AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಷಬ್ ಶೆಟ್ಟಿ ಮೊತ್ತ ಮೊದಲು ಬಣ್ಣ ಹಚ್ಚಿದ್ದೆಲ್ಲಿ? ಬಾಲ್ಯದ ಆ ದಿನಗಳ ನೆನಪಿಸಿಕೊಂಡ ಡಿವೈನ್ ಸ್ಟಾರ್

ರಿಷಬ್ ಶೆಟ್ಟಿ ಮೊತ್ತ ಮೊದಲು ಬಣ್ಣ ಹಚ್ಚಿದ್ದೆಲ್ಲಿ? ಬಾಲ್ಯದ ಆ ದಿನಗಳ ನೆನಪಿಸಿಕೊಂಡ ಡಿವೈನ್ ಸ್ಟಾರ್

Ganapathi Sharma
|

Updated on: Nov 29, 2025 | 7:22 AM

Share

ಗೋವಾ ಚಲನಚಿತ್ರೋತ್ಸವದಲ್ಲಿ ಯಕ್ಷಗಾನದ ಬಗ್ಗೆ ರಿಷಬ್ ಶೆಟ್ಟಿ ಮಾತು: ಸಿನಿಮಾ ಕಥೆಗಳಿಗೂ ಕರಾವಳಿಯ ಕಲೆ ಪ್ರೇರಣೆ ಎಂದ ಡಿವೈನ್ ಸ್ಟಾರ್. ಯಕ್ಷಗಾನದ ಇತಿಹಾಸ, ಕರ್ನಾಟಕದ ಇತರ ಕಲೆಗಳಿಗೆ ಯಕ್ಷಗಾನದ ಕೊಡುಗೆ ಏನು ಎಂಬುದನ್ನು ನೆನಪಿಸಿದ ರಿಷಬ್ ಶೆಟ್ಟಿ, ತಾವು ಬಾಲ್ಯದಲ್ಲಿ ಮೊದಲ ಬಾರಿಗೆ ಯಕ್ಷಗಾನ ಕಲಾವಿದನಾಗಿ ಬಣ್ಣ ಹಚ್ಚಿದ್ದನ್ನು ನೆಪಿಸಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ.

ಪಣಜಿ, ನವೆಂಬರ್ 29: ಕಾಂತಾರ ಖ್ಯಾತಿಯ ನಟ ರಿಷಬ್ ಶೆಟ್ಟಿ (Rishab Shetty) ಮೊತ್ತ ಮೊದಲು ಬಣ್ಣ ಹಚ್ಚಿದ್ದು ಯಾವಾಗ ಗೊತ್ತಾ? ಈ ಹಿಂದೆ ಒಮ್ಮೆ ಅವರು ಈ ಬಗ್ಗೆ ಹೇಳಿಕೊಂಡಿದ್ದರು. ಇದೀಗ, ಗೋವಾದಲ್ಲಿ ನಡೆದ 56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ಮತ್ತೆ ಮಾತನಾಡಿದ್ದಾರೆ. ಬಾಲ್ಯದಲ್ಲಿ 6ನೇ ತರಗತಿಯಲ್ಲಿದ್ದಾಗ ಮೊತ್ತ ಮೊದಲ ಬಾರಿಗೆ ಯಕ್ಷಗಾನದಲ್ಲಿ ಬಣ್ಣ ಹಚ್ಚಿದ್ದೆ ಎಂದು ಅವರು ನೆನಪಿಸಿಕೊಂಡಿದ್ದಾರೆ. ಚಲನಚಿತ್ರೋತ್ಸವದ ಸಮಾರೋಪ ಸಮಾರಂಭ ಶುಕ್ರವಾರ ನಡೆದಿದ್ದು, ಮಂಗಳೂರಿನ ಕಲಾವಿದೆ ವಿದ್ಯಾ ಕೋಳ್ಯೂರು ನೇತೃತ್ವದ ಯಕ್ಷಗಾನ ತಂಡದ ವತಿಯಿಂದ ಕಿರು ಪ್ರದರ್ಶನ ಆಯೋಜಿಸಲಾಗಿತ್ತು. ಕಲಾವಿದರನ್ನು ಅಭಿನಂದಿಸಲು ವೇದಿಕೆಗೆ ಬಂದ ರಿಷಬ್ ಶೆಟ್ಟಿ, ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.

‘ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಕರ್ನಾಟಕದ ಜನರಿಗೆ ರಾಮಾಯಣ, ಮಹಾಭಾರತದಂಥ ಪುರಾಣ ಕಥೆಗಳ ಬಗ್ಗೆ ಅರಿವು ಮೂಡಿಸುವುದೇ ಯಕ್ಷಗಾನ. ವಿವಿಧ ಪ್ರಸಂಗಗಳ ರೂಪದಲ್ಲಿ ಪುರಾಣ ಕಥೆಗಳನ್ನು ಯಕ್ಷಗಾನದಲ್ಲಿ ಪ್ರದರ್ಶಿಸಲಾಗುತ್ತದೆ. ಇದು ಕರ್ನಾಟಕದ ಶ್ರೇಷ್ಠ ಕಲೆ. ಇದಕ್ಕೆ ಸುಮಾರು 500 ವರ್ಷಗಳ ಇತಿಹಾಸವಿದೆ. ನಾನು ಸಹ ಮೊದಲ ಬಾರಿಗೆ 6ನೇ ತರಗತಿಯಲ್ಲಿದ್ದಾಗ ಯಕ್ಷಗಾನ ಕಲಾವಿದನಾಗಿಯೇ ಬಣ್ಣ ಹಚ್ಚಿದೆ. ಕಲಾ ಕ್ಷೇತ್ರಕ್ಕೆ ಯಕ್ಷಗಾನ ಕಲಾವಿದರ ಕೊಡುಗೆ ಬಹಳ ದೊಡ್ಡದಿದೆ. ಸಿನಿಮಾ ಕ್ಷೇತ್ರಕ್ಕೆ ಬಂದ ಮೇಲೆಯೂ ನನ್ನ ಮೇಲೆ ಯಕ್ಷಗಾನ ಪ್ರಭಾವ ಬೀರಿದೆ. ನನ್ನ ಅನೇಕ ಸಿನಿಮಾಗಳ ಕಥೆಗಳಿಗೂ ಯಕ್ಷಗಾನ ಮತ್ತು ಕರಾವಳಿಯ ಸಂಸ್ಕೃತಿ ಪ್ರೇರಣೆಯಾಗಿದೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

ವಿಡಿಯೋ ಕೃಪೆ: ದೂರದರ್ಶನ ಸಹ್ಯಾದ್ರಿ

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ