Air India: ಕೇಂದ್ರ ಸಚಿವರಿದ್ದ ಏರ್ ಇಂಡಿಯಾ ವಿಮಾನಕ್ಕೆ ಡಿಕ್ಕಿ ಹೊಡೆದ ಪಕ್ಷಿ; ತಪ್ಪಿದ ಭಾರೀ ದುರಂತ

TV9 Digital Desk

| Edited By: Sushma Chakre

Updated on: Sep 14, 2021 | 1:50 PM

ಕೇಂದ್ರ ಸಚಿವ ಸಂಪುಟದ ಸಭೆಗೆ ತೆರಳಲು ದೆಹಲಿಗೆ ಹೊರಟಿದ್ದ ಕೇಂದ್ರ ಸರ್ಕಾರದ ರಾಜ್ಯ ಸಚಿವರಾದ ರೇಣುಕ ಸಿಂಗ್ ಕೂಡ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.

Air India: ಕೇಂದ್ರ ಸಚಿವರಿದ್ದ ಏರ್ ಇಂಡಿಯಾ ವಿಮಾನಕ್ಕೆ ಡಿಕ್ಕಿ ಹೊಡೆದ ಪಕ್ಷಿ; ತಪ್ಪಿದ ಭಾರೀ ದುರಂತ
ಏರ್ ಇಂಡಿಯಾ ವಿಮಾನ

ನವದೆಹಲಿ: ಛತ್ತೀಸ್​ಗಢದಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಟೇಕಾಫ್ ಆಗುವಾಗ ಪಕ್ಷಿಗೆ ಡಿಕ್ಕಿ ಹೊಡೆದ ಪರಿಣಾಮ ಮತ್ತೆ ಏರ್​ಪೋರ್ಟ್​ನಲ್ಲಿ ಲ್ಯಾಂಡ್ ಆಗಿದೆ. ಛತ್ತೀಸ್​ಗಢದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ರಾಯ್ಪುರದಲ್ಲಿ ವಿಮಾನ ನಿಲ್ದಾಣಕ್ಕೆ ವಾಪಾಸ್ ಬಂದಿರುವ ಏರ್ ಇಂಡಿಯಾ ವಿಮಾನ ಕ್ಯಾನ್ಸಲ್ ಆಗಿದೆ. ಈ ವಿಮಾನದಲ್ಲಿ ಕೇಂದ್ರ ಸಚಿವರಾದ ರೇಣುಕ ಸಿಂಗ್ ಕೂಡ ಇದ್ದರು.

ಕೇಂದ್ರ ಸಚಿವ ಸಂಪುಟದ ಸಭೆಗೆ ತೆರಳಲು ದೆಹಲಿಗೆ ಹೊರಟಿದ್ದ ಕೇಂದ್ರ ಸರ್ಕಾರದ ರಾಜ್ಯ ಸಚಿವರಾದ ರೇಣುಕ ಸಿಂಗ್ ಕೂಡ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಏರ್ ಇಂಡಿಯಾ ವಿಮಾನದ ರೆಕ್ಕೆಗೆ ಪಕ್ಷಿ ಡಿಕ್ಕಿ ಹೊಡೆದ ಪರಿಣಾಮ ಬೇರೆ ವಿಮಾನದಲ್ಲಿ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಟೇಕಾಫ್ ವೇಳೆಯಲ್ಲೇ ಪಕ್ಷಿ ಡಿಕ್ಕಿ ಹೊಡೆದಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ತಕ್ಷಣ ವಿಮಾನವನ್ನು ನಿಯಂತ್ರಣ ಮಾಡಿದ ಪೈಲಟ್ ರನ್​ವೇಯಲ್ಲೇ ವಿಮಾನವನ್ನು ಲ್ಯಾಂಡ್ ಮಾಡಿದ್ದಾರೆ.

ಈ ಏರ್ ಇಂಡಿಯಾ ವಿಮಾನದಲ್ಲಿ 179 ಪ್ರಯಾಣಿಕರಿದ್ದರು. ಇಂದು ಬೆಳಗ್ಗೆ 10.5ಕ್ಕೆ ಛತ್ತೀಸ್​ಗಢದ ರಾಯ್ಪುರ ಏರ್​ಪೋರ್ಟ್​ನಿಂದ ದೆಹಲಿಗೆ ಹೊರಟಿದ್ದ ವಿಮಾನಕ್ಕೆ ಪಕ್ಷಿ ಡಿಕ್ಕಿ ಹೊಡೆದಿದ್ದರಿಂದ ಟೇಕಾಫ್ ಆಗುತ್ತಿದ್ದ ವಿಮಾನವನ್ನು ಮತ್ತೆ ರನ್​ವೇಯಿಂದ ವಾಪಾಸ್ ಕರೆತರಲಾಗಿತ್ತು. ವಿಮಾನಕ್ಕೆ ಡಿಕ್ಕಿ ಹೊಡೆದ ಪಕ್ಷಿ ಸತ್ತು ಬಿದ್ದಿದೆ. ವಿಮಾನಕ್ಕೆ ಯಾವ ತೊಂದರೆಗಳಾಗಿವೆ, ಏನಾದರೂ ಡ್ಯಾಮೇಜ್ ಆಗಿದೆಯಾ? ಎಂದು ಏರ್ ಇಂಡಿಯಾ ಸಿಬ್ಬಂದಿ ಪರಿಶೀಲಿಸುತ್ತಿರುವುದರಿಂದ ವಿಮಾನ ಸಂಚಾರವನ್ನು ರದ್ದುಗೊಳಿಸಲಾಯಿತು.

ಇದನ್ನೂ ಓದಿ: Air India Flight: ವಿಮಾನದ ಕಿಟಕಿಯಲ್ಲಿ ಬಿರುಕು; ಸೌದಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್​ಪ್ರೆಸ್​ ತುರ್ತು ಭೂಸ್ಪರ್ಶ

Air India data breach: ಏರ್​ಇಂಡಿಯಾದ 45 ಲಕ್ಷ ಪ್ರಯಾಣಿಕರ ಮಾಹಿತಿ ಸೋರಿಕೆ ಆಗಿದ್ದು ಹೇಗೆ?

(Delhi-Bound Air India Flight Cancels after Bird-Hit before Takeoff from Raipur Airport)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada