ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಪುಂಡರ ಅಟ್ಟಹಾಸ; ಬಿಬಿಎಂಪಿ ಕಸದ ಆಟೋ ಚಾಲಕನ ಮೇಲೆ ಮನಸೋ ಇಚ್ಚೆ ಥಳಿಸಿ ಹಲ್ಲೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 05, 2023 | 8:21 AM

ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಪುಂಡರ ಅಟ್ಟಹಾಸಕ್ಕೆ ಬ್ರೇಕ್​ ಬಿಳುತ್ತಿಲ್ಲ. ಅದರಂತೆ ಇದೀಗ ಬೆಂಗಳೂರಿನ ಕಾಟನ್ ಪೇಟೆಯ ಜಾಲಿ ಮೊಹಲ್ಲಾದಲ್ಲಿ ಹಾಡಹಗಲೇ ಬಿಬಿಎಂಪಿ ಕಸದ ಆಟೋ ಚಾಲಕ ಸತೀಶ್ ಎಂಬಾತನನ್ನ ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಪುಂಡರ ಅಟ್ಟಹಾಸಕ್ಕೆ ಬ್ರೇಕ್​ ಬಿಳುತ್ತಿಲ್ಲ. ಅದರಂತೆ ಇದೀಗ ಬೆಂಗಳೂರಿನ ಕಾಟನ್ ಪೇಟೆ (Cotton Pete)ಯ ಜಾಲಿ ಮೊಹಲ್ಲಾದಲ್ಲಿ ಹಾಡಹಗಲೇ ಬಿಬಿಎಂಪಿ ಕಸದ ಆಟೋ ಚಾಲಕ ಸತೀಶ್ ಎಂಬಾತನನ್ನ ಅಡ್ಡಗಟ್ಟಿ ಅಟ್ಯಾಕ್ ಮಾಡಿದ್ದಾರೆ. ಆತನನ್ನ ದೊಣ್ಣೆ, ಬ್ಯಾಟ್​ನಿಂದ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ. ಕಿಡಿಗೇಡಿಗಳ ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕೆಲಸ ಮುಗಿಸಿ 11 ಗಂಟೆ ಸುಮಾರಿಗೆ ಮನೆಗೆ ಹೊರಟಿದ್ದ ಚಾಲಕ ಸತೀಶ್​ನನ್ನ ಜಾಲಿ ಮೊಹಲ್ಲಾ ರಸ್ತೆಯಲ್ಲಿ ಅಡ್ಡಗಟ್ಟಿ ಏಕಾಏಕಿ ರಾಜೇಂದ್ರ, ಮನು ಮತ್ತು ಆವರ ಗ್ಯಾಂಗ್​ನಿಂದ ಅಟ್ಯಾಕ್ ಮಾಡಿದೆ. ಕೂದಲೆಳೆ ಅಂತರದಲ್ಲಿ ಚಾಲಕ ಸತೀಶ್ ಹಲ್ಲೆಕೋರರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಇದೀಗ ಆಟೋ ಚಾಲಕ ಸತೀಶ್​ಗೆ ಗಂಭೀರ ಗಾಯಗಳಾಗಿದ್ದು, ಹಲ್ಲೆ ನಡೆಸಿದ ರಾಜೇಂದ್ರ, ಮನು ಮತ್ತು ಗ್ಯಾಂಗ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ