Loading video

ಭಾರತ-ಪಾಕಿಸ್ತಾನ ಮಧ್ಯೆ ಉದ್ವಿಗ್ನ: ಸೈಬರ್ ದಾಳಿ ಬಗ್ಗೆ ವಿಡಿಯೋ ಮೂಲಕ ಕಮಿಷನರ್​ ದಯಾನಂದ್ ಎಚ್ಚರಿಕೆ!​​

Updated By: ಗಂಗಾಧರ​ ಬ. ಸಾಬೋಜಿ

Updated on: May 12, 2025 | 8:24 AM

ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಬೆಂಗಳೂರು ಪೊಲೀಸ್ ಆಯುಕ್ತರು ಸೈಬರ್ ದಾಳಿಯ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಅಪರಿಚಿತ ಲಿಂಕ್‌ಗಳು, ಇಮೇಲ್‌ಗಳು ಮತ್ತು ಎಪಿಕೆ ಫೈಲ್‌ಗಳನ್ನು ತಪ್ಪಿಸಲು ಸೂಚಿಸಲಾಗಿದೆ. ವಾಟ್ಸಾಪ್ ಸೆಕ್ಯೂರಿಟಿ ಅಪ್ಡೇಟ್ ಮಾಡಿಕೊಳ್ಳಲು ಮತ್ತು ಜಾಗೃತರಾಗಿರಲು ಸಲಹೆ ನೀಡಲಾಗಿದೆ.

ಬೆಂಗಳೂರು, ಮೇ 12: ಭಾರತ ಮತ್ತು ಪಾಕಿಸ್ತಾನ (India and Pakistan) ನಡುವೆ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಪಾಕ್​​ ಸೈಬರ್ ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆ ನಾಗರಿಕರು ಜಾಗೃತರಾಗಿರುವಂತೆ ಬೆಂಗಳೂರು ಪೊಲೀಸ್​ ಕಮಿಷನರ್​ ಬಿ.ದಯಾನಂದ್​ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಅಪರಿಚಿತ ಲಿಂಕ್​, ಇ-ಮೇಲ್​ಗಳ‌ ಮೇಲೆ ನಿಗಾವಹಿಸಿ. ಎಕ್ಸ್​ಕ್ಲೂಸಿವ್ ನ್ಯೂಸ್ ಲಿಂಕ್​​ಗಳು ಹಾಗೂ ಎಪಿಕೆ ಫೈಲ್ಸ್​, ಅಪರಿಚಿತ ಫಾರ್ವರ್ಡ್ ಲಿಂಕ್​​ ಕ್ಲಿಕ್ ಮಾಡದಂತೆ, ವಾಟ್ಸಾಪ್ ಸೆಕ್ಯೂರಿಟಿ ಅಪ್ಡೇಟ್ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: May 12, 2025 08:23 AM