Vijay Diwas 2022: ಇಂದು ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ದಿನ, ಪಾಕಿಸ್ತಾನದ ವಿರುದ್ಧ ಅವಿಸ್ಮರಣೀಯ ವಿಜಯ್ ಸಾಧಿಸಿದ ಭಾರತ
ಭಾರತವು 93 ಸಾವಿರ ಪಾಕ್ ಸೈನಿಕರನ್ನು ಶರಣಾಗಿಸಿ ವಿಜಯ ಸಾಧಿಸಿದ ಅವಿಸ್ಮರಣೀಯ ದಿನವೇ ವಿಜಯ್ ದಿವಸ, ಇಂದು ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ದಿನ.
ಭಾರತವು 93 ಸಾವಿರ ಪಾಕ್ ಸೈನಿಕರನ್ನು ಶರಣಾಗಿಸಿ ವಿಜಯ ಸಾಧಿಸಿದ ಅವಿಸ್ಮರಣೀಯ ದಿನವೇ ವಿಜಯ್ ದಿವಸ, (Vijay Diwas) ಇಂದು ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ದಿನ. ಈ ದಿನದಂದು ದೇಶದ ಗೌರವಕ್ಕಾಗಿ ಸೆಣಸಿದ ವೀರ ಭಾರತೀಯ ಸೇನಾನಿಗಳು ಮತ್ತು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಗುತ್ತದೆ.
1971ರ ಇಂಡೋ-ಪಾಕಿಸ್ತಾನಿ ಯುದ್ಧ
ಭಾರತವು ಡಿಸೆಂಬರ್ 16ರಂದು ವಿಜಯ್ ದಿವಸ್ನ್ನು ಆಚರಿಸುತ್ತದೆ. ಜೊತೆಗೆ ಈ ಸಂದರ್ಭದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. 1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಸೈನ್ಯವು ಐತಿಹಾಸಿಕ ವಿಜಯವನ್ನು ಸಾಧಿಸಿತ್ತು, ಭಾರತ ಪ್ರತಿ ವರ್ಷ ಡಿಸೆಂಬರ್ 16ರಂದು ಈ ದಿನದಂದು ಸ್ಮರಿಸಲಾಗುತ್ತದೆ. ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ವೀರ ಸೈನಿಕರನ್ನು ಗೌರವಿಸಲು ಈ ದಿನವನ್ನು ಸ್ಮರಣಾರ್ಥವಾಗಿ ನಡೆಸಲಾಗುತ್ತಿದೆ.
16 ಡಿಸೆಂಬರ್ 1971 ರಂದು ಏನಾಯಿತು?
1971ರ ಇಂಡೋ-ಪಾಕಿಸ್ತಾನಿ ಯುದ್ಧವು ಭಾರತ ಮತ್ತು ಪಾಕಿಸ್ತಾನದ ನಡುವಿನ ಮಿಲಿಟರಿ ಸಂಘರ್ಷವಾಗಿದ್ದು, ಇದು ಪೂರ್ವ ಪಾಕಿಸ್ತಾನದಲ್ಲಿ ಡಿಸೆಂಬರ್ 3 1971 ರಿಂದ ಡಿಸೆಂಬರ್ 16 1971 ತನಕ ಯುದ್ಧಗಳು ನಡೆದು, ಢಾಕಾದಲ್ಲಿ ಪಾಕಿಸ್ತಾನ ಸೋಲುತ್ತದೆ. ಇದು ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ನಡೆದ ಯುದ್ಧವಾಗಿತ್ತು. ಪಾಕಿಸ್ತಾನವು ಆಪರೇಷನ್ ಚೆಂಗಿಜ್ ಖಾನ್ ಮೂಲಕ ಭಾರತದ 11 ವಾಯು ನಿಲ್ದಾಣಗಳ ಮೇಲೆ ಪೂರ್ವಭಾವಿ ವೈಮಾನಿಕ ದಾಳಿ ನಡೆಸಿದ ನಂತರ ಸಂಘರ್ಷ ಭುಗಿಲೆದ್ದಿತು. ಈ ಮೂಲಕ ಪಾಕಿಸ್ತಾನದ ಮೇಲೆ ಭಾರತವು ಹಗೆತವನ್ನು ಇನ್ನಷ್ಟು ಹೆಚ್ಚಿಸಿಕೊಂಡಿತು. ಪೂರ್ವ ಪಾಕಿಸ್ತಾನದ ಯುದ್ಧದಲ್ಲಿ ಬಂಗಾಳಿ ರಾಷ್ಟ್ರೀಯತಾವಾದಿ ಶಕ್ತಿಗಳಿಗೆ ಭಾರತವು ಬೆಂಬಲ ನೀಡಿತು, ಪೂರ್ವ ಮತ್ತು ಪಶ್ಚಿಮ ಎರಡೂ ಕಡೆಗಳಲ್ಲಿ ಹೋರಾಡುತ್ತಿರುವ ಭಾರತ ಮತ್ತು ಪಾಕಿಸ್ತಾನಿ ಪಡೆಗಳ ನಡುವೆ ಸಂಘರ್ಷ ನಡೆಯಿತು.
ಪಾಕಿಸ್ತಾನಿ ಮಿಲಿಟರಿಯ ಪೂರ್ವ ಕಮಾಂಡ್ ಡಿಸೆಂಬರ್ 16, 1971 ರಂದು ಢಾಕಾದಲ್ಲಿ, ಯುದ್ಧ ಪ್ರಾರಂಭವಾದ ಹದಿಮೂರು ದಿನಗಳ ನಂತರ ಯುದ್ಧ ನಿಲ್ಲಿಸುವಂತೆ ಒಪ್ಪಂದ ಪತ್ರಕ್ಕೆ ಪೂರ್ವ ಪಾಕಿಸ್ತಾನದ ಮುಖ್ಯ ಸಮರ ಕಾನೂನು ನಿರ್ವಾಹಕ ಲೆಫ್ಟಿನೆಂಟ್ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ (AAK ನಿಯಾಜಿ) ಮತ್ತು ಪೂರ್ವ ಪಾಕಿಸ್ತಾನದಲ್ಲಿರುವ ಪಾಕಿಸ್ತಾನ ಸೇನೆಯ ಕಮಾಂಡರ್ ಸಹಿ ಹಾಕಿದರು. ಇದು ಭಾರತಕ್ಕೆ ದೊಡ್ಡ ಗೆಲುವುವನ್ನು ನೀಡಿತ್ತು.
Nation is celebrating #VijayDiwas today to commemorate India’s victory over Pakistan in 1971 Bangladesh Liberation war. On this day, sacrifice of war heroes is remembered and rich tributes are being paid to them. #1971War
@adgpi @IAF_MCC @IAF_MCC pic.twitter.com/4XXogZYvwq
— All India Radio News (@airnewsalerts) December 16, 2022
ಒಪ್ಪಂದದ ಅಡಿಯಲ್ಲಿ, ಬಾಂಗ್ಲಾದೇಶದ ಕಾರ್ಯಾಚರಣೆಯಲ್ಲಿ ನಿಯೋಜಿಸಲಾಗಿದ್ದ 93,000 ಪಾಕಿಸ್ತಾನಿ ಸೈನಿಕರು ಭಾರತೀಯ ಸೇನೆಗೆ ಶರಣಾದರು. ಇದು ಎರಡನೇ ಮಹಾಯುದ್ಧದ ನಂತರ ಇತಿಹಾಸದಲ್ಲಿ ಅತಿದೊಡ್ಡ ಮಿಲಿಟರಿ ಶರಣಾಗತಿಯಾಗಿದೆ. ಶರಣಾಗತಿಯು ಬಾಂಗ್ಲಾದೇಶದ ವಿಮೋಚನೆಗೆ ಕಾರಣವಾಯಿತು, ಇದನ್ನು ಮೊದಲು ಪೂರ್ವ ಪಾಕಿಸ್ತಾನ ಎಂದು ಕರೆಯಲಾಗುತ್ತಿತ್ತು.
ಭಾರತವು ವಿಜಯ್ ದಿವಸ್ 2022 ಅನ್ನು ಹೇಗೆ ಆಚರಿಸುತ್ತಿದೆ?
ಡಿಸೆಂಬರ್ 16, 2022 ರಂದು, ಅಥವಾ ವಿಜಯ್ ದಿವಸ್ದಂದು HQ ಸದರ್ನ್ ಕಮಾಂಡ್ 1971 ರ ಯುದ್ಧದಲ್ಲಿ ಪಾಕಿಸ್ತಾನದ ಮೇಲೆ ಭಾರತ ನಡೆಸಿದ ದಾಳಿಯ ಸ್ಮರಣಾರ್ಥವಾಗಿ ಪುಣೆ ಮತ್ತು ದಕ್ಷಿಣ ಕಮಾಂಡ್ ಪ್ರದೇಶದಲ್ಲಿ ಮತ್ತು ಇತರ 15 ನಗರಗಳಲ್ಲಿ ಏಕಕಾಲದಲ್ಲಿ “ಸದರ್ನ್ ಸ್ಟಾರ್ ವಿಜಯ್ ರನ್-22” ಅನ್ನು ನಡೆಸಲಾಗುತ್ತದೆ. “ರನ್ ಫಾರ್ ಸೋಲ್ಜರ್ – ರನ್ ವಿತ್ ಸೋಲ್ಜರ್” ಎಂಬ ಘೋಷಣೆಯ ಮೂಲಕ ಬೃಹತ್ ಕಾರ್ಯಕ್ರಮವನ್ನು ಭಾರತೀಯ ಸೇನೆ ಮತ್ತು ಸಾರ್ವಜನಿಕರ ನಡೆಸುತ್ತಾರೆ, ಈ ಕಾರ್ಯಕ್ರಮದಲ್ಲಿ ಹುತಾತ್ಮ ಸೈನಿಕರನ್ನು ಗೌರವಿಸುತ್ತಾರೆ ಮತ್ತು ದೇಶದ ಶಕ್ತಿ, ಸಾಮರ್ಥ್ಯ ಮತ್ತು ಚೈತನ್ಯವನ್ನು ಪ್ರದರ್ಶಿಸುತ್ತಾರೆ.
ವಿಜಯ್ ರನ್-22ರ ಕಾರ್ಯಕ್ರಮದಲ್ಲಿ ಕೆಲವೊಂದು ಸ್ಪರ್ಧೆಗಳನ್ನು ಆಯೋಜನೆ ಮಾಡುತ್ತಾರೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಓಟದ ಸ್ಪರ್ಧೆಗಳನ್ನು ಮಾಡಲಾಗುತ್ತದೆ ಶಾಲಾ ಮಕ್ಕಳಿಗೆ 5-ಕಿಲೋಮೀಟರ್ ಓಟ, ಮಹಿಳೆಯರಿಗೆ ಕೇವಲ 4-ಕಿಲೋಮೀಟರ್ ಓಟ. ಒಟ್ಟು ಬಹುಮಾನದ ಮೊತ್ತವು 12.5 ಕಿಮೀ ಓಟಕ್ಕೆ 50,000 ರೂ. ಮತ್ತು ಮಹಿಳೆಯರು ಮತ್ತು ಶಾಲಾ ಮಕ್ಕಳ ಓಟಕ್ಕೆ 22,000 ರೂ, ನೀಡಲಾಗುತ್ತದೆ.
ಇದನ್ನು ಓದಿ: ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್; 65 ವರ್ಷ ಮೇಲ್ಪಟ್ಟವರೂ ಎನ್ಪಿಎಸ್ನಲ್ಲಿ ಹೂಡಿಕೆ ಮಾಡಬಹುದು
ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಶುಭಾಶಯ
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಮತ್ತು ಇತರ ಹಿರಿಯ ಸಚಿವರು ವಿಜಯ್ ದಿವಸ್ 2022ರ ಸಂದರ್ಭದಲ್ಲಿ ಶುಭಾಶಯಗಳನ್ನು ಸಲ್ಲಿಸಿದರು. “ವಿಜಯ್ ದಿವಸ್’ ಮುನ್ನಾದಿನದಂದು, ಆರ್ಮಿ ಹೌಸ್‌ನಲ್ಲಿ ನಡೆದ ‘ಅಟ್ ಹೋಮ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ದಿನವನ್ನು ಭಾರತವು ಎಂದಿಗೂ ಮರೆಯುವುದಿಲ್ಲ ನಮ್ಮ ಸಶಸ್ತ್ರ ಪಡೆಗಳ ಶೌರ್ಯವೇ 1971ರ ಯುದ್ಧದ ಗೆಲುವಿಗೆ ಕಾರಣವಾಯಿತು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಉಪಸ್ಥಿತರಿದ್ದರು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:27 am, Fri, 16 December 22