ಕರ್ನಾಟಕದ 40 ಪರ್ಸೆಂಟ್ ಸರ್ಕಾರ ಇಡೀ ದೇಶದಲ್ಲೇ ರಾಜ್ಯಕ್ಕೆ ಕೆಟ್ಟ ಹೆಸರು ತಂದಿದೆ: ಡಿಕೆ ಶಿವಕುಮಾರ
ಮೂರು ವರ್ಷಗಳ ಹಿಂದೆ ಬಿಜೆಪಿಯವರು ನನ್ನ ಮೇಲೆ ಅರೋಪಗಳನ್ನು ಹೊರೆಸಿದ್ದರು, ನಂತರದ ಅವಧಿಯಲ್ಲಿ ಅವರಿಗೆ ನನ್ನ ವಿರುದ್ದ ಮಾಡಿದ ಆರೋಪಗಳನ್ನು ಸಾಬೀತು ಮಾಡಲು ಸಾಧ್ಯವಾಗಲಿಲ್ಲ ಎಂದು ಶಿವಕುಮಾರ ಹೇಳಿದರು.
ಚಿತ್ರದುರ್ಗ: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ, 40 ಪರ್ಸೆಂಟ್ ಕಮೀಶನ್ ಪಡೆದು ರಾಜ್ಯಕ್ಕೆ ಇಡೀ ದೇಶದಲ್ಲೇ ಕೆಟ್ಟ ಹೆಸರು ತಂದಾಗಿದೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಇಂದು ಚಿತ್ರದುರ್ಗದಲ್ಲಿ ಹೇಳಿದರು. ಮೂರು ವರ್ಷಗಳ ಹಿಂದೆ ಬಿಜೆಪಿಯವರು ನನ್ನ ಮೇಲೆ ಅರೋಪಗಳನ್ನು ಹೊರೆಸಿದ್ದರು, ಆದರೆ ನಂತರದ ಅವಧಿಯಲ್ಲಿ ಅವರಿಗೆ ನನ್ನ ವಿರುದ್ದ ಮಾಡಿದ ಆರೋಪಗಳನ್ನು ಸಾಬೀತು ಮಾಡಲು ಸಾಧ್ಯವಾಗಲಿಲ್ಲ, ಮುಂದೆಯೂ ಅಗೋದಿಲ್ಲ. ಲಂಚ ಮಂಚ ಮೊದಲಾದವುಗಳೆಲ್ಲ ಬಿಜೆಪಿಯವರಿಗೆ ಮೊದಲಿನಿಂದಲೂ ಬಳುವಳಿಯಾಗಿ ಸಿಕ್ಕಿರುವಂಥವು ಎಂದು ಶಿವಕುಮಾರ ಹೇಳಿದರು.