ಪಾಸ್​ಪೋರ್ಟ್​ ಅವಧಿ ಮುಗಿದ ಬಳಿಕವೂ ವಾಸ್ತವ್ಯ; ಇಬ್ಬರು ಕಾಂಗೋ ಪ್ರಜೆಗಳು ಅರೆಸ್ಟ್

TV9 Digital Desk

| Edited By: sandhya thejappa

Updated on: Sep 14, 2021 | 2:52 PM

ಜುಲೈ ತಿಂಗಳಿನಲ್ಲಿ ಅಕ್ರಮ ವಿದೇಶಿ ಪ್ರಜೆಗಳ ನೆಲೆ ಮೇಲೆ ಪೊಲೀಸರು ದಾಳಿ ನಡೆಸಿ, ಅಕ್ರಮ ವಾಸ್ತವ್ಯ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದವರನ್ನ ವಶಕ್ಕೆ ಪಡೆದಿದ್ದರು.

ಪಾಸ್​ಪೋರ್ಟ್​ ಅವಧಿ ಮುಗಿದ ಬಳಿಕವೂ ವಾಸ್ತವ್ಯ; ಇಬ್ಬರು ಕಾಂಗೋ ಪ್ರಜೆಗಳು ಅರೆಸ್ಟ್
ಬಂಧಿತರು

Follow us on

ಬೆಂಗಳೂರು: ಪಾಸ್​ಪೋರ್ಟ್ (Passport) ಅವಧಿ ಮುಗಿದ ಬಳಿಕವೂ ವಾಸ್ತವ್ಯ ಹೂಡಿದ್ದ ಇಬ್ಬರು ಕಾಂಗೋ ಪ್ರಜೆಗಳನ್ನ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಬಾಣಸವಾಡಿ ಪೊಲೀಸರು ಎನ್ಡಸಿ ದಿದಿಯೆರ್(26), ಬುಹೆಶೆ ಬುಹಾಗ್ವೇರ್(21) ಎಂಬುರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ನೆಲಮಂಗಲದ ವಿದೇಶಿಗರ ಪುನರ್ವಸತಿ ಕೇಂದ್ರಕ್ಕೆ ಶಿಫ್ಟ್ ಮಾಡಿದ್ದಾರೆ. ಜುಲೈ ತಿಂಗಳಿನಲ್ಲಿ ಅಕ್ರಮ ವಿದೇಶಿ ಪ್ರಜೆಗಳ ನೆಲೆ ಮೇಲೆ ಪೊಲೀಸರು ದಾಳಿ ನಡೆಸಿ, ಅಕ್ರಮ ವಾಸ್ತವ್ಯ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದವರನ್ನ ವಶಕ್ಕೆ ಪಡೆದಿದ್ದರು. ಎಫ್ಆರ್​ಆರ್​ಓ ವೆರಿಫಿಕೇಶನ್ ಬಳಿಕ ಪುನರ್ವಸತಿ ಕೇಂದ್ರಕ್ಕೆ ರವಾನೆ ಮಾಡಿದ್ದಾರೆ.

ಪೊಲೀಸ್ ಇನ್ಫಾರ್ಮರ್ನಿಂದಲೇ ಮಾದಕ ವಸ್ತು ಮಾರಾಟ ಪೊಲೀಸರಿಗೆ ಮಾಹಿತಿ ನೀಡುವವನೇ ಮಾದಕ ವಸ್ತು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಕೆ.ಜಿ.ಹಳ್ಳಿ ಪೊಲೀಸರು ಮಾಹಿತಿದಾರ ರವಿ ಎಂಬುವವರನ್ನು ಬಂಧಿಸಿದ್ದಾರೆ. ರವಿ ಸೇರಿದಂತೆ ಮೂವರನ್ನು ಬಂಧಿಸಿದ ಪೊಲೀಸರು, ಬಂಧಿತರಿಂದ 5 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.

ಗಾಂಜಾ ಮಾರುತ್ತಿದ್ದ ಮೂವರ ಬಂಧನ ಬೆಂಗಳೂರಿನಲ್ಲಿ ಗಾಂಜಾ ಮಾರುತ್ತಿದ್ದ ಮೂವರು ಬಂಧನಕ್ಕೊಳಗಾಗಿದ್ದಾರೆ. ಆರೋಪಿಗಳು ಗಾಂಜಾವನ್ನು ಕಾರಿನಲ್ಲಿಟ್ಟುಕೊಂಡು ಮಾರುತ್ತಿದ್ದರು. ಆರೋಪಿಗಳಾದ ಮುಸ್ತಫಾ, ಮಾರಪ್ಪ ಮತ್ತು ರಾಜಭಾಹು ಎಂಬುವವರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 2 ಕೆಜಿ 500 ಗ್ರಾಂ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ

Air India: ಕೇಂದ್ರ ಸಚಿವರಿದ್ದ ಏರ್ ಇಂಡಿಯಾ ವಿಮಾನಕ್ಕೆ ಡಿಕ್ಕಿ ಹೊಡೆದ ಪಕ್ಷಿ; ತಪ್ಪಿದ ಭಾರೀ ದುರಂತ

Skin Care: ಎಣ್ಣೆಯುಕ್ತ ಚರ್ಮ ಸಮಸ್ಯೆಯಿಂದ ಪರಿಹಾರ ಪಡೆಯಲು ಇಲ್ಲಿದೆ ಉಪಾಯ

(Two Congolese nationals have been arrested in Bangalore after the passport expired)

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada