Priyank Kharge; ಜನ ಭಾರೀ ಬಹುಮತ ನೀಡಿ ಗೆಲ್ಲಿಸಿದಾಗ ಸಚಿವ ಸ್ಥಾನಗಳಿಗೆ ಸಹಜವಾಗೇ ಪೈಪೋಟಿ ಜಾಸ್ತಿಯಿರುತ್ತದೆ: ಪ್ರಿಯಾಂಕ್ ಖರ್ಗೆ

Priyank Kharge; ಜನ ಭಾರೀ ಬಹುಮತ ನೀಡಿ ಗೆಲ್ಲಿಸಿದಾಗ ಸಚಿವ ಸ್ಥಾನಗಳಿಗೆ ಸಹಜವಾಗೇ ಪೈಪೋಟಿ ಜಾಸ್ತಿಯಿರುತ್ತದೆ: ಪ್ರಿಯಾಂಕ್ ಖರ್ಗೆ

ಅರುಣ್​ ಕುಮಾರ್​ ಬೆಳ್ಳಿ
|

Updated on: May 20, 2023 | 12:20 PM

ಜನರಿಗೆ ನೀಡಿರುವ 5 ಗ್ಯಾರೆಂಟಿಗಳನ್ನು ಮೊದಲ ಸಂಪುಟ ಸಭೆಯಲ್ಲಿ ಅನುಮೋದಿಸಲಾಗುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಬೆಂಗಳೂರು: ಎರಡನೇ ಬಾರಿಗೆ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಸಚಿವ ಸಂಪುಟಕ್ಕೆ ಶಾಸಕರನ್ನು ಆಯ್ಕೆ ಮಾಡಲು ಪಕ್ಷದ ವರಿಷ್ಠರು ಸಾಕಷ್ಟು ಕಸರತ್ತು ನಡೆಸಬೇಕಾಯಿತೆನ್ನುವ ಸಂಗತಿಯನ್ನು ಅಂಗೀಕರಿಸುತ್ತಾರೆ. ಕಂಠೀರವ ಸ್ಟೇಡಿಯಂ (Kanteerava Stadium) ಬಳಿ ಇಂದು ಟಿವಿ9 ವರದಿಗಾರನೊಂದಿಗೆ ಮಾತಾಡಿದ ಪ್ರಿಯಾಂಕ್, ಜನ ಕಾಂಗ್ರೆಸ್ ಭಾರೀ ಬಹುಮತ (clear mandate) ನೀಡಿರುವುದರಿಂದ ಸಚಿವ ಸ್ಥಾನಗಳಿಗೆ ಸಹಜವಾಗಿಯೇ ಪೈಪೋಟಿ ಜಾಸ್ತಿ ಇರುತ್ತದೆ. ಅದರೆ ವರಿಷ್ಥರು ಎಲ್ಲವನ್ನೂ ಸಮಂಜಸವಾಗಿ ಬಗೆಹರಿಸಿದ್ದಾರೆ. ಜನರಿಗೆ ನೀಡಿರುವ 5 ಗ್ಯಾರೆಂಟಿಗಳನ್ನು ಮೊದಲ ಸಂಪುಟ ಸಭೆಯಲ್ಲಿ ಅನುಮೋದಿಸಲಾಗುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ