ದರ್ಶನ್ ನಂಬಿಕೊಂಡು ಹಲವು ಕುಟುಂಬಗಳು ಇವೆ: ತರುಣ್ ಸುಧೀರ್
ನಟ ದರ್ಶನ್ ಅವರಿಗೆ ಜಾಮೀನು ಸಿಕ್ಕಿದೆ. ಈ ಕುರಿತು ‘ಕಾಟೇರ’ ಸಿನಿಮಾದ ನಿರ್ದೇಶಕ ತರುಣ್ ಸುಧೀರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ನಮಗೆ ಬಹಳ ಖುಷಿ ಆಗಿದೆ. ಇಂದು ಹನುಮ ಜಯಂತಿ. ಪಾಸಿಟಿವ್ ವೈಬ್ ಇದೆ. ನಂಬಿದವರನ್ನು ಆಂಜನೇಯ ಕೈ ಬಿಡುವುದಿಲ್ಲ. ನ್ಯಾಯಾಲಯಕ್ಕೆ ಧನ್ಯವಾದ ಹೇಳುತ್ತೇನೆ’ ಎಂದು ತರುಣ್ ಸುಧೀರ್ ಅವರು ಹೇಳಿದ್ದಾರೆ.
‘ಜಾಮೀನು ಸಿಕ್ಕಿರುವುದು ಮಾತ್ರವಲ್ಲ, ಆದಷ್ಟು ಬೇಗ ದರ್ಶನ್ ಅವರು ಆರೋಪಮುಕ್ತರಾಗಿ ಹೊರಗೆ ಬರಲಿ. ಅವರ ಆರೋಗ್ಯದ ಬಗ್ಗೆಯೇ ನಮ್ಮ ಮೊದಲ ಕಾಳಜಿ ಇದೆ. ಯಾಕೆಂದರೆ, ಕನ್ನಡ ಚಿತ್ರರಂಗದಲ್ಲಿ 200, 300 ಕೋಟಿ ರೂಪಾಯಿ ವಹಿವಾಟು ನಡೆಸುವಂತಹ ನಟ ಅವರು. ಅವರನ್ನು ನಂಬಿಕೊಂಡು ಹಲವಾರು ಕುಟುಂಬಗಳು ಇವೆ. ಆದಷ್ಟು ಬೇಗ ಅವರು ಗುಣಮುಣರಾಗಲಿ ಅಂತ ಪ್ರಾರ್ಥಿಸುತ್ತೇವೆ’ ಎಂದು ನಿರ್ದೇಶಕ ತರುಣ್ ಸುಧೀರ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.