Skin Care: ಎಣ್ಣೆಯುಕ್ತ ಚರ್ಮ ಸಮಸ್ಯೆಯಿಂದ ಪರಿಹಾರ ಪಡೆಯಲು ಇಲ್ಲಿದೆ ಉಪಾಯ

TV9 Digital Desk

| Edited By: shruti hegde

Updated on: Sep 14, 2021 | 1:47 PM

ಮುಖದಲ್ಲಿ ಮೊಡವೆಗಳ ರಾಶಿ ಜತೆಗೆ ಮುಖ ಯಾವಾಗಲೂ ಬೇಸತ್ತಂತೆ ಅನಿಸುತ್ತಿದೆ ಎಂಬ ಚಿಂತೆ ಕಾಡುತ್ತಿರಬಹುದು. ಹಾಗಿರುವಾಗ ಇಲ್ಲಿದೆ ಸುಲಭ ಉಪಾಯ. ಇವುಗಳನ್ನು ನೀವು ಪಾಲಿಸುವ ಮೂಲಕ ನಿಮ್ಮ ಸಮಸ್ಯೆಗೆ ಬಹುಬೇಗ ಪರಿಹಾರ ಕಂಡುಕೊಳ್ಳಬಹುದಾಗಿದೆ.

Skin Care: ಎಣ್ಣೆಯುಕ್ತ ಚರ್ಮ ಸಮಸ್ಯೆಯಿಂದ ಪರಿಹಾರ ಪಡೆಯಲು ಇಲ್ಲಿದೆ ಉಪಾಯ
ಸಾಂದರ್ಭಿಕ ಚಿತ್ರ

ಯಾವಾಗಲೂ ಜಿಡ್ಡಿನ ಚರ್ಮವನ್ನು ಹೊಂದಿದ್ದು ಬೇಸತ್ತಿದ್ದೀರಾ? ನೈಸರ್ಗಿಕವಾಗಿ ಗುಣಪಡಿಸುವ ಮಾರ್ಗಗಳನ್ನು ಹುಡುಕುತ್ತಿದ್ದೀರಾ? ಈಗ ಚಿಂತಿಸಬೇಕಾಗಿಲ್ಲ. ಏಕೆಂದರೆ ನಿಮ್ಮ ಮನೆಯಲ್ಲಿಯೇ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ನಿಮ್ಮ ಎಣ್ಣೆಯುಕ್ತ ಚರ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಮುಖ ಸುಂದರವಾಗಿ ಕಾಣಿಸಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಎಣ್ಣೆಯುಕ್ತ ಚರ್ಮದಿಂದಾಗಿ ಮುಖದಲ್ಲಿ ಮೊಡವೆಗಳ ರಾಶಿ ಜತೆಗೆ ಮುಖ ಯಾವಾಗಲೂ ಬೇಸತ್ತಂತೆ ಅನಿಸುತ್ತಿದೆ ಎಂಬ ಚಿಂತೆ ಕಾಡುತ್ತಿರಬಹುದು. ಹಾಗಿರುವಾಗ ಇಲ್ಲಿದೆ ಸುಲಭ ಉಪಾಯ. ಇವುಗಳನ್ನು ನೀವು ಪಾಲಿಸುವ ಮೂಲಕ ನಿಮ್ಮ ಸಮಸ್ಯೆಗೆ ಬಹುಬೇಗ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಎಣ್ಣೆಯುಕ್ತ ಚರ್ಮ ಸಮಸ್ಯೆ ಪರಿಹಾರಕ್ಕಾಗಿ ಇವುಗಳನ್ನು ಬಳಸಿ ಜೇನುತುಪ್ಪ ಜೇನುತುಪ್ಪ ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದೆ. ಎಣ್ಣೆಯುಕ್ತ ಚರ್ಮ ಹೊಂದಿರುವ ಜನರಿಗೆ ಇದು ಅತ್ಯುತ್ತಮ ಪರಿಹಾರ ನೀಡುತ್ತದೆ. ಬ್ಯಾಕ್ಟೀರಿಯಾ ವಿರೋಧಿ ಗುಣ ಮತ್ತು ನಂಜುನಿರೋಧಕ ಗುಣಗಳನ್ನು ಜೇನುತುಪ್ಪ ಹೊಂದಿದೆ. ನೈಸರ್ಗಿಕವಾಗಿ ಸಿಗುವ ಜೇನುತುಪ್ಪವನ್ನು ನಿಮ್ಮ ಮುಖಕ್ಕೆ ತೆಳುವಾಗಿ ಹಚ್ಚಿ. 20 ನಿಮಿಷದ ನಂತರ ಮುಖ ತೊಳೆಯಿರಿ. ವಾರಕ್ಕೆ 2 ರಿಂದ 3 ಬಾರಿಯಾದರೂ ಈ ವಿಧಾವನ್ನು ಅನುಸರಿಸಿ.

ನಿಂಬೆ ಮತ್ತು ಮೊಟ್ಟೆ ಮೊಟ್ಟೆಯ ಬಿಳಿ ಭಾಗ ಮತ್ತು ನಿಂಬೆ ರಸದಿಂದ ಚರ್ಮದ ಮೇಲಿನ ರಂಧ್ರ ಹಾಗೂ ಎಣ್ಣೆಯುಕ್ತ ಚರ್ಮ ಜತೆಗೆ ಮೊಡವೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಮೊಟ್ಟೆಯ ಬಿಳಿಭಾಗವನ್ನು ಒಂದು ಚಮಚ ನಿಂಬೆ ರಸದೊಂದಿಗೆ ವಿಶ್ರಣ ಮಾಡಿ ನಿಮ್ಮ ಮುಖಕ್ಕೆ ಹಚ್ಚಿ. ಒಣಗಿದ ನಂತರ ಅದನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಬಾದಾಮಿ ಹಸಿ ಬಾದಾಮಿಯನ್ನು ಚೆನ್ನಾಗಿ ರುಬ್ಬಿಕೊಳ್ಳಿ. 3 ಚಮಚದಷ್ಟು ತೆಗೆದುಕೊಳ್ಳಿ. ಅದಕ್ಕೆ ಎರಡು ಚಮಚ ಜೇನುತುಪ್ಪ ಸೇರಿಸಿ. ನಿಧಾನವಾಗಿ ನಿಮ್ಮ ಮುಖಕ್ಕೆ ತಯಾರಿಸಿದ ಪೇಸ್ಟ್ಅನ್ನು ಹಚ್ಚಿ. 10 ರಿಂದ 15 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.

ಇದನ್ನೂ ಓದಿ:

Health Tips: ರೋಗಗಳಿಂದ ದೂರವಿರಲು ಈ ಗಿಡಮೂಲಿಕೆಗಳನ್ನು ನೀವು ಸೇವಿಸುವ ಆಹಾರದಲ್ಲಿ ಸೇರಿಸಿ

Health Tips: ರಾತ್ರಿ ಎಡಭಾಗಕ್ಕೆ ತಿರುಗಿ ಮಲಗುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ಗಮನಿಸಿ

(Tips for oily skin problem check in Kannada )

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada