ಭಾರಿ ಮಳೆ ಗಾಳಿಗೆ ಹೊಸಕೋಟೆ ಟೋಲ್ ಪ್ಲಾಜಾ ಬಳಿ ಮುರಿದು ಬಿದ್ದ ಬೃಹತ್ ಜಾಹೀರಾತು ಫಲಕ
ಭಾರೀ ಮಳೆಗೆ ಹೊಸಕೋಟೆ ಟೋಲ್ ಸಮೀಪ ಬೃಹತ್ ಜಾಹೀರಾತು ಫಲಕ ಧರೆಗೆ ಬಿದ್ದಿದೆ. ದೊಡ್ಡ ಅಮಾನಿಕೆರೆ ನಾಲದ ರಾಜಕಾಲುವೆ ದಂಡೆ ಮೇಲೆ ಇದ್ದ ಬೃಹತ್ ಜಾಹಿರಾತು ಫಲಕ ಮತ್ತು ಎರಡು ಬೃಹತ್ ಕಂಬಗಳು ಗುರುವಾರ ಸಂಜೆ ಬಿರುಗಾಳಿಯ ರಭಸಕ್ಕೆ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಈಚರ್ ವಾಹನದ ಮೇಲೆ ಬಿದ್ದಿದೆ. ನಾಮಫಲಕ ಬಿದ್ದ ರಭಸಕ್ಕೆ ಕ್ಯಾಂಟರ್ ವಾಹನ ಸಂಪೂರ್ಣ ನುಚ್ಚುನೂರಾಗಿದ್ದು, ಬಾರಿ ಅನಾಹುತ ತಪ್ಪಿದಂತಾಗಿದೆ. ಈ ಘಟನೆಯಿಂದಾಗಿ ಸರ್ವಿಸ್ ರಸ್ತೆಯಲ್ಲಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಉಂಟಾಗಿದ್ದು, ಕೊನೆಗೆ ಹೊಸಕೋಟೆ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಟ್ರಾಫಿಕ್ ಕ್ಲಿಯರ್ ಮಾಡಲು ಹರಸಾಹವೇ ಪಡಬೇಕಾಯ್ತು.
ಬೆಂಗಳೂರು, (ಮೇ 22): ಭಾರೀ ಮಳೆಗೆ (heavy rain) ಹೊಸಕೋಟೆ (Hoskote) ಟೋಲ್ ಸಮೀಪ ಬೃಹತ್ ಜಾಹೀರಾತು ಫಲಕ ಧರೆಗೆ ಬಿದ್ದಿದೆ. ದೊಡ್ಡ ಅಮಾನಿಕೆರೆ ನಾಲದ ರಾಜಕಾಲುವೆ ದಂಡೆ ಮೇಲೆ ಇದ್ದ ಬೃಹತ್ ಜಾಹಿರಾತು ಫಲಕ ಮತ್ತು ಎರಡು ಬೃಹತ್ ಕಂಬಗಳು ಗುರುವಾರ ಸಂಜೆ ಬಿರುಗಾಳಿಯ ರಭಸಕ್ಕೆ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಈಚರ್ ವಾಹನದ ಮೇಲೆ ಬಿದ್ದಿದೆ. ನಾಮಫಲಕ ಬಿದ್ದ ರಭಸಕ್ಕೆ ಕ್ಯಾಂಟರ್ ವಾಹನ ಸಂಪೂರ್ಣ ನುಚ್ಚುನೂರಾಗಿದ್ದು, ಬಾರಿ ಅನಾಹುತ ತಪ್ಪಿದಂತಾಗಿದೆ. ಈ ಘಟನೆಯಿಂದಾಗಿ ಸರ್ವಿಸ್ ರಸ್ತೆಯಲ್ಲಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಉಂಟಾಗಿದ್ದು, ಕೊನೆಗೆ ಹೊಸಕೋಟೆ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಟ್ರಾಫಿಕ್ ಕ್ಲಿಯರ್ ಮಾಡಲು ಹರಸಾಹವೇ ಪಡಬೇಕಾಯ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 22, 2026 03:55 PM
Follow Us
