ದರ್ಶನ್ ಕ್ಯಾರವಾನ್ ಒಳಗೆ ಏನು ನಡೆಯುತ್ತದೆ? ವಿವರಿಸಿದ ಅಚ್ಯುತ್ ಕುಮಾರ್

Updated on: Dec 03, 2025 | 4:11 PM

ದರ್ಶನ್ ಮತ್ತು ಅಚ್ಯುತ್ ಕುಮಾರ್ ಅವರು ಜೊತೆಯಾಗಿ ನಟಿಸಿದ ನಾಲ್ಕನೇ ಸಿನಿಮಾ ‘ದಿ ಡೆವಿಲ್’. ದರ್ಶನ್ ಜೊತೆ ಕೆಲಸ ಮಾಡಿದ ಅನುಭವವನ್ನು ಸುದ್ದಿಗೋಷ್ಠಿಯಲ್ಲಿ ಅಚ್ಯುತ್ ಅವರು ಹಂಚಿಕೊಂಡರು. ಕ್ಯಾರವಾನ್ ಇಳಿದು ಬರುವಾಗಲೇ ದರ್ಶನ್ ಅವರು ಸನ್ನಿವೇಶಕ್ಕೆ ತಯಾರಾಗಿ ಬರುತ್ತಾರೆ ಎಂದು ಅಚ್ಯುತ್ ಹೇಳಿದರು.

ಡಿಸೆಂಬರ್ 11ರಂದು ‘ದಿ ಡೆವಿಲ್’ ಸಿನಿಮಾ (The Devil) ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ದರ್ಶನ್ ಜೊತೆ ಅಚ್ಯುತ್ ಕುಮಾರ್, ರಚನಾ ರೈ, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಅಚ್ಯುತ್ ಕುಮಾರ್ ಅವರು ದರ್ಶನ್ ಅವರ ಬಗ್ಗೆ ಮಾತನಾಡಿದರು. ಕ್ಯಾರವಾನ್ ಒಳಗೆ ದರ್ಶನ್ (Darshan) ಅವರು ತಯಾರಿ ಮಾಡಿಕೊಳ್ಳುತ್ತಾರೆ ಎಂಬುದನ್ನು ಅವರು ತಿಳಿಸಿದರು. ‘ಈ ನಿರ್ಮಾಣ ಸಂಸ್ಥೆಯಲ್ಲಿ ಎಲ್ಲವೂ ಪ್ಲ್ಯಾನ್ ಪ್ರಕಾರ ನಡೆಯುತ್ತದೆ. ದರ್ಶನ್ ಅವರು ತುಂಬಾ ಕೂಲ್ ಆಗಿ ಕೆಲಸ ಮಾಡುತ್ತಾರೆ. ಅವರು ಕ್ಯಾರವಾನ್​ನಿಂದ ಇಳಿದು ಬರುವಾಗಲೇ ಆ ಸನ್ನಿವೇಶಕ್ಕೆ ತಯಾರಾಗಿ ಬಂದಿರುತ್ತಾರೆ. ಅದನ್ನು ಬಿಟ್ಟು ಬೇರೆ ಯಾವುದೇ ರೀತಿಯ ಅಡೆತಡೆಗಳನ್ನು ಅವರು ಉಂಟುಮಾಡಲ್ಲ. ಜೊತೆಗಿರುವ ನಟರು ಹೊಸಬರಾಗಲಿ, ಹಳಬರಾಗಲಿ ಅವರ ಜೊತೆ ಸೇರಿ ಸನ್ನಿವೇಶ ಕಟ್ಟುವುದರ ಕಡೆಗೆ ಮಾತ್ರ ಅವರ ಗಮನ ಇರುತ್ತದೆ. ಆ ರೀತಿ ವೃತ್ತಿಪರತೆಯನ್ನು ಮೈಗೂಡಿಸಿಕೊಂಡ ನಟ ನಮ್ಮ ದರ್ಶನ್ ಅವರು’ ಎಂದು ಅಚ್ಯುತ್ ಕುಮಾರ್ (Achuth Kumar) ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.