ಹೇಗಿರಲಿದೆ ತರುಣ್ ಸುಧೀರ್-ಸೋನಲ್ ವಿವಾಹ? ಮಾಹಿತಿ ಕೊಟ್ಟ ಸ್ಯಾಂಡಲ್ವುಡ್ ಜೋಡಿ
ಬೆಂಗಳೂರಿನ ಕೆಂಗೇರಿ ಬಳಿ ಇರುವ ಪೂರ್ಣಿಮಾ ಕನ್ವೆಷನ್ ಹಾಲ್ನಲ್ಲಿ ವಿವಾಹ ನಡೆಯಲಿದೆ. ಆಗಸ್ಟ್ 10ರಂದು ಆರತಕ್ಷತೆ ಹಾಗೂ ಆಗಸ್ಟ್ 11ರಂದು ವಿವಾಹ ಕಾರ್ಯ ನಡೆಯಲಿದೆ. ತರುಣ್ ಸುಧೀರ್ ಹಾಗೂ ಸೋನಲ್ ‘ರಾಬರ್ಟ್’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ತರುಣ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದರೆ ಸೋನಲ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು.
ನಟಿ ಸೋನಲ್ ಮೊಂತೇರೋ ಹಾಗೂ ತರುಣ್ ಸುಧೀರ್ ಅವರು ಆಗಸ್ಟ್ 10-11ರಂದು ಬೆಂಗಳೂರಿನ ಕಲ್ಯಾಣ ಮಂಟಪದಲ್ಲಿ ವಿವಾಹ ಆಗುತ್ತಿದ್ದಾರೆ. ಆಗಸ್ಟ್ 10ರಂದು ಆರತಕ್ಷತೆ ಕಾರ್ಯಕ್ರಮ ನಡೆದರೆ ಆಗಸ್ಟ್ 11ರಂದು ವಿವಾಹ ಕಾರ್ಯಕ್ರಮ ನೆರವೇರುತ್ತಿದೆ. ವಿವಾಹದ ಬಗ್ಗೆ ಮಾಹಿತಿ ನೀಡಲು ಈ ದಂಪತಿ ಸುದ್ದಿಗೋಷ್ಠಿ ಕರೆದಿದ್ದಾರೆ. ಇದರಲ್ಲಿ ಮದುವೆ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಸೋನಲ್ ಹಾಗೂ ತರುಣ್ ಸುಧೀರ್ ಅವರು ಮೊದಲ ಬಾರಿಗೆ ಭೇಟಿ ಆಗಿದ್ದು ‘ರಾಬರ್ಟ್’ ಸಿನಿಮಾ ಸಂದರ್ಭದಲ್ಲಿ. ತರುಣ್ ಅವರು ‘ರಾಬರ್ಟ್’ ಚಿತ್ರ ನಿರ್ದೇಶನ ಮಾಡಿದರೆ, ಸೋನಲ್ ಮುಖ್ಯ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಜರ್ನಿ ಬಗ್ಗೆ, ಮದುವೆ ಬಗ್ಗೆ ಇವರು ಮಾಹಿತಿ ನೀಡಿದ್ದಾರೆ. ಅದರ ಲೈವ್ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.