ಡಬಲ್ ಚಿನ್ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಹೆಚ್ಚುವರಿ ಕೊಬ್ಬು ನಿವಾರಣೆಗೆ ಇಲ್ಲಿದೆ ಸರಳ ಸಲಹೆಗಳು

TV9 Digital Desk

| Edited By: shruti hegde

Updated on: Sep 14, 2021 | 1:00 PM

Double Chin: ಜನರು ಹೆಚ್ಚು ಫಿಟ್ ಆಗಿದ್ದು, ಸೌಂದರ್ಯವನ್ನು ಕಾಪಾಡಿಕೊಳ್ಳಲು ಹೆಚ್ಚು ಬಯಸುತ್ತಾರೆ. ಹೆಚ್ಚುವರು ಕ್ಯಾಲೊರಿ ಸೇವನೆಯಿಂದಾಗಿ ದೇಹದಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗುವುದು. ಡಬಲ್​ ಚಿನ್​ ಸಮಸ್ಯೆ ಕಾಡುತ್ತಿದ್ದರೆ ಪರಿಹಾರಕ್ಕಾಗಿ ಇಲ್ಲಿದೆ ಸರಳ ವಿಧಾನ.

ಡಬಲ್ ಚಿನ್ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಹೆಚ್ಚುವರಿ ಕೊಬ್ಬು ನಿವಾರಣೆಗೆ ಇಲ್ಲಿದೆ ಸರಳ ಸಲಹೆಗಳು
ಸಾಂದರ್ಭಿಕ ಚಿತ್ರ

ಇತ್ತೀಚಿನ ಜನರು ಹೆಚ್ಚು ಡಬಲ್ ಚಿನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೇಹದ ಹೆಚ್ಚುವರಿ ಕೊಬ್ಬಿನಿಂದ ಗಲ್ಲ ಊದಿಕೊಂಡಿರುವಂತೆ ಅನಿಸುತ್ತದೆ. ಎರಡು ಸ್ಟೆಪ್​ನಲ್ಲಿ ಗಲ್ಲವಿರುವಂತೆ ಭಾಸವಾಗುತ್ತದೆ. ಇದನ್ನು ಎಡದು ಗಲ್ಲದ ತೊಂದರೆ ಎಂದೂ ಕರೆಯುತ್ತಾರೆ. ಡಬಲ್ ಚಿನ್ ತೊಂದರೆಯಿಂದಾಗಿ ಹೆಚ್ಚಿನ ತೂಕ, ವಯಸ್ಸಿನ ಮಿತಿ ಎಲ್ಲವೂ ಬದಲಾದಂತೆ ಅನಿಸುವುದು ಸಾಮಾನ್ಯ. ಹೀಗಾಗಿ ಈ ಸಮಸ್ಯೆ ಪರಿಹಾರಕ್ಕಾಗಿ ಕೆಲವು ವ್ಯಾಯಾಮ ಭಂಗಿಗಳು ಈ ಕೆಳಗಿನಂತಿವೆ.

ಜನರು ಹೆಚ್ಚು ಫಿಟ್ ಆಗಿದ್ದು, ಸೌಂದರ್ಯವನ್ನು ಕಾಪಾಡಿಕೊಳ್ಳಲು ಹೆಚ್ಚು ಬಯಸುತ್ತಾರೆ. ಹೆಚ್ಚುವರು ಕ್ಯಾಲೊರಿ ಸೇವನೆಯಿಂದಾಗಿ ದೇಹದಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗುವುದು. ಇದರಿಂದ ಫಿಟ್​ನೆಸ್​ ಹಾಳಾಗುತ್ತದೆ. ಬೇಕರಿ ತಿಂಡಿಗಳು, ಎಣ್ಣೆಯುಕ್ತ ಪದಾರ್ಥ ಸೇವನೆಯಿಂದ ಹೆಚ್ಚುವರಿ ಕೊಬ್ಬಿನ ಸಮಸ್ಯೆ ಕಾಡುತ್ತದೆ. ಇದರಿಂದ ಗಲ್ಲದ ಭಾಗದಲ್ಲಿ ಊದಿಕೊಂಡಂತೆ ಭಾಸವಾಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿಯಂತ್ರಿಸಲು ಸರಳ ಮಾರ್ಗ ಇಲ್ಲಿದೆ.

ಗಲ್ಲವನ್ನು ತಿರುಗಿಸುವುದು ಈ ವ್ಯಾಯಾಮಕ್ಕೆ ನಿಮ್ಮ ಗಲ್ಲವನ್ನು ಬೇರೆ ಬೇರೆ ಕಡೆಗಳಲ್ಲಿ ತಿರುಗಿಸಿ. ನಿಮ್ಮ ಗಲ್ಲವನ್ನು ಹಿಂದಕ್ಕೆ ಚಾಚುವ ಮೂಲಕ ಈ ವ್ಯಾಯಾಮವನ್ನು ಪ್ರಾರಂಭಿಸಿ. ನಂತರ ನಿಮ್ಮ ಎಡಕ್ಕೆ ಗಲ್ಲವನ್ನು ತಿರುಗಿಸಿ ನಂತರ ಮುಂದಕ್ಕೆ ಬಾಗಿಸಬೇಕು. ಇದಾದ ಬಳಿಕ ಬಲಕ್ಕೆ ಚಾಚುವ ಮೂಲಕ ಗಲ್ಲವನ್ನು ತಿರುಗಿಸಿ. ಇಂದು ಹಂತದ ಬಳಿಕ ಪುನಃ ಪರ್ಯಾಯ ದಿಕ್ಕಿನಿಂದ ಪುನಃ ವ್ಯಾಯಾಮವನ್ನು ಪ್ರಾರಂಭಿಸಿ.

ಮೂಗಿನ ಸ್ಪರ್ಶ ಆರಾಮದಾಯಕ ಸ್ಥಳದಲ್ಲಿ ಕುಳಿತುಕೊಳ್ಳಿ ನಿಮ್ಮ ಬಾಯಿ ತೆರೆಯಿರಿ ಮತ್ತು ನಾಲಿಗೆಯನ್ನು ಹೊರಚಾಚಿ. ನಿಮ್ಮ ನಾಲಿಗೆಯನ್ನು ಸಾಧ್ಯಯವಾದಷ್ಟು ವಿಸ್ತರಿಸಿ. ಈಗ ನಿಮ್ಮ ಚಾಚಿದ ನಾಲಿಗೆಯನ್ನು ಮೇಲಕ್ಕೆ ಸರಿಸಿ ಮತ್ತು ಮೂಗನ್ನು ಸ್ಪರ್ಶಿಸಲು ಪ್ರಯತ್ನಪಡಿ. ಕನಿಷ್ಠ 5 ಸೆಕೆಂಡುಗಳ ಕಾಲ ಹಾಗೆಯೇ ಇರಿ ಮತ್ತು ವಿಶ್ರಾಂತಿ ಪಡೆಯಿರಿ. ಈ ಹಂತಗಳನ್ನು 10 ಬಾರಿ ಪುನರಾವರ್ತಿಸಿ.

ಅಗಲವಾದ ಬಾಯಿ ನಿಮ್ಮ ಬಾಯಿಯನ್ನು ಅಗಲವಾಗಿ ತೆರೆಯಿರಿ. ನಿಮ್ಮ ಮೂಗಿನ ಹೊಳ್ಳೆಯನ್ನು ಆದಷ್ಟು ಹಿಗ್ಗಿಸಿ. ನಿಮ್ಮ ಮುಖದ ಸ್ನಾಯುಗಳೆಲ್ಲಾ ಹಿಗ್ಗಿದಂತೆ ನಿಮಗೆ ಭಾಸವಾಗಬೇಕು. 5 ಸೆಕೆಂಡುಗಳ ಕಾಲ ಹಾಗೆಯೇ ಇದ್ದು, ನಂತರ ಬಾಯಿ ಮುಚ್ಚಿಕೊಂಡು ವಿಶ್ರಾಂತಿ ಪಡೆಯಿರಿ. ಈ ಹಂತಗಳನ್ನು ಕನಿಷ್ಠ 10 ಬಾರಿ ಪುನರಾವರ್ತಿಸಿ.

ಇದನ್ನೂ ಓದಿ:

Health Tips: ರಾತ್ರಿ ಎಡಭಾಗಕ್ಕೆ ತಿರುಗಿ ಮಲಗುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ಗಮನಿಸಿ

Health Tips: ಗೋಡಂಬಿ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

(Know about exercise to rid of extra fat and effective tips for double chin problem)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada