AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲೂನ್​ಗೆ ನುಗ್ಗಿ ಲೇಡಿ ಗ್ಯಾಂಗ್ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು

ಸಲೂನ್​ಗೆ ನುಗ್ಗಿ ಲೇಡಿ ಗ್ಯಾಂಗ್ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು

ರಾಚಪ್ಪಾಜಿ ನಾಯ್ಕ್
| Edited By: |

Updated on: May 30, 2025 | 12:49 PM

Share

ಬೆಂಗಳೂರಿನಲ್ಲಿ ಸಲೂನ್​ಗೆ ನುಗ್ಗಿ ದಾಂದಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತಹಳ್ಳಿ ಪೊಲೀಸರಿಂದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಸಲೂನ್​ಗೆ ನುಗ್ಗಿ ಸಂಜು ಎಂಬಾತನ ಮೇಲೆ ಹಲ್ಲೆಗೈದು ಕಿಡ್ನ್ಯಾಪ್​​ ಮಾಡಲಾಗಿತ್ತು. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿತ್ತು. ಸದ್ಯ ಹಲ್ಲೆಗೊಳಗಾದ ಸಂಜು ಹೇಳಿದ್ದೇನು ವಿಡಿಯೋ ನೋಡಿ.

ಬೆಂಗಳೂರು, ಮೇ 30: ಸಲೂನ್​ ವಿಚಾರವಾಗಿ ಲೇಡಿ ಗ್ಯಾಂಗ್​ವೊಂದು ಅಟ್ಟಹಾಸ ಮೆರೆದಿರುವಂತಹ ಘಟನೆ ನಗರದ ಭುವನೇಶ್ವರಿ ನಗರದ ಮುಖ್ಯರಸ್ತೆಯಲ್ಲಿ ನಡೆದಿದೆ. ಹೊಸದಾಗಿ ಸಲೂನ್ (Salon) ತೆರೆದಿದ್ದ ಸಂಜು ಮೇಲೆ ಹಳೆಯ ಸಲೂನ್ ಮಾಲೀಕೆ ಕಾವ್ಯಾ, ಮೊಹಮ್ಮದ್​ ಮತ್ತು ಸ್ಮಿತಾ ಹಲ್ಲೆ ಮಾಡಿ, ಜೀವಬೆದರಿಕೆ ಆರೋಪ ಮಾಡಿದ್ದಾರೆ. ಸದ್ಯ ಅಮೃತಹಳ್ಳಿ ಪೊಲೀಸರಿಂದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಹಲ್ಲೆಗೊಳಗಾದ ಸಂಜು ಹೇಳಿದ್ದೇನು ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.