ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಮ್ಯಾಗಿ ಮಿಲ್ಕ್ ಶೇಕ್ ರೆಸಿಪಿ; ಈ ಕಣ್ಣಲ್ಲಿ ಏನೇನು ನೋಡಬೇಕು ಎಂದ ನೆಟ್ಟಿಗರು
ಮ್ಯಾಗಿ ಮಾಡುವುದು ಹೇಗೆ ಮತ್ತು ಅದು ಎಷ್ಟು ಸರಳವಾದ ತಿನಿಸು ಎಂದು ಎಲ್ಲರಿಗೂ ತಿಳಿದಿದೆ. ಆದರೆ ಇದೀಗ ಮ್ಯಾಗಿ ಮಿಲ್ಕ್ ಶೇಕ್ ಮಾಡುವುದು ಹೇಗೆ ಎಂಬ ಕುತೂಹಲ ಎಲ್ಲರನ್ನೂ ಆವರಿಸಿದೆ. ಇದಕ್ಕೆ ಕಾರಣ ಮಿಲ್ಕ್ ಶೇಕ್ ಮೇಲೆ ಮ್ಯಾಗಿ ಅದ್ದಿದ ಚಿತ್ರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದೇ ಆಗಿದೆ.
ಭೋಜನಪ್ರಿಯರು ದಿನಕ್ಕೊಂದು ಅಡುಗೆ ಮಾಡಿ ಸವಿಯುವುದಕ್ಕೆ ಹೆಚ್ಚು ಇಷ್ಟಪಡುತ್ತಾರೆ. ಆದರೆ ಈ ಆಹಾರ ಪದಾರ್ಥಗಳ ವೈವಿಧ್ಯತೆಗಳ ಜತೆಗೆ ಸಿದ್ಧತೆ ಕೂಡ ಹೆಚ್ಚು ಆಕರ್ಷಣೀಯವಾಗಿರುವಂತೆ ಮಾಡುವುದು ಇತ್ತೀಚೆಗೆ ಟ್ರೆಂಡ್ ಆಗಿ ಬದಲಾಗಿದೆ. ಅದಕ್ಕೆ ಪುಷ್ಠಿ ನೀಡುವಂತೆ ಸಾಮಾಜಿಕ ಜಾಲತಾಣಗಳು ಕೂಡ ಈಗ ಅಡುಗೆ ಮನೆಯ ಚಿತ್ರಣವನ್ನು ನೀಡುವ ಮಾರ್ಗವಾಗಿದೆ. ಸುಲಭವಾಗಿ ಮತ್ತು ಕಡಿಮೆ ಪದಾರ್ಥಗಳನ್ನು ಹಾಕಿ ಅಡುಗೆ ಮಾಡುವುದು ಮತ್ತು ಅವುಗಳನ್ನು ಸಾಮಾಜಿಕ ಜಾಲತಾಣಗಳಾದ ಟ್ವೀಟರ್, ಫೇಸ್ಬುಕ್, ಇನ್ಸ್ಟಾಗ್ರಾಮ್ಗಳಲ್ಲಿ ಪೋಸ್ಟ್ ಮಾಡುವುದು ಒಂದು ರೀತಿಯಾ ದಿನಚರಿಯಾಗಿದೆ. ಹೀಗೆ ವೈವಿಧ್ಯ ಶೈಲಿಯಲ್ಲಿ ತಯಾರಿಸಿದ ರೆಸಿಪಿಯೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಮ್ಯಾಗಿ ಮಿಲ್ಕ್ ಶೇಕ್ (maggi milkshake) ಮಾಡುವ ವಿಧಾನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಅಡುಗೆ ವಿಧಾನದ ಬಗ್ಗೆ ಹೆಚ್ಚು ಕುತೂಹಲ ವ್ಯಕ್ತಪಡಿಸಿದ್ದಾರೆ.
ಮ್ಯಾಗಿ ಮಾಡುವುದು ಹೇಗೆ ಮತ್ತು ಅದು ಎಷ್ಟು ಸರಳವಾದ ತಿನಿಸು ಎಂದು ಎಲ್ಲರಿಗೂ ತಿಳಿದಿದೆ. ಆದರೆ ಇದೀಗ ಮ್ಯಾಗಿ ಮಿಲ್ಕ್ ಶೇಕ್ ಮಾಡುವುದು ಹೇಗೆ ಎಂಬ ಕುತೂಹಲ ಎಲ್ಲರನ್ನೂ ಆವರಿಸಿದೆ. ಇದಕ್ಕೆ ಕಾರಣ ಮಿಲ್ಕ್ ಶೇಕ್ ಮೇಲೆ ಮ್ಯಾಗಿ ಅದ್ದಿದ ಚಿತ್ರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದೇ ಆಗಿದೆ. ರೆಡ್ಡಿಟ್ ಬಳಕೆದಾರರು ಮ್ಯಾಗಿ ಮಿಲ್ಕ್ ಶೇಕ್‌ನ ಫೋಟೊವನ್ನು ಪೊಸ್ಟ್ ಮಾಡಿದ್ದಾರೆ. ಇದು 1.2 ಸಾವಿರ ಲೈಕ್ ಮತ್ತು 200 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ.
ಇನ್ನು ಮ್ಯಾಗಿ ಮಿಲ್ಕ್ ಶೇಕ್ ಫೋಟೊವನ್ನು ಕೆಲವರು ರೀ ಪೋಸ್ಟ್ ಮಾಡಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನು ಕೆಲವರು ಈ ಪೊಸ್ಟ್ಗೆ ವ್ಯಂಗ್ಯವಾಗಿ ಕಮೆಂಟ್ ಮಾಡಿದ್ದು, ಶಾಪಗ್ರಸ್ತ ಚಿತ್ರ, ನಾವು ನಿಜವಾಗಿಯೂ ರಾಕ್ಷಸರು, ಡಸ್ಟ್ಪಿನ್, ಈ ಕಣ್ಣಿನಿಂದ ಇದನ್ನು ನೋಡಲಾರೆ ಎಂದು ಬರೆದುಕೊಂಡಿದ್ದಾರೆ.
Maggi milkshake. Everyday we stray further from God’s light.
Via @YearOfRat pic.twitter.com/Me0VsOayJs
— Angad Singh Chowdhry (@angadc) September 11, 2021
ಮ್ಯಾಗಿ ಲಡ್ಡು ಮತ್ತು ಮ್ಯಾಗಿ ಐಸ್ ಕ್ರೀಮ್ ತಿಂದಿದ್ದೀರಾ? ಹಲವು ಜನರು ಮ್ಯಾಗಿಯಲ್ಲಿ ನಾನಾ ರೀತಿಯ ಪ್ರಯೋಗಗಳನ್ನು ಮಾಡಲು ಇಷ್ಟಪಡುತ್ತಾರೆ. ಈ ಹಿಂದೆ ಬೆಲ್ಲ ಮತ್ತು ಗೋಡಂಬಿಯಿಂದ ಮಾಡಿದ ಮ್ಯಾಗಿ ಲಡ್ಡು ರೆಸಿಪಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗ ಮ್ಯಾಗಿ ಐಸ್ ಕ್ರೀಮ್, ಮ್ಯಾಗಿ ಬರ್ಗರ್, ಮ್ಯಾಗಿ ಏಡಿ ಕರಿ ಮಾಡುವುದನ್ನು ಭೋಜನಪ್ರಿಯರು ಪ್ರಯೋಗ ಮಾಡಿ ಸವಿದಿದ್ದಾರೆ.
View this post on Instagram
ಇದನ್ನೂ ಓದಿ: ಕಿಚ್ಚ ಸುದೀಪ್ ಮಾಡುವ ಅಡುಗೆ ಏಕೆ ಟೇಸ್ಟ್ ಆಗಿರುತ್ತದೆ? ಕೊನೆಗೂ ಸಿಕ್ತು ಉತ್ತರ
ಭಾನುವಾರದ ಸ್ಪೆಷಲ್ ಚಿಕನ್ ಚಿಲ್ಲಿ ಪೆಪ್ಪರ್: ಸರಳ ವಿಧಾನದಲ್ಲಿ ಇಂದೇ ಮಾಡಿ ಸವಿಯಿರಿ
Published On - 11:50 am, Tue, 14 September 21