ನನ್ನ ಬಗ್ಗೆ ಗೊತ್ತಿರುವವರು ಕೈ ಮೇಲೆತ್ತಿ ಅಂತ ಮೊಹಮ್ಮದ್ ನಲಪಾಡ್ ಹೇಳಿದರೆ ಒಬ್ಬೇಒಬ್ಬ ಕಾರ್ಯಕರ್ತ ಕೈ ಎತ್ತಲಿಲ್ಲ!

ಚಿತ್ರದುರ್ಗದಲ್ಲಿ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಪಕ್ಷದ ಕಾರ್ಯಕರ್ತರ ನಡುವೆ ನಗೆಪಾಟೀಲಿಗೀಡಾದ ಪ್ರಸಂಗವನ್ನು ಇದು ವಿವರಿಸುತ್ತದೆ,

TV9kannada Web Team

| Edited By: Arun Belly

Sep 28, 2022 | 11:31 AM

ಚಿತ್ರದುರ್ಗ: ಮೊಹಮ್ಮದ್ ನಲಪಾಡ್ ರನ್ನು (Mohammad Nalapad) ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರನ್ನಾಗಿ ಮಾಡಿರುವ ರಾಜ್ಯದ ಹಿರಿಯ ನಾಯಕರು ಮತ್ತು ಕೆಪಿಸಿಸಿ (KPCC) ಪದಾಧಿಕಾರಿಗಳು ನೋಡಲೇಬೇಕಿರುವ ವಿಡಿಯೋ ಇದು! ಚಿತ್ರದುರ್ಗದಲ್ಲಿ ನಲಪಾಡ್ ಕಾಂಗ್ರೆಸ್ ಕಾರ್ಯಕರ್ತರ (Congress workers) ನಡುವೆ ನಗೆಪಾಟೀಲಿಗೀಡಾದ ಪ್ರಸಂಗವನ್ನು ಇದು ವಿವರಿಸುತ್ತದೆ. ಖುದ್ದು ನಲಪಾಡ್ ನೆರೆದಿರುವ ಕಾರ್ಯಕರ್ತರನ್ನು ಉದ್ದೇಶಿಸಿ ನಿಮ್ಮಲ್ಲಿ ಎಷ್ಟು ಜನಕ್ಕೆ ನಾನು ಯಾರು ಅನ್ನೋದು ಗೊತ್ತಿದೆ ಮತ್ತು ಗೊತ್ತಿರುವವರು ಕೈ ಮೇಲೆತ್ತಿ ಎಂಬಂತೆ ತನ್ನ ಕೈ ಮೇಲೆತ್ತಿ ಹೇಳುತ್ತಾರೆ. ಒಬ್ಬೇಒಬ್ಬ ಕಾರ್ಯಕರ್ತ ಕೈ ಎತ್ತುವುದಿಲ್ಲ. ಇದು ನಾವಲ್ಲ ಖುದ್ದು ಮೊಹಮ್ಮದ್ ನಲಪಾಡ್ ಹೇಳುತ್ತಾರೆ. ಇಂಥ ಯುವ ನಾಯಕರನ್ನು ಕಟ್ಟಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಮರಳುವ ಆಸೆ ಇಟ್ಟುಕೊಂಡಿದೆ!

Follow us on

Click on your DTH Provider to Add TV9 Kannada