AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ಬದಿ ಸೊಪ್ಪು ಮಾರುತ್ತಿದ್ದ ವೃದ್ಧೆ ಮೇಲೆ ಮಚ್ಚಿನಿಂದ ಹಲ್ಲೆ; ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ

ಜಯನಗರದ 26ನೇ ಕ್ರಾಸ್ ನಲ್ಲಿರುವ ಬಾಲಾಜಿ ಮೆಡಿಕಲ್ ಬಳಿಯ ಫುಟ್ ಪಾತ್​ ಮೇಲೆ ಸೊಪ್ಪು ಮಾರುತ್ತಿದ್ದ ಚಂದ್ರಮ್ಮ ಎಂಬ ವೃದ್ಧೆಯ ಮೇಲೆ ದುಷ್ಕರ್ಮಿಗಳು ಮಾರಾಕಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.

ರಸ್ತೆ ಬದಿ ಸೊಪ್ಪು ಮಾರುತ್ತಿದ್ದ ವೃದ್ಧೆ ಮೇಲೆ ಮಚ್ಚಿನಿಂದ ಹಲ್ಲೆ; ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ
ವೃದ್ಧೆ ಚಂದ್ರಮ್ಮ
Follow us
TV9 Web
| Updated By: ಆಯೇಷಾ ಬಾನು

Updated on: Jul 04, 2023 | 10:08 AM

ಬೆಂಗಳೂರು: ರಸ್ತೆ ಬದಿ ಸೊಪ್ಪು ಮಾರುತ್ತಿದ್ದ ವೃದ್ಧೆ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದೆ(Murder Attempt). ಕಳೆದ ಶನಿವಾರ ಜಯನಗರದ 26ನೇ ಕ್ರಾಸ್ ನಲ್ಲಿರುವ ಬಾಲಾಜಿ ಮೆಡಿಕಲ್ ಬಳಿಯ ಫುಟ್ ಪಾತ್​ ಮೇಲೆ ಸೊಪ್ಪು ಮಾರುತ್ತಿದ್ದ ಚಂದ್ರಮ್ಮ ಎಂಬ ವೃದ್ಧೆಯ ಮೇಲೆ ದುಷ್ಕರ್ಮಿಗಳು ಮಾರಾಕಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಶನಿವಾರ ಸಂಜೆ ಬೈಕ್ ನಲ್ಲಿ ಹೆಲ್ಮೆಟ್ ಧರಿಸಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಚಂದ್ರಮ್ಮ ತಲೆಗೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಚಂದ್ರಮ್ಮ ತಲೆಗೆ ತೀವ್ರಪೆಟ್ಟಾಗಿದ್ದು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಘಟನೆ ಕುರಿತು ತಿಲಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಟಾಟಾ ಏಸ್ ಡಿಕ್ಕಿ ಪಾದಚಾರಿ ಸಾವು

ಮೈಸೂರು ಜಿಲ್ಲೆ ಹುಣಸೂರು ಬಸ್ ನಿಲ್ದಾಣದ ಬಳಿ ಟಾಟಾ ಏಸ್ ಡಿಕ್ಕಿ ಹೊಡೆದು ಪಾದಾಚಾರಿ ಸಾವನ್ನಪ್ಪಿದ್ದಾರೆ. ಪುಟ್ಟಸ್ವಾಮಿ ಗೌಡ 80 ಮೃತ ದುರ್ದೈವಿ. ಪುಟ್ಟಸ್ವಾಮಿ ಅವರು ಮೆಡಿಕಲ್ ಸ್ಟೋರ್‌ನಿಂದ ಬಸ್ ನಿಲ್ದಾಣಕ್ಕೆ ತೆರಳುವ ವೇಳೆ ಅಪಘಾತ ಸಂಭವಿಸಿದೆ. ಗಾಯಾಳು ಪುಟ್ಟಸ್ವಾಮಿ ಗೌಡರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Actress Anu Gowda: ಕಿರುತೆರೆ ಮತ್ತು ಚಲನಚಿತ್ರ ನಟಿ ಅನುಗೌಡ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು

ಒಣಗಿದ ಕೃಷ್ಣೇ ಒಡಲು; ಸಾವಿರಾರು ಮೀನುಗಳ ಮಾರಣಹೋಮ

ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ. ವಿಜಯಪುರ ಜಿಲ್ಲೆಯಲ್ಲಿ ಕೃಷ್ಣಾ ನದಿ ಬರಿದಾಗಿದೆ. ಜುಲೈ ಮೊದಲ ವಾರದಲ್ಲಿ ಭರ್ಜರಿಯಾಗಿ ಹರಿಯುತ್ತಿದ್ದ ಕೃಷ್ಣೆಯ ಒಡಲು ಇದೀಗಾ ಬರಿದಾಗಿದೆ. ನದಿಯಲ್ಲಿ ನೀರು ಖಾಲಿಯಾದ ಪರಿಣಾಮ ಸಾವಿರಾರು ಮೀನುಗಳು ಸತ್ತು ಬಿದ್ದಿವೆ. ನದಿಪಾತ್ರದ ಅಲ್ಪಸ್ವಲ್ಪ ನೀರಿನ ದಡದಲ್ಲಿ ರಾಶಿ ರಾಶಿ ಮೀನುಗಳ ಮೃತ ದೇಹ ಕಣ್ಣಿಗೆ ಕಾಣಿಸುತ್ತಿದೆ. ನದಿಯಲ್ಲಿ ನೀರು ಖಾಲಿಯಾಗಿರೋ ಕಾರಣ ಮೀನುಗಾರಿಕೆ ನಡೆಸಲಾಗದೇ ಮೀನುಗಾರರು ಕೂಡ ಸಂಕಷ್ಟಕ್ಕೀಡಾಗಿದ್ದಾರೆ. ಕುಟುಂಬ ನಿರ್ವಹಣೆಗೂ ಸಮಸ್ಯೆ ಎದುರಿಸುತ್ತಿದ್ದಾರೆ.

ನದಿಪಾತ್ರದ ದಡದಲ್ಲಿರುವ ಗ್ರಾಮಗಳ ನೂರಾರು ಮೀನುಗಾರರ ಕುಟುಂಬಗಳು ನದಿಯಲ್ಲಿ ನೀರಿಲ್ಲಾ, ಮೀನುಗಾರಿಕೆ ನಡೆಸಲಾಗುತ್ತಿಲ್ಲಾ ಎಂದು ಅಳಲು ತೋಡಿಕೊಂಡಿದ್ದಾರೆ. ನೆರೆಯ ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ನೀರು ಬಿಡಿಸಿಕೊಳ್ಳಬೇಕು. ಕೋಯ್ನಾ ಜಲಶಾಯದಿಂದ ನೀರು ಬಿಡಿಸಿಕೊಳ್ಳಲು ಸಿಎಂ ಹಾಗೂ ಡಿಸಿಎಂ ಮನಸ್ಸು ಮಾಡಬೇಕು. ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಿಗೆ ಉತ್ತರ ಕರ್ನಾಟಕ ಭಾಗದ ಜನರ ಸಂಕಷ್ಟ ಅರ್ಥವಾಗಲ್ಲ. ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿ ಒಳ್ಳೆಯ ಕೆಲಸ ಮಾಡಿರೋ ಎಂಬಿ ಪಾಟೀಲ್ ಗೆ ಜಲ ಸಂಪನ್ಮೂಲ ಖಾತೆ ನೀಡಬೇಕು. ಎಂಬಿಪಿಗೆ ನೀರಾವರಿ ಖಾತೆ ಕೊಟ್ಟರೆ ನಮ್ಮ ಸಂಕಷ್ಟ ಅರ್ಥವಾಗುತ್ತದೆ ಎಂದು ಈ ಭಾಗದ ಜನರು ಮನವಿ ಮಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ