ನೀವು ಫಿಟ್ ಆಗಿರಬೇಕಾದರೆ ಪ್ರತಿನಿತ್ಯ ಎಷ್ಟು ಹೆಜ್ಜೆ ನಡೆಯಬೇಕು ಗೊತ್ತಾ? – ಅಧ್ಯಯನ

ಅಧ್ಯಯನವು ಹೇಳುವಂತೆ, ದಿನಕ್ಕೆ ಕನಿಷ್ಠ 7,000 ಹೆಜ್ಜೆಗಳನ್ನು ನಡೆಯುವುದರಿಂದ ಮಧ್ಯವಯಸ್ಕರ ಅಕಾಲಿಕ ಮರಣದ ಅಪಾಯವನ್ನು ಶೇ. 50 ರಿಂದ 70 ರಷ್ಟು ಕಡಿಮೆ ಮಾಡುತ್ತದೆ ಎಂಬುದು ತಿಳಿದು ಬಂದಿದೆ.

ನೀವು ಫಿಟ್ ಆಗಿರಬೇಕಾದರೆ ಪ್ರತಿನಿತ್ಯ ಎಷ್ಟು ಹೆಜ್ಜೆ ನಡೆಯಬೇಕು ಗೊತ್ತಾ? – ಅಧ್ಯಯನ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Sep 14, 2021 | 8:26 AM

ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವತ್ತ ಜನರು ಹೆಚ್ಚು ಗಮನ ನೀಡುತ್ತಿದ್ದಾರೆ. ನೋಡಲು ಸ್ಲಿಮ್ಆಗಿ ಜತೆಗೆ ಫಿಟ್ಆಗಿ ಕಾಣಿಸಬೇಕು ಎಂಬುದು ಎಲ್ಲರ ಆಸೆ. ಹಾಗಾಗಿಯೇ ಪ್ರತಿನಿತ್ಯ ನಡೆಯುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಂಡಿರುತ್ತಾರೆ. ಹಾಗಾದರೆ ಪ್ರತಿನಿತ್ಯ ಎಷ್ಟು ಹೆಜ್ಜೆಗಳನ್ನು ನಡೆದರೆ ದೇಹವು ಫಿಟ್ ಆಗಿರುತ್ತದೆ? ಎಷ್ಟು ಹೆಜ್ಜೆ ನಡಿಗೆಯಿಂದ ಸದೃಢರಾಗಿರಬಹುದು ಎಂಬೆಲ್ಲಾ ಪ್ರಶ್ನೆಗಳಿಗೆ ಹೊಸ ಅಧ್ಯನವೊಂದು ಉತ್ತರ ನೀಡಿದೆ.

ಜಮಾ ನೆಟ್ವರ್ಕ್ ಓಪನ್ ಎಂಬ ಜರ್ನಲ್​ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ. ಅಧ್ಯಯನವು ಹೇಳುವಂತೆ, ದಿನಕ್ಕೆ ಕನಿಷ್ಠ 7,000 ಹೆಜ್ಜೆಗಳನ್ನು ನಡೆಯುವುದರಿಂದ ಮಧ್ಯವಯಸ್ಕರ ಅಕಾಲಿಕ ಮರಣದ ಅಪಾಯವನ್ನು ಶೇ. 50 ರಿಂದ 70 ರಷ್ಟು ಕಡಿಮೆ ಮಾಡುತ್ತದೆ ಎಂಬುದು ತಿಳಿದು ಬಂದಿದೆ.

ದಿನಕ್ಕೆ 10,000 ಕ್ಕೂ ಹೆಚ್ಚಿನ ಹೆಜ್ಜೆಗಳನ್ನು ನಡೆಯುವುದರಿಂದ ಇನ್ನಷ್ಟು ಅಪಾಯವನ್ನು ಕಡಿಮೆ ಮಾಡಬಹುದು ಎಂಬ ನಿರೀಕ್ಷೆ ತಪ್ಪು ಎಂದು ಮ್ಯಾಸಚೂಸೆಟ್ಸ್ ಅಮ್ಹೆರ್ಟ್ಸ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗತಜ್ಞ ಹಾಗೂ ಲೇಖಕಿ ಅಮಂಡಾ ಪಲುಚ್ ಹೇಳಿದ್ದಾರೆ.

ಸಂಶೋಧನೆಗಾಗಿ ಸುಮಾರು 2,200 ಜನರನ್ನು ಕರೆತರಲಾಯಿತು. ಅವರು 38 ರಿಂದ 50 ವರ್ಷ ವಿಯೋಮಾನದವರಾಗಿದ್ದರು. 2005 ರಿಂದ ಪ್ರಾರಂಭಗೊಂಡ ಅಧ್ಯಯನ 11 ವರ್ಷಗಳ ಕಾಲ ನಡೆಯಿತು. ಸಂಧೋಶನೆಯಲ್ಲಿ ಪಾಲ್ಗೊಂಡ 2,200 ಜನರನ್ನು ಗಮನಿಸುವ ಮೂಲಕ ಅಧ್ಯಯನ ನಡೆಸಲಾಯಿತು. ಸಂಶೋಧನೆಗೆ ಪಾಲ್ಗೊಂಡವರನ್ನು ಮೂರು ಹಂತಗಳಲ್ಲಿ ವಿಂಗಡಿಸಲಾಯಿತು. ಕಡಿಮೆ ಹಂತ ( ದಿನಕ್ಕೆ 7,000 ಕ್ಕಿಂತ ಕಡಿಮೆ), ಮಧ್ಯಮ ಹಂತ ( 7,000 ರಿಂದ 9,999ರ ನಡುವೆ) ಹಾಗೂ ಹೆಚ್ಚಿನ ಹಂತ ( 10,000 ಕ್ಕಿಂತ ಹೆಚ್ಚು).

ನೀವು  7,000 ಮತ್ತು 10,000 ಹಂತಗಳ ನಡುವಿನ ಹಂತದಲ್ಲಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆದರೆ 10,000 ಕ್ಕಿಂತಲೂ ಹೆಚ್ಚಿನ ಹೆಜ್ಜೆಗಳಿಂದ ಪ್ರಯೋಜನಗಳು ಕಾಣಲಿಲ್ಲ ಎಂದು ಪಲುಚ್ ಹೇಳಿದರು.

ಇದನ್ನೂ ಓದಿ:

Walking Benefits: ಮನೆಯಂಗಳದಲ್ಲೇ ವಾಕಿಂಗ್​ ಮಾಡಿ; ಅನಗತ್ಯ ಚಿಂತೆಯಿಂದ ದೂರವಿರಿ

Walking After Dinner: ರಾತ್ರಿ ಊಟದ ನಂತರ ವಾಕಿಂಗ್ ಮಾಡುವ ಅಭ್ಯಾಸ ಇರುವವರು ಈ ಬಗ್ಗೆ ಗಮನಹರಿಸಿ

(Haw many steps walk every day for keep yourself for fit new study)

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ