ಪ್ರವೇಶಿಸಿ ಹನುಮ ಮಾಲಾಧಾರಿಗಳ ಮನವೊಲಿಸಿದರು. ಬಳಿಕ ಹನುಮ ಮಾಲಾಧಾರಿಗಳು ಜಾಮಿಯಾ ಮಸೀದಿ ವೃತ್ತದಿಂದ ಮುಂದೆ ಸಾಗಿದರು.

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More