ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ? ತರುಣ್ ಸುಧೀರ್ ನೀಡಿದ ಉತ್ತರ ಇಲ್ಲಿದೆ
ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಮಾತನಾಡಿದ್ದಾರೆ. ಕನ್ನಡದ ಕೆಲವು ಹೀರೋಗಳು ಒಂದಷ್ಟು ಸಿನಿಮಾಗಳಲ್ಲಿ ವಿಲನ್ ಶೇಡ್ ಇರುವ ಪಾತ್ರಗಳನ್ನು ಮಾಡಿದ್ದಾರೆ. ಆದರೆ ಇಂಥ ಸಿನಿಮಾಗಳು ಜನರಿಗೆ ಇಷ್ಟ ಆಗಲಿಲ್ಲ. ಆ ಕಾರಣದಿಂದ ಸಿನಿಮಾಗಳು ಜನರನ್ನು ಆಕರ್ಷಿಸಲು ಸೋತಿವೆಯೇ ಎಂಬ ಪ್ರಶ್ನೆ ಮೂಡುತ್ತದೆ.
ಖ್ಯಾತ ನಿರ್ದೇಶಕ ತರುಣ್ ಸುಧೀರ್ ಅವರು ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ. ಕನ್ನಡದ ಕೆಲವು ಹೀರೋಗಳು ಒಂದಷ್ಟು ಸಿನಿಮಾಗಳಲ್ಲಿ ವಿಲನ್ ಶೇಡ್ ಇರುವ ಪಾತ್ರಗಳನ್ನು ಮಾಡಿದ್ದಾರೆ. ‘ಮಾರ್ಟಿನ್’, ‘ಟಾಕ್ಸಿಕ್’ ಚಿತ್ರಗಳಲ್ಲಿ ಅದನ್ನು ಕಾಣಬಹುದು. ಆದರೆ ಇಂಥ ಸಿನಿಮಾಗಳು ಜನರಿಗೆ ಇಷ್ಟ ಆಗಲಿಲ್ಲ. ಆ ಕಾರಣದಿಂದ ಸಿನಿಮಾಗಳು ಜನರನ್ನು ಆಕರ್ಷಿಸಲು ಸೋತಿವೆಯೇ ಎಂಬ ಪ್ರಶ್ನೆ ಮೂಡುತ್ತದೆ. ಅದಕ್ಕೆ ತರುಣ್ ಸುಧೀರ್ ಅವರು ಉತ್ತರ ನೀಡಿದ್ದಾರೆ. ‘ಕೆಲವೊಮ್ಮೆ ಒಂದೊಂದ ರೀತಿಯ ಪ್ರಯೋಗ ಆಗುತ್ತದೆ. ರೋಬೋ 2 ಸಿನಿಮಾದಲ್ಲಿ ರಜನಿಕಾಂತ್ ಅವರೇ ಹೀರೋ-ವಿಲನ್ ಆಗಿದ್ದರು. ಜನರಿಗೆ ಏನು ಇಷ್ಟವೋ ಅದನ್ನೇ ಕೊಡಲು ನಾವು ಪ್ರಯತ್ನಿಸುತ್ತೇವೆ. ಕೆಲವೊಮ್ಮೆ ಅದು ತಪ್ಪಾಗುತ್ತದೆ. ಆದರೆ ಮತ್ತೆ ಬದಲಾವಣೆ ಬರುತ್ತದೆ. ಅದರಿಂದ ಚಿತ್ರರಂಗ ಮುಂದಕ್ಕೆ ಸಾಗುತ್ತದೆ’ ಎಂದು ತರುಣ್ ಸುಧೀರ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
