ಹಿಂದಿ ದಿವಸ್ ವಿರೋಧಿಸಿ ಜೆಡಿಎಸ್ ಪ್ರತಿಭಟನೆ; ಸೆ.14 ಕನ್ನಡ ದಿನವನ್ನಾಗಿ ಘೋಷಿಸುವಂತೆ ಕರವೇ ಕಾರ್ಯಕರ್ತರ ಆಗ್ರಹ

TV9 Digital Desk

| Edited By: sandhya thejappa

Updated on:Sep 14, 2021 | 2:20 PM

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಕಛೇರಿ ಮುಂದೆ ಹಿಂದಿ ದಿವಸ್ ಆಚರಣೆಯನ್ನು ಖಂಡಿಸಿ ಕರವೇ ಕಾರ್ಯಕರ್ತರು ಧರಣಿ ನಡೆಸಿದ್ದಾರೆ.

ಹಿಂದಿ ದಿವಸ್ ವಿರೋಧಿಸಿ ಜೆಡಿಎಸ್ ಪ್ರತಿಭಟನೆ; ಸೆ.14 ಕನ್ನಡ ದಿನವನ್ನಾಗಿ ಘೋಷಿಸುವಂತೆ ಕರವೇ ಕಾರ್ಯಕರ್ತರ ಆಗ್ರಹ
ಪ್ರತಿಭಟನೆ ನಡೆಸುತ್ತಿರುವ ಜೆಡಿಎಸ್ ಕಾರ್ಯಕರ್ತರು

Follow us on

ಬೆಂಗಳೂರು: ಹಿಂದಿ ದಿವಸ್ (Hindi Divas) ವಿರೋಧಿಸಿ ಜೆಡಿಎಸ್ (JDS) ಪ್ರತಿಭಟನೆ ನಡೆಸುತ್ತಿದೆ. ಬೆಂಗಳೂರಿನ ಜೆ.ಪಿ.ಭವನದ ಬಳಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಘಟಕ ಅಧ್ಯಕ್ಷ ಪ್ರಕಾಶ್, ಮಾಜಿ ಎಮ್ಎಲ್​ಸಿ ಶರವಣ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಟಿ.ಎ.ಶರವಣ, ಕಾಂಗ್ರೆಸ್, ಬಿಜೆಪಿ ಹಿಂದಿವಾಲಾಗಳ ಪಕ್ಷವಾಗಿವೆ. ಕನ್ನಡಕ್ಕಾಗಿ ಇರುವ ಏಕೈಕ ಪಕ್ಷವೆಂದರೆ ಅದು ಜೆಡಿಎಸ್. ನೆಲ ಜಲ ಅಂತ ಬಂದರೆ ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಹೋರಾಟ ಮಾಡಿದವರು. ಬಿಜೆಪಿ, ಕಾಂಗ್ರೆಸ್ ಹಿಂದಿಗೋಸ್ಕರ ಕೆಲಸ ಮಾಡುತ್ತಿರುವ ಪಕ್ಷಗಳು. ಹಿಂದಿ ಹೇರಿಕೆ ಹಿಂಪಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಕಛೇರಿ ಮುಂದೆ ಹಿಂದಿ ದಿವಸ್ ಆಚರಣೆಯನ್ನು ಖಂಡಿಸಿ ಕರವೇ ಕಾರ್ಯಕರ್ತರು ಧರಣಿ ನಡೆಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ಕೇಂದ್ರ ಸರ್ಕಾರ ಇಂದು (ಸೆ. 14) ಹಿಂದಿ ದಿವಸ್ ಆಚರಣೆ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸೆ.14 ಕನ್ನಡ ದಿನವನ್ನಾಗಿ ಘೋಷಿಸುವಂತೆ ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಕನ್ನಡಿಗರು ಈ ದಿನವನ್ನ ಕರಾಳ ದಿನವಾಗಿ ಆಚರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹಾಸನದಲ್ಲೂ ಹಿಂದಿ ದಿವಸ್ ವಿರೋಧಿಸಿ ಕನ್ನಡ ರಣಧೀರರ ವೇದಿಕೆ ಪ್ರತಿಭಟನೆ ನಡೆಸುತ್ತಿದೆ. ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಕರವೇ ಕಾರ್ಯಕರ್ತರಿಂದ ಗಡುವು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಅಂತ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ತೆರಳಿ ಕನ್ನಡಕ್ಕೆ ಆದ್ಯತೆ ನೀಡಲು ಮನವಿ ಸಲ್ಲಿಸಿದ ಕಾರ್ಯಕರ್ತರು, ಕನ್ನಡ ಇಲ್ಲದ ಯಾವೊಂದು ಚಲನ್ ಬ್ಯಾಂಕ್​ನಲ್ಲಿ ಇರಬಾರದೆಂದು ಒತ್ತಾಯಿಸಿ ಒಂದು ವಾರ ಗಡುವು ನೀಡಿದ್ದಾರೆ.

ಇನ್ನು ಕೊಪ್ಪಳದಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಕುಷ್ಟಗಿ ಎಸ್​ಬಿಐ ಶಾಖೆ ಮುಂಭಾಗ ಕರವೇ ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ. ಜೊತೆಗೆ ಧಾರವಾಡದಲ್ಲೂ ಕರವೇ ಕಾರ್ಯಕರ್ತರು ಬ್ಯಾಂಕ್‌ಗಳಿಗೆ ತೆರಳಿ ಹಿಂದಿ ಹೇರಿಕೆ ಮಾಡದಂತೆ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ

ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಟೂರ್ನಿಗೆ ಆಟಗಾರರ ಪಟ್ಟಿ ಬಿಡುಗಡೆ: ರಾಜ್ಯ ತಂಡದಲ್ಲಿ ರಾಹುಲ್, ಮಯಾಂಕ್

Stop Hindi Imposiotion; ಹಿಂದಿ ಹೇರಿಕೆ ಖಂಡಿಸಿ ಟ್ವಿಟರ್ ಅಭಿಯಾನ, ಕನ್ನಡಿಗರು ಕೈ ಜೋಡಿಸಲು ಕರ್ನಾಟಕ ರಕ್ಷಣಾ ವೇದಿಕೆ ಮನವಿ

(JDS activists are protesting against the Hindi Divas in JP Bhavana Bengaluru)

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada