ಮತ್ತೊಂದು ಟ್ರೋಫಿ ಎತ್ತಿ ಹಿಡಿದ RCB ಬಾಯ್ಸ್
Aspin Stallions vs UAE Bulls: ಈ ಚಾಂಪಿಯನ್ ಪಟ್ಟದ ಬೆನ್ನಲ್ಲೇ ಕೋಚ್ ಆ್ಯಂಡಿ ಫ್ಲವರ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್ ಹಾಗೂ ಫಿಲ್ ಸಾಲ್ಟ್ ಜೊತೆಯಾಗಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಮೂಲಕ ಆರ್ಸಿಬಿ ಬಾಯ್ಸ್ ಮತ್ತೊಂದು ಟ್ರೋಫಿಯನ್ನು ಎತ್ತಿ ಹಿಡಿದಿರುವ ಸಂತಸ ಹಂಚಿಕೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಾದ ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್ ಹಾಗೂ ಫಿಲ್ ಸಾಲ್ಟ್ ಮತ್ತೊಂದು ಟ್ರೋಫಿ ಎತ್ತಿ ಹಿಡಿದಿದ್ದಾರೆ. ಅದು ಕೂಡ ಜೊತೆಯಾಗಿ ಕಣಕ್ಕಿಳಿಯುವ ಮೂಲಕ ಎಂಬುದು ವಿಶೇಷ.
ಅಬುಧಾಬಿಯಲ್ಲಿ ನಡೆದ ಟಿ10 ಲೀಗ್ನಲ್ಲಿ ರೊಮಾರಿಯೊ ಶೆಫರ್ಡ್, ಫಿಲ್ ಸಾಲ್ಟ್ ಹಾಗೂ ಟಿಮ್ ಡೇವಿಡ್ ಯುಎಇ ಬುಲ್ಸ್ ಪರ ಕಣಕ್ಕಿಳಿದಿದ್ದರು. ಈ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದೂ ಕೂಡ ಆರ್ಸಿಬಿ ತಂಡದ ಮುಖ್ಯ ಕೋಚ್ ಆ್ಯಂಡಿ ಫ್ಲವರ್.
ಇದೀಗ ಆರ್ಸಿಬಿ ಆಟಗಾರರನ್ನು ಒಳಗೊಂಡಿದ್ದ ಯುಎಇ ಬುಲ್ಸ್ ತಂಡವು ಅಬುಧಾಬಿ ಟಿ10 ಲೀಗ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಇ ಬುಲ್ಸ್ ತಂಡವು 10 ಓವರ್ಗಳಲ್ಲಿ 150 ರನ್ ಕಲೆಹಾಕಿದ್ದರು.
ಈ ಕಠಿಣ ಗುರಿಯನ್ನು ಬೆನ್ನತ್ತಿದ ಅಸ್ಪಿನ್ ಸ್ಟಾಲಿನ್ಸ್ ತಂಡವು 10 ಓವರ್ಗಳಲ್ಲಿ ಕೇವಲ 70 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ 80 ರನ್ಗಳ ಜಯ ಸಾಧಿಸಿ ಯುಎಇ ಬುಲ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಈ ಚಾಂಪಿಯನ್ ಪಟ್ಟದ ಬೆನ್ನಲ್ಲೇ ಕೋಚ್ ಆ್ಯಂಡಿ ಫ್ಲವರ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್ ಹಾಗೂ ಫಿಲ್ ಸಾಲ್ಟ್ ಜೊತೆಯಾಗಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಮೂಲಕ ಆರ್ಸಿಬಿ ಬಾಯ್ಸ್ ಮತ್ತೊಂದು ಟ್ರೋಫಿಯನ್ನು ಎತ್ತಿ ಹಿಡಿದಿರುವ ಸಂತಸ ಹಂಚಿಕೊಂಡಿದ್ದಾರೆ.
ಅಸ್ಪಿನ್ ಸ್ಟಾಲಿನ್ಸ್ ಪ್ಲೇಯಿಂಗ್ 11: ರಹಮಾನಲ್ಲಾ ಗುರ್ಬಾಝ್ (ನಾಯಕ) , ಆಂಡ್ರೆ ಫ್ಲೆಚರ್ (ವಿಕೆಟ್ ಕೀಪರ್ ), ಸ್ಯಾಮ್ ಬಿಲ್ಲಿಂಗ್ಸ್ , ಲ್ಯೂಸ್ ಡು ಪ್ಲೂಯ್ , ಬೆನ್ ಕಟಿಂಗ್ , ಕರೀಮ್ ಜನತ್ , ಟೈಮಲ್ ಮಿಲ್ಸ್ , ಬಿನುರ ಫೆರ್ನಾಂಡೊ , ಜೋಹೈರ್ ಇಕ್ಬಾಲ್ , ಹಫೀಜ್ ಉರ್ ರೆಹಮಾನ್ , ಆಶ್ಮೀಡ್ ನೆಡ್.
ಯುಎಇ ಬುಲ್ಸ್ ಪ್ಲೇಯಿಂಗ್ 11: ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್) , ಜೇಮ್ಸ್ ವಿನ್ಸ್ , ರೋವ್ಮನ್ ಪೊವೆಲ್ , ಟಿಮ್ ಡೇವಿಡ್ ,ಕೀರನ್ ಪೊಲಾರ್ಡ್ (ನಾಯಕ) , ರೊಮಾರಿಯೋ ಶೆಫರ್ಡ್ , ಇಫ್ತಿಕಾರ್ ಅಹ್ಮದ್ , ಸುನಿಲ್ ನರೈನ್ , ಕೈಸ್ ಅಹ್ಮದ್ , ಜುನೈದ್ ಸಿದ್ದೀಕ್ , ಮುಹಮ್ಮದ್ ರೋಹಿದ್ ಖಾನ್.
