AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Pension Scheme: ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್; 65 ವರ್ಷ ಮೇಲ್ಪಟ್ಟವರೂ ಎನ್​ಪಿಎಸ್​ನಲ್ಲಿ ಹೂಡಿಕೆ ಮಾಡಬಹುದು

18 ವರ್ಷ ವಯಸ್ಸಿನಿಂದ 70 ವರ್ಷದ ವರೆಗಿನ ಯಾರು ಬೇಕಾದರೂ ಈಗ ಎನ್​ಪಿಎಸ್​​ ಖಾತೆ ತೆರೆಯಬಹುದಾಗಿದೆ. ವಯಸ್ಸಿನ ಅರ್ಹತೆಯ ಕಾರಣಕ್ಕಾಗಿ ಈಗಾಗಲೇ ಖಾತೆಯನ್ನು ಕ್ಲೋಸ್ ಮಾಡಿದವರು ಮತ್ತೊಮ್ಮೆ ಖಾತೆ ತೆರಯಲು ಅವಕಾಶವಿದೆ.

National Pension Scheme: ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್; 65 ವರ್ಷ ಮೇಲ್ಪಟ್ಟವರೂ ಎನ್​ಪಿಎಸ್​ನಲ್ಲಿ ಹೂಡಿಕೆ ಮಾಡಬಹುದು
ಸಾಂದರ್ಭಿಕ ಚಿತ್ರ
TV9 Web
| Updated By: Digi Tech Desk|

Updated on:Dec 14, 2022 | 12:57 PM

Share

ನವದೆಹಲಿ: ಹಿರಿಯ ನಾಗರಿಕರಿಗೆ (Senior Citizens) ಸಿಹಿ ಸುದ್ದಿ ನೀಡಿರುವ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) 65 ವರ್ಷ ಮೇಲ್ಪಟ್ಟವರೂ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (NPS) ಹೂಡಿಕೆ ಮಾಡಲು ಅನುಮತಿಸಿದೆ. 70 ವರ್ಷ ವಯಸ್ಸಿನ ವರೆಗೆ ಹೂಡಿಕೆ ಮಾಡಬಹುದಾಗಿದ್ದು, ನಂತರ ಅದನ್ನು 75 ವರ್ಷ ವಯಸ್ಸಿನ ವರೆಗೆ ವಿಸ್ತರಿಸಲು ಅವಕಾಶ ನೀಡಿದೆ. ಸಾಗರೋತ್ತರ ಭಾರತೀಯ ಹಿರಿಯ ನಾಗರಿಕರಿಗೂ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶವಿದೆ.

18 ವರ್ಷ ವಯಸ್ಸಿನಿಂದ 70 ವರ್ಷದ ವರೆಗಿನ ಯಾರು ಬೇಕಾದರೂ ಈಗ ಎನ್​ಪಿಎಸ್​​ ಖಾತೆ ತೆರೆಯಬಹುದಾಗಿದೆ. ವಯಸ್ಸಿನ ಅರ್ಹತೆಯ ಕಾರಣಕ್ಕಾಗಿ ಈಗಾಗಲೇ ಖಾತೆಯನ್ನು ಕ್ಲೋಸ್ ಮಾಡಿದವರು ಮತ್ತೊಮ್ಮೆ ಖಾತೆ ತೆರಯಲು ಅವಕಾಶವಿದೆ ಎಂದು ಪಿಎಫ್​ಆರ್​ಡಿಎ ತಿಳಿಸಿದೆ. ನಿವೃತ್ತಿಯ ನಂತರದ ಹೂಡಿಕೆ ಮತ್ತು ಪಿಂಚಣಿ ಉದ್ದೇಶಿಸಿರುವ ಹಿರಿಯ ನಾಗರಿಕರಿಗೆ ಈ ಕ್ರಮದಿಂದ ಅನುಕೂಲವಾಗಲಿದೆ.

ಇದನ್ನೂ ಓದಿ: Tax-Saving Investments: ಪಿಪಿಎಫ್​ನಿಂದ ಎನ್​ಪಿಎಸ್ ವರೆಗೆ; ತೆರಿಗೆ ಉಳಿತಾಯಕ್ಕೆ ಈ ಐದು ಹೂಡಿಕೆ ಯೋಜನೆಗಳನ್ನು ಗಮನಿಸಿ

ಎನ್​ಪಿಎಸ್ ಖಾತೆ ತೆರೆದ ಕೂಡಲೇ ‘ಟೈರ್ 1’ ಖಾತೆ ಆರಂಭವಾಗುತ್ತದೆ. ಉಳಿತಾಯದ ಮೊತ್ತವನ್ನು ಮುಂದುವರಿಸುವುದಕ್ಕಾಗಿ ತೆರೆಯುವ ‘ಟೈರ್ 2’ ಖಾತೆಗೆ ಲಾಕ್​ ಇನ್ ಅವಧಿ ಇರುವುದಿಲ್ಲ. ನಿವೃತ್ತಿಯ ನಂತರವೂ ಸಹ, ಹಣದುಬ್ಬರ ಮತ್ತು ಜೀವಿತಾವಧಿಯನ್ನು ಗಣನೆಗೆ ತೆಗೆದುಕೊಂಡು ಷೇರುಗಳಿಗೆ ಹಣವನ್ನು ನಿಯೋಜಿಸಬಹುದಾಗಿದೆ.

ಈಕ್ವಿಟಿ ಮತ್ತು ಸಾಲದ ಮೇಲಿನ ಹೂಡಿಕೆಗೆ ಅವಕಾಶ

ಹಣದುಬ್ಬರ ನಿಯಂತ್ರಣಕ್ಕಾಗಿ ಈಕ್ವಿಟಿ ಮತ್ತು ಸಾಲದ ಮೇಲಿನ ಹೂಡಿಕೆಗೆ ಎನ್​ಪಿಎಸ್ ಅವಕಾಶ ನೀಡುತ್ತದೆ. 65 ವರ್ಷ ವಯಸ್ಸಿನ ನಂತರ ಎನ್​ಪಿಎಸ್​ಗೆ ಸೇರುವವರು ಪಿಎಫ್​ ಅಥವಾ ಸ್ವತ್ತು ಹಂಚಿಕೆಯನ್ನು ಆಯ್ಕೆ ಮಾಡಬಹುದು. ಆಟೊ ಮತ್ತು ಆ್ಯಕ್ಟಿವ್ ಆಯ್ಕೆಗಳ ಅಡಿಯಲ್ಲಿ ಕ್ರಮವಾಗಿ ಶೇಕಡಾ 15ರಷ್ಟು ಹಾಗೂ 50ರಷ್ಟು ಹೂಡಿಕೆ ಮಾಡಬಹುದಾಗಿದೆ.

ಈ ಹಿಂದೆ ಹೇಗಿತ್ತು ನಿಯಮ?

ಎನ್​ಪಿಎಸ್​ನಲ್ಲಿ ಹೂಡಿಕೆ ಮಾಡಲು ಈವರೆಗೆ ಗರಿಷ್ಠ ವಯಸ್ಸು 65 ಆಗಿತ್ತು. 70 ವರ್ಷ ವಯಸ್ಸಿನ ವರೆಗೆ ಮುಂದುವರಿಸಲು ಅವಕಾಶ ಇತ್ತು. ತೆರಿಗೆ ಉಳಿತಾಯ ಮಾಡುವ ನಿಟ್ಟಿನಲ್ಲಿ ದೀರ್ಘಾವಧಿಯ ಹೂಡಿಕೆಗೆ ಇದೊಂದು ಉತ್ತಮ ಆಯ್ಕೆಯಾಗಿದೆ. ಈ ಹೂಡಿಕೆಯಿಂದ ದೊರೆಯುವ ಆದಾಯ ಷೇರುಪೇಟೆ ವಹಿವಾಟನ್ನೂ ಅವಲಂಬಿಸಿರುತ್ತದೆ ಎಂಬುದನ್ನು ಗಮನಿಸಬೇಕು. ಖಾಸಗಿ ವಲಯದ ಉದ್ಯೋಗಿಗಳಿಗೆ ಪಿಂಚಣಿ ಪಡೆಯಲು ಇದೊಂದು ಉತ್ತಮ ಆಯ್ಕೆ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:51 pm, Wed, 14 December 22