Daily Devotional: ಮಕ್ಕಳಿಗೆ ಕಿವಿ ಚುಚ್ಚುವುದು ಯಾಕೆ? ಕಾರಣ ಇಲ್ಲಿದೆ ನೋಡಿ

Updated on: Nov 29, 2025 | 6:39 AM

ಪ್ರಾಚೀನ ಭಾರತೀಯ ಸಂಸ್ಕೃತಿಯಲ್ಲಿ ಕಿವಿ ಚುಚ್ಚುವುದು (ಕರ್ಣವೇದ) ಕೇವಲ ಫ್ಯಾಷನ್ ಆಗಿರದೆ, ಧಾರ್ಮಿಕ ಮತ್ತು ವೈಜ್ಞಾನಿಕ ಆಚರಣೆಯಾಗಿದೆ. ಇದು ಮಕ್ಕಳು ಮತ್ತು ಪುರುಷರಿಗೂ ಶುಭ ಸಂಕೇತವಾಗಿದೆ. ಮಾನಸಿಕ ನೆಮ್ಮದಿ, ಸಕಾರಾತ್ಮಕ ಚಿಂತನೆ, ಆರೋಗ್ಯ ವೃದ್ಧಿ ಮತ್ತು ಗ್ರಹಗಳ ಬಲವರ್ಧನೆ ಸೇರಿದಂತೆ ಹಲವು ಪ್ರಯೋಜನಗಳನ್ನು ನೀಡುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಲಾಗಿದೆ.

ಪ್ರಾಚೀನ ಭಾರತೀಯ ಸಂಸ್ಕೃತಿಯಲ್ಲಿ ಕಿವಿ ಚುಚ್ಚುವುದನ್ನು ಕರ್ಣವೇದ ಎಂದೂ ಕರೆಯುತ್ತಾರೆ. ಇದು ಶತಮಾನಗಳಿಂದಲೂ ರೂಢಿಯಲ್ಲಿರುವ ಒಂದು ಪ್ರಮುಖ ಆಚರಣೆಯಾಗಿದೆ. ಕೇವಲ ಮಹಿಳೆಯರಿಗಷ್ಟೇ ಅಲ್ಲದೆ, ಗಂಡು ಮಕ್ಕಳಿಗೂ ಚಿಕ್ಕ ವಯಸ್ಸಿನಲ್ಲಿ ಕಿವಿ ಚುಚ್ಚುವ ಪದ್ಧತಿ ಇತ್ತು. ಇದು ಕೇವಲ ಒಂದು ಫ್ಯಾಷನ್ ಆಗಿರದೇ, ವೈಜ್ಞಾನಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿದೆ ಎಂದು ಖ್ಯಾತ ಜ್ಯೋತಿಷಿ ಡಾ.ಬಸವರಾಜ್​​ ಗುರೂಜಿ  ಹೇಳಿದ್ದಾರೆ. ಈ ಆಚರಣೆಯಿಂದ ಮಾನಸಿಕ ಶಾಂತಿ, ಸಕಾರಾತ್ಮಕ ಆಲೋಚನೆಗಳು, ತಾಳ್ಮೆ ಮತ್ತು ಪ್ರೀತಿಯನ್ನು ಉತ್ತೇಜಿಸುತ್ತದೆ. ದುಷ್ಟ ಶಕ್ತಿಗಳಿಂದ ರಕ್ಷಣೆ, ಉತ್ತಮ ಆರೋಗ್ಯ, ಪೂರ್ವ ಜನ್ಮದ ಪಾಪಗಳ ಇಳಿಕೆ ಮತ್ತು ಗ್ರಹಗಳ ಬಲವರ್ಧನೆಯಂತಹ ಪ್ರಯೋಜನಗಳನ್ನು ಸಹ ಇದು ನೀಡುತ್ತದೆ. ಎರಡೂ ಕಿವಿಗಳನ್ನು ಚುಚ್ಚಿಕೊಳ್ಳುವುದು ಶುಭಕರವೆಂದು ಪರಿಗಣಿಸಲಾಗುತ್ತದೆ. ಈ ಸಂಪ್ರದಾಯವು ಭಾರತದ ಶ್ರೀಮಂತ ಪರಂಪರೆಯ ಭಾಗವಾಗಿದೆ ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 29, 2025 06:28 AM