Health Tips: ಖಾಲಿ ಹೊಟ್ಟೆಯಲ್ಲಿ ಎಂದಿಗೂ ಈ ಐದು ಆಹಾರ ಪದಾರ್ಥಗಳನ್ನು ಸೇವಿಸಬೇಡಿ
ಕೆಲವು ಆಹಾರ ಪದಾರ್ಥಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ಹಾಗಿದ್ದರೆ ಯಾವೆಲ್ಲಾ ಆಹಾರಗಳನ್ನು ಸೇವಿಸಬಾರದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಕೊರೊನಾ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ, ಹೆಚ್ಚು ಆರೋಗ್ಯಯುತ ಆಹಾರವನ್ನು ತೆಗೆದುಕೊಳ್ಳಬೇಕು. ರೋಗನಿರೋಧಕ ಶಕ್ತಿಯನ್ನು ಈ ಸಂದರ್ಭದಲ್ಲಿ ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ. ಹೀಗಾಗಿ ಕೆಲವು ಪೋಷಕಾಂಶಯುತ ಪದಾರ್ಥಗಳನ್ನು ಸೇವಿಸಿ. ಆದರೆ ಆಹಾರ ಸೇವಿಸುವ ಕ್ರಮದ ಬಗ್ಗೆ ತಿಳಿಯುವುದು ಸೂಕ್ತ. ಏಕೆಂದರೆ ಕೆಲವು ಆಹಾರ ಪದಾರ್ಥಗಳನ್ನು ಖಾಲಿ ಹೊಟ್ಟೆಯಲ್ಲಿ(empty stomach )ಸೇವಿಸುವುದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ಹಾಗಿದ್ದರೆ ಯಾವೆಲ್ಲಾ ಆಹಾರಗಳನ್ನು ಸೇವಿಸಬಾರದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
1. ಟೋಮೆಟೊ ಟೋಮೆಟೊ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಖಾಲಿ ಹೊಟ್ಟೆಯಲ್ಲಿ ಹಸಿ ಟೋಮೆಟೊಗಳನ್ನು ತಿನ್ನುವುದು ಸೂಕ್ತವಲ್ಲ. ಹೊಟ್ಟೆಯಲ್ಲಿರುವ ಜಠರ ಮತ್ತು ಕರುಳಿನ ಆಮ್ಲದೊಂದಿಗೆ ಟೋಮೆಟೊದಲ್ಲಿರುವ ಹುಳಿ ಆಮ್ಲವು ನೋವು, ಗ್ಯಾಸ್ಟ್ರಿಕ್ ಮತ್ತು ಎದೆಯುರಿಯನ್ನು ಹೆಚ್ಚಿಸುತ್ತದೆ. ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುವ ಸಾಧ್ಯತೆಯೂ ಇದೆ.
2. ಸಿಹಿತಿಂಡಿಗಳು ನೀವು ಖಾಲಿ ಹೊಟ್ಟೆಯಲ್ಲಿರುವಾಗ ಕೆಲವು ಸಿಹಿತಿಂಡಿಗಳನ್ನು ತಿನ್ನುವುದು ನಿಮ್ಮ ಆರೋಗ್ಯಕ್ಕೆ ಕೆಟ್ಟದು. ಖಾಲಿ ಹೊಟ್ಟೆಯಲ್ಲಿ ಸಿಹಿತಿಂಡಿಗಳನ್ನು ತಿನ್ನುವುದು ದೇಹದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ದಿನಪೂರ್ತಿ ಸುಸ್ತಾದ ಭಾವನೆ ಉಂಟುಮಾಡುತ್ತದೆ
3. ಮದ್ಯಪಾನ ಖಾಲಿ ಹೊಟ್ಟೆಯಲ್ಲಿ ಮದ್ಯಪಾನ ಮಾಡುವುದು ಸೂಕ್ತವಲ್ಲ. ಇದು ವಿಷಕ್ಕಿಂತ ಹೆಚ್ಚು ಅಪಾಯಕಾರಿಯಾಗಿದೆ. ಖಾಲಿ ಹೊಟ್ಟೆಯಲ್ಲಿ ಮದ್ಯಪಾನ ಮಾಡುವುದು ವಿಪರೀತ ಮಾದಕತೆಗೆ ಕಾರಣವಾಗಬಹುದು. ಇದು ಕರುಳಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
4. ಹಾಲು ಮತ್ತು ಬಾಳೆಹಣ್ಣು ಕಡಿಮೆ ತೂಕ ಹೊಂದಿರುವ ಜನರು ಬಾಳೆಹಣ್ಣು ಮತ್ತು ಹಾಲಿನ ಮಿಶ್ರಣವನ್ನು ತಿನ್ನುತ್ತಾರೆ. ಅದಾಗ್ಯೂ, ಖಾಲಿ ಹೊಟ್ಟೆಯಲ್ಲಿ ಹಾಲು ಮತ್ತು ಬಾಳೆಹಣ್ಣು ತಿನ್ನುವುದರಿಂದ ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ಅಸಿಡಿಟಿ ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ ಈ ಆಹಾರ ಪದಾರ್ಥಗಳನ್ನು ಸೇವಿಸಿದ ನಂತರ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಾದರೆ ವೈದ್ಯರನ್ನು ಸಂಪರ್ಕಿಸಿ.
5. ಗೆಣಸು ಗೆಣಸು ಆರೋಗ್ಯಕ್ಕೆ ಒಳ್ಳೆಯದು. ಆದರೆ ಇವುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ಇದು ದೇಹಕ್ಕೆ ಹಾನಿ ಮಾಡುತ್ತದೆ. ಇದರಲ್ಲಿರುವ ಟ್ಯಾನಿನ್ ಮತ್ತು ಪೆಕ್ಟಿನ್ ಗ್ಯಾಸ್ಟ್ರಿಕ್ ಮತ್ತು ಆಸಿಡ್ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದಲ್ಲದೇ ಇದು ಎದೆಯುರಿ ಮತ್ತು ಗ್ಯಾಸ್ ಸಮಸ್ಯೆಗಳನ್ನು ಉಂಟುಮಾಡಬಹುದು.
ಇದನ್ನೂ ಓದಿ: Miracle Plant: ಕಾಡು ಬಸಳೆಯ ಆರೋಗ್ಯಯುತ ಪ್ರಯೋಜನಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು
Health Tips: ಸೂರ್ಯ ನಮಸ್ಕಾರದ ಜತೆಗೆ ಈ 5 ವ್ಯಾಯಾಮ; ಆರೋಗ್ಯಯುತ ಜೀವನಕ್ಕಾಗಿ ಈ ಅಭ್ಯಾಸ ಮುಂದುವರಿಸಿ