ಬೀದಿ ನಾಯಿ ಸಮೀಕ್ಷೆಗೆ ಶಿಕ್ಷಣ ಸಂಸ್ಥೆಗಳ ವಿರೋಧ; ನಾವೇನು ಪಾಠ ಮಾಡಬೇಕಾ, ನಾಯಿಗಳನ್ನು ಹಿಡಿಯಬೇಕಾ? ಎಂದ ಶಿಕ್ಷಕರು
ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ ರಾಜ್ಯ ಸರ್ಕಾರ ಬೀದಿ ನಾಯಿಗಳ ನಿಯಂತ್ರಣ ಕುರಿತು ಹೊಸ ನೋಟಿಸ್ ಜಾರಿಗೊಳಿಸಿದ್ದು, ಇದು ಶಿಕ್ಷಣ ಸಂಸ್ಥೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಶಿಕ್ಷಕರಿಗೆ ಶಾಲಾ ಆವರಣದಲ್ಲಿರುವ ಮತ್ತು ಸುತ್ತಮುತ್ತಲಿನ ಬೀದಿ ನಾಯಿಗಳ ಮಾಹಿತಿ ಸಂಗ್ರಹಿಸುವಂತೆ ಮತ್ತು ಅವುಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಸರ್ಕಾರದ ಈ ನಿರ್ಧಾರವನ್ನು ಶಿಕ್ಷಣ ಸಂಸ್ಥೆಗಳು ತೀವ್ರವಾಗಿ ಖಂಡಿಸಿದ್ದು, ನಾವೇನು ಪಾಠ ಮಾಡಬೇಕಾ, ನಾಯಿಗಳನ್ನು ಹಿಡಿಯಬೇಕಾ? ಎಂದು ಪ್ರಶ್ನಿಸಿವೆ.
ಬೆಂಗಳೂರು, ಡಿಸೆಂಬರ್ 1: ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ ರಾಜ್ಯ ಸರ್ಕಾರ ಬೀದಿ ನಾಯಿಗಳ ನಿಯಂತ್ರಣ ಕುರಿತು ಹೊಸ ನೋಟಿಸ್ ಜಾರಿಗೊಳಿಸಿದ್ದು, ಇದು ಶಿಕ್ಷಣ ಸಂಸ್ಥೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಶಿಕ್ಷಕರಿಗೆ ಶಾಲಾ ಆವರಣದಲ್ಲಿರುವ ಮತ್ತು ಸುತ್ತಮುತ್ತಲಿನ ಬೀದಿ ನಾಯಿಗಳ ಮಾಹಿತಿ ಸಂಗ್ರಹಿಸುವಂತೆ ಮತ್ತು ಅವುಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಸರ್ಕಾರದ ಈ ನಿರ್ಧಾರವನ್ನು ಶಿಕ್ಷಣ ಸಂಸ್ಥೆಗಳು ತೀವ್ರವಾಗಿ ಖಂಡಿಸಿದ್ದು, ನಾವೇನು ಪಾಠ ಮಾಡಬೇಕಾ, ನಾಯಿಗಳನ್ನು ಹಿಡಿಯಬೇಕಾ? ಎಂದು ಪ್ರಶ್ನಿಸಿವೆ.
ಶಿಕ್ಷಣ ಸಂಸ್ಥೆಗಳ ಮೂಲ ಉದ್ದೇಶ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಾಗಿರುತ್ತದೆ. ಬೀದಿ ನಾಯಿಗಳ ನಿರ್ವಹಣೆ ಮತ್ತು ಮಾಹಿತಿ ಸಂಗ್ರಹಣೆ ತಮ್ಮ ಜವಾಬ್ದಾರಿಯಲ್ಲ, ಬದಲಾಗಿ ಬಿಬಿಎಂಪಿ ಅಥವಾ ಸಂಬಂಧಪಟ್ಟ ಇಲಾಖೆಗಳ ಕೆಲಸ ಎಂದು ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ನೋಟಿಸ್‌ಗೆ ಶಿಕ್ಷಣ ಸಂಸ್ಥೆಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

