ಪಿಎಫ್ಐ ಕಾರ್ಯಕರ್ತರು ನಡೆಸಿರುವ ಸಮಾಜ ಮತ್ತು ದೇಶದ್ರೋಹಿ ಕೆಲಸಗಳನ್ನು ಜನರ ಮುಂದಿಡಿ: ಹೆಚ್ ಡಿ ಕುಮಾರಸ್ವಾಮಿ
ಈಗಾಗಲೇ ಬಂಧನಕ್ಕೊಳಗಾಗಿರುವ ಪಿಎಫ್ಐ ಕಾರ್ಯಕರ್ತರು ನಡೆಸಿರುವ ಸಮಾಜ ವಿರೋಧಿ ಚಟುವಟಿಕೆಗಳನ್ನು ಜನರ ಮುಂದಿಡಬೇಕೆಂದು ಕುಮಾರಸ್ವಾಮಿ ಸರ್ಕಾರವನ್ನು ಆಗ್ರಹಿಸಿದರು.
ರಾಮನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತಾಡಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ (PFI) ಸಂಘಟನೆ ಮೇಲೆ 5 ವರ್ಷಗಳ ಕಾಲ ನಿಷೇಧ (ban) ಹೇರಿರುವುದನ್ನು ಸ್ವಾಗತಿಸಿದರು. ಸಮಾಜ ದ್ರೋಹಿ, ರಾಷ್ಟ್ರದ್ರೋಹಿ ಚಟುವಟಿಕೆಗಳಲ್ಲಿ ಯಾವುದೇ ಸಂಘಟನೆ ಪಾಲ್ಗೊಂಡಿದ್ದರೂ ಅದನ್ನು ಬ್ಯಾನ್ ಮಾಡಬೇಕೆಂದು ಹೇಳಿದ ಕುಮಾರಸ್ವಾಮಿ, ಈಗಾಗಲೇ ಬಂಧನಕ್ಕೊಳಗಾಗಿರುವ ಪಿಎಫ್ಐ ಕಾರ್ಯಕರ್ತರು ನಡೆಸಿರುವ ಸಮಾಜ ವಿರೋಧಿ ಚಟುವಟಿಕೆಗಳನ್ನು ಜನರ ಮುಂದಿಟ್ಟರೆ ಅವರ ಪರ ಸಹಾನುಭೂತಿ ಇಟ್ಟುಕೊಂಡು ಪ್ರತಿಭಟನೆ ನಡೆಸಲು ಶುರುಮಾಡಿರುವ ಜನರಿಗೆ ವಾಸ್ತವತೆ ಮನದಟ್ಟಾಗುತ್ತದೆ ಎಂದರು.
Latest Videos