Video: ಪ್ರಾಣ ಹೋದರೂ ಕೊಟ್ಟ ಮಾತು ತಪ್ಪೆನು: ಮೋದಿ

Updated on: May 30, 2025 | 2:13 PM

ಪ್ರಾಣ ಹೋದರೂ ಕೊಟ್ಟ ಮಾತಿಗೆ ಎಂದೂ ತಪ್ಪುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕರಟಕ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ದಾಳಿ ಬಳಿಕ ಉಗ್ರರಿರುವ ತಾಣಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದು ಮಾತು ಕೊಟ್ಟಿದ್ದೆವು ಅದರ ಪ್ರಕಾರವೇ ನಡೆದುಕೊಂಡಿದ್ದೇವೆ ಎಂದು ಹೇಳಿದರು. ಉಗ್ರರ ದಾಳಿ ಬಳಿಕ ಬಿಹಾರದ ನೆಲದಲ್ಲಿಯೇ ಉಗ್ರರನ್ನು ಹುಡುಕಿ ಕೊಂದು, ಅವರು ಕನಸಲ್ಲೂ ನೆನಸಿರದ ಶಿಕ್ಷೆ ನೀಡುತ್ತೇವೆ ಎಂದು ಮಾತು ಕೊಟ್ಟಿದ್ದೆ, ಈಗ ಆ ಮಾತು ಪೂರೈಸಿ ಮತ್ತೆ ನಾನು ಬಿಹಾರಕ್ಕೆ ಬಂದಿದ್ದೇನೆ ಎಂದರು.ಆಪರೇಷನ್ ಸಿಂಧೂರ್' ನಲ್ಲಿ, ನಮ್ಮ ಬಿಎಸ್ಎಫ್ ನ ಅಭೂತಪೂರ್ವ ಶೌರ್ಯ ಮತ್ತು ಅದಮ್ಯ ಧೈರ್ಯವನ್ನು ಜಗತ್ತು ಕಂಡಿದೆ.

ಬಿಹಾರ, ಮೇ 30: ಪ್ರಾಣ ಹೋದರೂ ಕೊಟ್ಟ ಮಾತಿಗೆ ಎಂದೂ ತಪ್ಪುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕರಟಕ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ದಾಳಿ ಬಳಿಕ ಉಗ್ರರಿರುವ ತಾಣಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದು ಮಾತು ಕೊಟ್ಟಿದ್ದೆವು ಅದರ ಪ್ರಕಾರವೇ ನಡೆದುಕೊಂಡಿದ್ದೇವೆ ಎಂದು ಹೇಳಿದರು. ಬಿಹಾರದ ಜನತೆಗೆ ರಾಮನ ಪ್ರತಿಜ್ಞೆ ಏನೆಂದಬುದು ತಿಳಿದಿದೆ. ಅವರಂತೆಯೇ ಕೊಟ್ಟ ಮಾತನ್ನು ಪಾಲಿಸದೇ ಬಿಡುವುದಿಲ್ಲ ಎಂದರು.

ಉಗ್ರರ ದಾಳಿ ಬಳಿಕ ಬಿಹಾರದ ನೆಲದಲ್ಲಿಯೇ ಉಗ್ರರನ್ನು ಹುಡುಕಿ ಕೊಂದು, ಅವರು ಕನಸಲ್ಲೂ ನೆನಸಿರದ ಶಿಕ್ಷೆ ನೀಡುತ್ತೇವೆ ಎಂದು ಮಾತು ಕೊಟ್ಟಿದ್ದೆ, ಈಗ ಆ ಮಾತು ಪೂರೈಸಿ ಮತ್ತೆ ನಾನು ಬಿಹಾರಕ್ಕೆ ಬಂದಿದ್ದೇನೆ ಎಂದರು.ಆಪರೇಷನ್ ಸಿಂಧೂರ್’ ನಲ್ಲಿ, ನಮ್ಮ ಬಿಎಸ್ಎಫ್ ನ ಅಭೂತಪೂರ್ವ ಶೌರ್ಯ ಮತ್ತು ಅದಮ್ಯ ಧೈರ್ಯವನ್ನು ಜಗತ್ತು ಕಂಡಿದೆ.

ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟ ನಿಂತಿಲ್ಲ,ಮತ್ತೆ ತಲೆ ಎತ್ತಿದರೆ, ಅವರನ್ನು ಹೊಸಕಿಹಾಕುವವರೆಗೆ ಬಿಡುವುದಿಲ್ಲ. ನಮ್ಮ ಹೋರಾಟ ದೇಶದ ಪ್ರತಿಯೊಬ್ಬ ಶತ್ರುವಿನ ವಿರುದ್ಧವಾಗಿದೆ, ಅವನು ಗಡಿಯಾಚೆ ಇರಲಿ ಅಥವಾ ದೇಶದೊಳಗಿರಲಿ. ಕಳೆದ ವರ್ಷಗಳಲ್ಲಿ ಹಿಂಸಾಚಾರ ಮತ್ತು ಅಶಾಂತಿ ಹರಡುವವರನ್ನು ನಾವು ಹೇಗೆ ನಿರ್ಮೂಲನೆ ಮಾಡಿದ್ದೇವೆ ಎಂಬುದಕ್ಕೆ ಬಿಹಾರದ ಜನರು ಸಾಕ್ಷಿಯಾಗಿದ್ದಾರೆ.

ಪ್ರಧಾನಿ ಮೋದಿ ಅವರು ನಕ್ಸಲಿಸಂ ಅನ್ನು ಕೊನೆಗೊಳಿಸುವ ಬಗ್ಗೆಯೂ ಪ್ರಸ್ತಾಪಿಸಿದರು ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ನರೇಂದ್ರ ಮೋದಿ ಅವರು ಶುಕ್ರವಾರ ಬಿಹಾರದ ಕರಕಟ್‌ನಲ್ಲಿ 48,520 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ನೆರವೇರಿಸಿದರು. 50 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: May 30, 2025 02:10 PM