Chikmagalur: ಸ್ವಾತಂತ್ರ್ಯ ಸಿಕ್ಕು 76 ವರ್ಷಗಳ ನಂತರ ಚಿಕ್ಕಮಗಳೂರಿನ ಹೊಯ್ಸಳಲು ಗ್ರಾಮಕ ಮೊದಲ ಬಾರಿಗೆ ಸರ್ಕಾರಿ ಬಸ್ ಕಂಡಿತು!

ಅರುಣ್​ ಕುಮಾರ್​ ಬೆಳ್ಳಿ

Updated on: Jun 26, 2023 | 10:53 AM

ಮಕ್ಕಳ ಮುಖದಲ್ಲಿ ಮಿಂಚು ನೋಡಿದರೆ ಅವರು ಎಷ್ಟು ಸಂಭ್ರಮಿಸುತ್ತಿದ್ದಾರೆ ಅನ್ನೋದು ಗೊತ್ತಾಗುತ್ತದೆ.

ಚಿಕ್ಕಮಗಳೂರು: ನಮ್ಮ ದೇಶಕ್ಕೆ ಸ್ವಾತಂತ್ರ್ಯ (Independence) ಬಂದು 76 ವರ್ಷವಾಯಿತು ಅಂತ ಸಂಭ್ರಮಿಸಿದ್ದಷ್ಟೇ ಬಂತು ಸ್ವಾಮಿ. ಇದನ್ನು ಯಾಕೆ ವಿಷಾದದಿಂದ ಹೇಳಬೇಕಿದೆ ಅಂದರೆ, ದೇಶವನ್ನು ಮತ್ತು ರಾಜ್ಯವನ್ನು ಆಳಿದ ಬೇರೆ ಬೇರೆ ಸರ್ಕಾರಗಳು ಇದುವರೆಗೆ ಕೆಲವು ಗ್ರಾಮಗಳಿಗೆ ಬಸ್ ಸೌಕರ್ಯವನ್ನು ಕಲ್ಪಿಸಿಲ್ಲ. ಅಂಥದೊಂದು ಗ್ರಾಮ ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹೊಯ್ಸಳಲು (Hoysalu). ಇಲ್ಲಿನ ನಿವಾಸಿಗಳು ಸೋಮವಾರದಂದು ತಮ್ಮ ಊರಲ್ಲಿ ಮೊದಲ ಬಾರಿಗೆ ಕೆಆಸ್ ಆರ್ ಟಿ ಸಿ ಬಸ್ (KSRTC bus) ಕಂಡಿದ್ದಾರೆ. ಹಾಗೆ ನೋಡಿದರೆ, ಈ ಊರು ತಾಲ್ಲೂಕು ಕೇಂದ್ರದಿಂದ ಕೇವಲ 5 ಕಿಮೀ ಮಾತ್ರ ದೂರದಲ್ಲಿದೆ. ಶಾಲಾ ಮಕ್ಕಳು ಪ್ರತಿದಿನ 5 ಕಿಮೀ ನಡೆದು ಶಾಲೆ ತಲುಪುತ್ತಿದ್ದರು. ಮಕ್ಕಳ ಮುಖದಲ್ಲಿ ಮಿಂಚು ನೋಡಿದರೆ ಅವರು ಎಷ್ಟು ಸಂಭ್ರಮಿಸುತ್ತಿದ್ದಾರೆ ಅನ್ನೋದು ಗೊತ್ತಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
.

Published on: Jun 26, 2023 10:52 AM
Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.