ಮಂಡ್ಯ: ಪೇಸಿಎಮ್ ಪೋಸ್ಟರ್ ಅಂಟಿಸುವುದನ್ನು ತಡೆದ ಪೊಲೀಸರೊಂದಿಗೆ ಕಾಂಗ್ರೆಸ್ ಕಾರ್ಯಕರ್ತರ ವಾಗ್ವಾದ
ಮಂಡ್ಯದ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಪೇಸಿಎಮ್ ಪೋಸ್ಟರ್ಗಳನ್ನು ಅಂಟಿಸಲು ಪೊಲೀಸರು ಅಡ್ಡಿಪಡಿಸಿದ್ದರಿಂದ ಮಾತಿನ ಚಕಮಕಿ ಶುರುವಾಯಿತು.
ಮಂಡ್ಯ: ಪೇಸಿಎಮ್ (PayCM) ಅಭಿಯಾನ ಕಾಂಗ್ರೆಸ್ ಮುಂದುವರಿಸಿರುವಂತೆಯೇ ಪಕ್ಷದ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಮತ್ತು ವಾಗ್ವಾದಗಳು ನಡೆಯುತ್ತಿವೆ. ಮಂಡ್ಯದ (Mandya) ಕೆ ಎಸ್ ಆರ್ ಟಿ ಸಿ ಬಸ್ ನಿಲ್ಧಾಣದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ ರವೀಂದ್ರ (Dr Ravindra) ನೇತೃತ್ವದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಪೇಸಿಎಮ್ ಪೋಸ್ಟರ್ ಗಳನ್ನು ಅಂಟಿಸಲು ಪೊಲೀಸರು ಅಡ್ಡಿಪಡಿಸಿದ್ದರಿಂದ ಮಾತಿನ ಚಕಮಕಿ ಶುರುವಾಯಿತು. ರವೀಂದ್ರ ಅವರು ಪೊಲೀಸರನ್ನು ಹೆದರಿಸುವ ಧಾಟಿಯಲ್ಲಿ ಮಾತಾಡುವುದನ್ನು ವಿಡಿಯೋದಲ್ಲಿ ನೋಡಬಹುದು.
Latest Videos