ವಿಶಿಷ್ಟ ಸಾಲ್ಟ್-ಅಂಡ್-ಪೆಪ್ಪರ್ ಲುಕ್ಸ್ನಿಂದ ‘ತಲಾ’ ಅಜಿತ್ ಎರಡೂವರೆ ದಶಕಗಳಿಂದ ಕಾಲಿವುಡ್ನಲ್ಲಿ ರಾರಾಜಿಸುತ್ತಿದ್ದಾರೆ
90 ರ ದಶಕದಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದ ಹೀರಾ ರಾಜಗೋಪಾಲ ಜೊತೆ ಅಜಿತ್ ಅಫೇರ್ ಇಟ್ಟುಕೊಂಡಿದ್ದಾರಾದರೂ ಮದುವೆಯಾಗಿದ್ದು ಮಾತ್ರ 1999ರಲ್ಲಿ ತೆರೆಕಂಡ ಅಮರಕಲಂ ತಮಿಳು ಚಿತ್ರದಲ್ಲಿ ತಮ್ಮ ಜೊತೆ ನಟಿಸಿದ್ದ ಶಾಲಿನಿ ಅವರನ್ನು.
ಅಜಿತಕುಮಾರ್ ಸುಬ್ರಮಣಿಯಮ್ ಅಂತ ನಾವೇನಾದರೂ ಹೇಳಿದರೆ ಯಾರದು ಅಂತ ಕೇಳೋರೇ ಜಾಸ್ತಿ, ಅದೇ ತಲಾ ಅಜಿತ್ ಅಂದರೆ, ಓ ಅದು ತಮಿಳಿನ ಸಾಲ್ಟ್-ಅಂಡ್-ಪೆಪ್ಪರ್ ಸೂಪರ್ ಸ್ಟಾರ್ ಅಂದು ಬಿಡುತ್ತೀರಿ. ಹೌದು, ಅಜಿತ್ ಅವರಿಗೆ ಪರಿಚಯದ ಅವಶ್ಯಕತೆಯಿಲ್ಲ. ಸುಮಾರು ಎರಡೂವರೆ ದಶಕಗಳಿಂದ ತಮ್ಮ ವಿಶಿಷ್ಟ ಲುಕ್ಸ್ ಮತ್ತು ಮ್ಯಾನರಿಸಂಗಳಿಂದ ತಮಿಳು ಚಿತ್ರರಂಗದಲ್ಲಿ ತಳವೂರಿದ್ದಾರೆ. ಇವರ ಸಾಲ್ಟ್-ಅಂಡ್-ಪೆಪ್ಪರ್ ಅವರ ವ್ಯಕ್ತಿತ್ವಕ್ಕೆ ವಿಶಿಷ್ಟ ಮೆರಗನ್ನು ನೀಡಿದೆ. 50-ವರ್ಷ ವಯಸ್ಸಿನ ಅಜಿತ್ ಇದುವರೆಗೆ 60 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗೆ ನೋಡಿದರೆ ಅವರು 1990 ರಲ್ಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದರೆ ಪೂರ್ಣ ಪ್ರಮಾಣದ ನಾಯಕ ನಟನಾಗಿ ಕರೀಯರ್ ಶುರುವಾಗಿದ್ದು 1993ರಲ್ಲಿ.
ಅಜಿತ್ ಕಾಲಿವುಡ್ ನಲ್ಲಿ ಜನಪ್ರಿಯ ನಟರಾದರೂ ಅವರು ಹುಟ್ಟಿದ್ದು ಈಗಿನ ತೆಲಂಗಾಣದ ಸಿಕಂದರಾಬಾದ್ನಲ್ಲಿ. ಇವರ ಕುಟುಂಬ ಸ್ವಲ್ಪ ಡಿಫರೆಂಟ್ ಆಗಿದೆ. ತಂದೆ ಸುಬ್ರಮಣಿಯಮ್ ಕೇರಳದ ತಮಿಳಿಯನ್, ಇವರ ತಾಯಿ ಮೋಹಿನಿ ಕೊಲ್ಕತಾದಲ್ಲಿ ವಾಸವಾಗಿರುವ ಸಿಂಧಿ ಕುಟುಂಬದವರು.
90 ರ ದಶಕದಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದ ಹೀರಾ ರಾಜಗೋಪಾಲ ಜೊತೆ ಅಜಿತ್ ಅಫೇರ್ ಇಟ್ಟುಕೊಂಡಿದ್ದಾರಾದರೂ ಮದುವೆಯಾಗಿದ್ದು ಮಾತ್ರ 1999ರಲ್ಲಿ ತೆರೆಕಂಡ ಅಮರಕಲಂ ತಮಿಳು ಚಿತ್ರದಲ್ಲಿ ತಮ್ಮ ಜೊತೆ ನಟಿಸಿದ್ದ ಶಾಲಿನಿ ಅವರನ್ನು.
ಅಜಿತ್ ಒಬ್ಬ ಕಾರ್ ರೇಸಿಂಗ್ ಡ್ರೈವರ್ ಕೂಡ ಆಗಿದ್ದಾರೆ ಅಂತ ಬಹಳ ಜನರಿಗೆ ಗೊತ್ತಿಲ್ಲ. ಮುಂಬೈ, ಚೆನೈ ಮತ್ತು ದೆಹಲಿ ಸರ್ಕ್ಯೂಟ್ ರೇಸ್ ಗಳಲ್ಲಿ ಅವರು ಭಾಗವಹಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಫಾರ್ಮುಲಾ ಚಾಂಪಿಯನ್ಶಿಪ್ಗಳಲ್ಲಿ ಭಾಗವಹಿಸಿರುವ ಕೆಲವೇ ಭಾರತೀಯರಲ್ಲಿ ಅಜಿತ್ ಒಬ್ಬರು.
2003 ರ ಫಾರ್ಮುಲಾ ಬಿ ಎಮ್ ಡಬ್ಲ್ಯೂ ಚಾಂಪಿಯನ್ ಶಿಪ್ನಲ್ಲಿ ಅಜಿತ್ ಭಾಗವಹಿಸಿದ್ದರು. ಅರ್ಮಾನ್ ಇಬ್ರಾಹಿಂ ಮತ್ತು ಪಾರ್ಥೀವ ಸುರೇಶ್ವರನ್ ಜೊತೆ ಅವರು 2010 ರಲ್ಲಿ ನಡೆದ ಫಾರ್ಮುಲಾ 2 ಚಾಂಪಿಯನ್ಶಿಪ್ ನಲ್ಲೂ ಭಾಗವಹಿಸಿದ್ದರು.
ಇದನ್ನೂ ಓದಿ: ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಬಿದ್ದ ಮಗನ ಜತೆ ಹೆಮ್ಮೆಯಿಂದ ಪೋಸ್ ಕೊಟ್ಟ ತಂದೆ; ನಗೆಪಾಟಲಿನ ವಿಡಿಯೋ ವೈರಲ್